ಆಪರೇಷನ್ ಕಮಲಕ್ಕೆ ಬಿಜೆಪಿಯಿಂದ ಬಿಲ್ಡರ್ಸ್ ಹಣ ಬಳಕೆ: ಶಿವಕುಮಾರ್

ಬಿಜೆಪಿಯವರು ಬಿಲ್ಡರ್ ಗಳಿಂದ ಹಣ ಪಡೆದು, ಅದನ್ನು ಆಪರೇಷನ್ ಕಮಲಕ್ಕೆ ಬಳಸುತ್ತಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಶನಿವಾರ ಆರೋಪ ಮಾಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರದ ಬಗ್ಗೆ ಬೇಸರಗೊಂಡು, ಹನ್ನೆರಡಕ್ಕೂ ಹೆಚ್ಚು ಶಾಸಕರು ರಾಜೀನಾಮೆ ನೀಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಅವರು ಉತ್ತರ ನೀಡಿದ್ದಾರೆ.

ಮುನಿರತ್ನ ಅವರು ರಾಜೀನಾಮೆ ನೀಡಲು ತೆರಳಿದ್ದ ವೇಳೆ, ರಾಜೀನಾಮೆ ಪತ್ರವನ್ನು ಡಿ.ಕೆ.ಶಿವಕುಮಾರ್ ಹರಿದು ಹಾಕಿದರು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ನಾನ್ಯಾಕೆ ಮಾಡಬಾರದು? ಅವರು ದೂರು ದಾಖಲಿಸಲಿ. ನನ್ನನ್ನು ಜೈಲಿಗೆ ಹಾಕಲಿ. ನಾನು ಸಿದ್ಧನಿದ್ದೇನೆ. ಅತಿ ದೊಡ್ಡ ಅಪಾಯವನ್ನು ಎದುರಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

BJP using builders money for operation lotus, said DK Shivakumar

ಅವರು ಸಣ್ಣ ಕಥೆಗಳನ್ನು ಹೇಳುತ್ತಿದ್ದಾರೆ. ಆದರೆ ರಾಜೀನಾಮೆ ನೀಡಲು ಇದು ಕಾರಣವಲ್ಲ. ನಮಗೆಲ್ಲ ಈಗಿನ ಬೆಳವಣಿಗೆ ಅಚ್ಚರಿ ತಂದಿದೆ. ಅವರಿಗೆ ಒಳ್ಳೆ ಬುದ್ಧಿ ಬರುತ್ತೆ ಅಂದುಕೊಳ್ತೀನಿ. ಯಾರನ್ನೂ ಮನವೊಲಿಸಲು ಪ್ರಯತ್ನ ಮಾಡುವುದಿಲ್ಲ. ರಾಮಲಿಂಗಾ ರೆಡ್ಡಿ ಅವರು ನನ್ನ ಆಪ್ತರು. ಅವರನ್ನು ರಾಜೀನಾಮೆ ಹಿಂಪಡೆಯುವಂತೆ ಕೇಳಿದೆ ಎಂದು ಮಾಧ್ಯಮದ ಎದುರಿಗೆ ಹೇಳಿದ್ದಾರೆ.

ಪಕ್ಷವನ್ನು ಬಿಟ್ಟು ಹೋಗುತ್ತೇನೆ ಎಂದು ಹಠ ಹಿಡಿದವರಿಗೆ ಏನೂ ಮಾಡಲೂ ಸಾಧ್ಯವಿಲ್ಲ ಎಂದು ಕೂಡ ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+