ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking: ರೈತ ಮುಖಂಡ ರಾಕೇಶ್ ಟಿಕಾಯಿತ್ ಮೇಲೆ ಕಪ್ಪು ಮಸಿ

|
Google Oneindia Kannada News

ಬೆಂಗಳೂರು, ಮೇ 30: ರೈತ ಮುಖಂಡ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎರಚಿದ ಘಟನೆ ಇಂದು ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ "ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ"ಯಲ್ಲಿ ಭಾಗಿಯಾಗಿದ್ದ ರಾಕೇಶ್ ಟಿಕಾಯತ್ ಮೇಲೆ ಕಪ್ಪು ಮಸಿ ಎಸೆಯಲಾಗಿದೆ. ಕರ್ನಾಟಕ ರೈತ ಮುಖಂಡ ಕೆ.ಚಂದ್ರಶೇಖರ್ ಬೆಂಬಲಿಗರಿಂದ ರೈತ ಮುಖಂಡರಾದ ರಾಕೇಶ್ ಟಿಕಾಯತ್, ಯುಧ್ವೀರ್ ಸಿಂಗ್ ಮೇಲೆ ಕಪ್ಪು ಬಣ್ಣ ಎರಚಲಾಗಿದೆ.

ಇದಲ್ಲದೆ ಸ್ಥಳದಲ್ಲಿ ಜನರು ಒಬ್ಬರ ಮೇಲೆ ಒಬ್ಬರು ಕುರ್ಚಿಗಳನ್ನು ಎಸೆಯುವ ದೃಶ್ಯಗಳು ಕಂಡು ಬಂದಿವೆ. ಮಾಧ್ಯಮಗಳೊಂದಿಗೆ ಮಾತನಾಡಿದ ಟಿಕಾಯತ್, ಸ್ಥಳೀಯ ಪೊಲೀಸರ ಮೇಲೆ ಜವಾಬ್ದಾರಿಯನ್ನು ಹೊರಿಸಿದ್ದಾರೆ. ಜೊತೆಗೆ ಯಾವುದೇ ಭದ್ರತೆಯನ್ನು ನೀಡಲಾಗಿಲ್ಲ ಎಂದು ಆರೋಪಿಸಿದ್ದಾರೆ. ಈ ಘಟನೆಗೆ ಕರ್ನಾಟಕ ಸರ್ಕಾರದ ಬೆಂಬಲವಿದೆ ಎಂದು ಆರೋಪಿಸಿದ್ದಾರೆ.

ಇಂದು ಬೆಂಗಳೂರಿನ ಗಾಂಧಿ ಭವನದಲ್ಲಿ ದಿಲ್ಲಿಯ ನಾಯಕರಾದ ರಾಕೇಶ್ ಟಿಕಾಯತ್, ಯುದುವೀರ್ ಸಿಂಗ್, ತಮಿಳುನಾಡಿನ ನಲ್ಲಗೌಂಡರ್ ರಾಜ್ಯದ ಪ್ರಮುಖ ರೈತ ಮುಖಂಡರಾದ ಸುರೇಶ್ ಬಾಬು ಪಾಟೀಲ್, ಕೆ.ಟಿ.ಗಂಗಾಧರ್, ಶ್ರೀಮತಿ ಅನುಸೂಯಮ್ಮ, ರಾಜೇಗೌಡ, ಚುಕ್ಕಿ ನಂಜುಂಡಸ್ವಾಮಿ, ಚಿಂತಕರಾದ ಪ್ರೊ ಹಿ.ಶಿ. ರಾಮಚಂದ್ರಗೌಡ, ಪ್ರೊ ರವಿವರ್ಮ ಕುಮಾರ್ ಸೇರಿದಂತೆ ಅನೇಕ ರೈತ ಹೋರಾಟಗಾರರು ಹಾಗೂ ರೈತಪರ ಕಾಳಜಿಯುಳ್ಳ ಮಹನೀಯರು "ರೈತ ಚಳುವಳಿ ಆತ್ಮಾವಲೋಕನ ಹಾಗೂ ಸ್ಪಷ್ಟೀಕರಣ ಸಭೆ"ಯಲ್ಲಿ ಪಾಲ್ಗೊಂಡಿದ್ದರು. ಸಭೆಯ ನಂತರ ಪತ್ರಿಕಾಗೋಷ್ಟಿ ನಡೆಸಿದ ರೈತ ಮುಖಂಡರು ಕೆಲವು ಆಗ್ರಹಗಳನ್ನು ಮಾಡಿದ್ದಾರೆ.

Black ink thrown at Bhartiya Kisan Union leader Rakesh Tikait at an event in Bengaluru

ಮೇ 15 ರಂದು BKU ಸಂಸ್ಥಾಪಕ ಅಧ್ಯಕ್ಷ ಮಹೇಂದ್ರ ಸಿಂಗ್ ಟಿಕಾಯತ್ ಅವರ ಪುಣ್ಯತಿಥಿಯಂದು, ರೈತ ಸಂಘದ ಉಪಾಧ್ಯಕ್ಷ ರಾಜೇಶ್ ಚೌಹಾಣ್ ಪ್ರತ್ಯೇಕ ಸಂಘಟನೆಯನ್ನು ರಚಿಸುವುದಾಗಿ ಘೋಷಿಸಿದರು. ಚುನಾವಣೆಯಲ್ಲಿ ರಾಜಕೀಯ ಪಕ್ಷಗಳನ್ನು ಬೆಂಬಲಿಸುವ ಟಿಕಾಯತ್ ಸಹೋದರರ ವಿಧಾನವನ್ನು ಒಪ್ಪದ ಅವರು, ರಾಕೇಶ್ ಟಿಕಾಯತ್ ಅವರು ಕಾರ್ಮಿಕರಿಗೆ ಕಿವಿಗೊಡುವುದಿಲ್ಲ ಅಥವಾ ರೈತರ ಸಮಸ್ಯೆಗಳ ಬಗ್ಗೆ ಗಮನ ಹರಿಸುವುದಿಲ್ಲ ಎಂದು ಆರೋಪಿಸಿದರು. ಈ ಬಣದ ಹೆಸರು BKU (ರಾಜಕೀಯೇತರ) ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ ಎಂದರು. ಇದರಿಂದಾಗಿ ಕೇಂದ್ರವು ರೈತರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ ಎಂದು ರಾಕೇಶ್ ಟಿಕಾಯತ್ ಆರೋಪಿಸಿದರು.

Recommended Video

Rakesh Tikait ರೈತ ಮುಖಂಡರ ಮುಖಕ್ಕೆ ಮಸಿ!! | #karnataka | Oneindia Kannada

ತರುವಾಯ, 7 ಬಂಡಾಯ ನಾಯಕರನ್ನು ಹೊರಹಾಕಲಾಗಿದೆ ಎಂದು ರಾಕೇಶ್ ಟಿಕಾಯತ್ ಬಹಿರಂಗಪಡಿಸಿದರು. ಮೂರು ಕೃಷಿ ಕಾನೂನುಗಳ ವಿರುದ್ಧ ವರ್ಷವಿಡೀ ನಡೆದ ಪ್ರತಿಭಟನೆಯಲ್ಲಿ ಟಿಕಾಯತ್ ಪ್ರಮುಖ ಪಾತ್ರ ವಹಿಸಿದರು ಮತ್ತು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಮತ್ತು ತೆಲಂಗಾಣ ಸಿಎಂ ಕೆ ಚಂದ್ರಶೇಖರ ರಾವ್ ಅವರೊಂದಿಗಿನ ಸಂವಾದದ ನಂತರ ರಾಜಕೀಯದ ಮೇಲೆ BKU ಪ್ರಭಾವದ ಬಗ್ಗೆ ಊಹಾಪೋಹಗಳನ್ನು ಹುಟ್ಟುಹಾಕಿದರು. ರಾಜೇಶ್ ಚೌಹಾಣ್, ಅನಿಲ್ ತಲಾನ್, ಮಂಗೇರಾಮ್ ತ್ಯಾಗಿ, ದಿಗಂಬರ್ ಸಿಂಗ್, ಧರ್ಮೇಂದ್ರ ಮಲಿಕ್, ರಾಜಬೀರ್ ಸಿಂಗ್ ಮತ್ತು ಹರಿನಾಮ ವರ್ಮಾ ಅವರು ರೈತರ ಹಿತಾಸಕ್ತಿಗಳ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಟ್ವಿಟ್ಟರ್‌ನಲ್ಲಿ ಆರೋಪಿಸಿದ್ದಾರೆ.

English summary
Black paint thrown at Farmer leaders Rakesh Tikkait ,Yudhvir Singh allegedly by the supporters of Karnataka Farmer leader K.Chandrashekhar in bengaluru. They had come to issue clarification regarding the sting operation and disassociating themselves from Chandrashekhar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X