• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಐಎಂಎ ವಂಚನೆ ಪ್ರಕರಣ ಸಿಬಿಐಗೆ ವಹಿಸಲು ಬಿಜೆಪಿ ಆಗ್ರಹ

By ಅನಿಲ್ ಆಚಾರ್
|

ಬೆಂಗಳೂರು, ಜೂನ್ 24: ಐಎಂಎ ಬಹುಕೋಟಿ ವಂಚನೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿಯು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದೆ. ಐಎಂಎ ಮಾಲೀಕ ಮನ್ಸೂರ್ ಖಾನ್ ಮಾತನಾಡುತ್ತಿರುವ ವಿಡಿಯೋ ಬಿಡುಗಡೆ ಆಗಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಕೂಲಂಕಷವಾಗಿ ತನಿಖೆ ಮಾಡಬೇಕಾಗಿದೆ ಎಂದು ಒತ್ತಾಯಿಸಲಾಗಿದೆ.

ಐಎಂಎ ಜ್ಯುವೆಲ್ಲರಿಯ ಮನ್ಸೂರ್ ಅಲಿ ಖಾನ್ ವಿಡಿಯೋ ದುಬೈನಿಂದ ರಿಲೀಸ್ಐಎಂಎ ಜ್ಯುವೆಲ್ಲರಿಯ ಮನ್ಸೂರ್ ಅಲಿ ಖಾನ್ ವಿಡಿಯೋ ದುಬೈನಿಂದ ರಿಲೀಸ್

ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ಹೆಸರು ಹೊರಬಿದ್ದಿದೆ. ಸಮ್ಮಿಶ್ರ ಸರಕಾರದ ಅನೇಕ ನಾಯಕರು, ಪ್ರಭಾವಿಗಳ ಕೈವಾಡ ಕೂಡ ಅನೇಕ ಪ್ರಶ್ನೆಗಳನ್ನು ಉದ್ಭವಿಸುವಂತೆ ಮಾಡಿವೆ. ಈ ಪ್ರಕರಣದ ಸಮರ್ಪಕ ತನಿಖೆ ಆಗಬೇಕೆಂದರೆ ಸಿಬಿಐ, ಇ.ಡಿ. ತನಿಖಾ ಸಂಸ್ಥೆಗಳ ಅಗತ್ಯ ಇದೆ ಎನ್ನಲಾಗಿದೆ. ಇನ್ನು ಈ ಪ್ರಕರಣದ ಬಗ್ಗೆ ಕೆಲ ಪ್ರಮುಖ ಅಂಶಗಳನ್ನು ಪ್ರಸ್ತಾವಿಸಿ, ಸಿಬಿಐಗೆ ವಹಿಸಬೇಕು ಎಂದು ಆಗ್ರಹ ಪಡಿಸಲಾಗಿದೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಬಗ್ಗೆ ಪ್ರಸ್ತಾವ ಮಾಡಿರುವ ಕೆಲವು ಅಂಶಗಳು ಹೀಗಿವೆ:
* ದಿವಾಳಿತನದ ಹಂತಕ್ಕೆ ಬಂದಿರುವ ಕಂಪೆನಿಯನ್ನು ಉಳಿಸಲಾಗದೆ ದೇಶ ಬಿಟ್ಟು ಹೋಗಿರುವ ಐಎಂಎ ಕಂಪೆನಿಯ ಮುಖ್ಯಸ್ಥರಾದ ಮನ್ಸೂರ್ ಖಾನ್ ಸಾವಿರಾರು ಹೂಡಿಕೆದಾರರನ್ನು ಅತಂತ್ರ ಸ್ಥಿತಿಗೆ ತಂದಿದ್ದಾರೆ.

* ಐಎಂಎ ಸಂಸ್ಥೆನಲ್ಲಿ ಹೂಡಿಕೆ ಮಾಡಿರುವ ಬಗ್ಗೆ ಸುಮಾರು 35,000 ದೂರುಗಳು ಪೊಲೀಸ್ ಇಲಾಖೆಗೆ ಸಲ್ಲಿಕೆಯಾಗಿವೆ.

* ಅಚ್ಚರಿಯ ವಿಷಯ ಅಂದರೆ ಅನೇಕ ವರ್ಷಗಳಿಂದ ನಡೆಯುತ್ತಿರುವ ಈ ವಹಿವಾಟಿನ ದಿವಾಳಿತನದ ಬಗ್ಗೆ ಕಳೆದ ವರ್ಷವೇ ತಿಳಿದಿದ್ದರೂ ಕಾಂಗ್ರೆಸ್ - ಜೆಡಿಎಸ್ ಸರಕಾರ ಮೌನ ವಹಿಸಿದೆ.

* ತಮ್ಮ ಕಂಪೆನಿಯನ್ನು ಉಳಿಸುವ ನಿಟ್ಟಿನಲ್ಲಿ ಒಂದು ಎನ್ ಬಿಎಫ್ ಸಿ ಕಂಪೆನಿ ಜೊತೆ ಅವರ ಸಂಪರ್ಕ. ಇದು ನಿಜವಾದರೆ, ಎನ್ ಒಸಿ ಪಡೆಯಲು ವಿಡಿಯೋದಲ್ಲಿ ಉಲ್ಲೇಖವಾಗಿರುವಂತೆ ಕೆಲವು ರಾಜಕಾರಣಿಗಳ ಮತ್ತು ಐಎಎಸ್ ಅಧಿಕಾರಿ ಮೇಲೆ ಲಂಚ ವಹಿವಾಟಿನ ಆರೋಪ.

ಮನ್ಸೂರ್ ವಿಡಿಯೋ ಬಗ್ಗೆ ತನಿಖಾಧಿಕಾರಿಯ ಮೊದಲ ಪ್ರತಿಕ್ರಿಯೆ ಮನ್ಸೂರ್ ವಿಡಿಯೋ ಬಗ್ಗೆ ತನಿಖಾಧಿಕಾರಿಯ ಮೊದಲ ಪ್ರತಿಕ್ರಿಯೆ

* ಈ ಪ್ರಕರಣದಲ್ಲಿ ಹೆಸರಿಸಲಾಗಿರುವ ಅನೇಕ ರಾಜಕಾರಣಿಗಳ ಮತ್ತು ಅಧಿಕಾರಿಗಳ ಮೇಲೆ ತನಿಖೆ ಮಾಡಲು ಸರಕಾರ ಏಕೆ ಹಿಂದೇಟು ಹಾಕುತ್ತಿದೆ?

* ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಪಾತ್ರವೇನು? ಅವರ ಮತ್ತು ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಅವರ ನಡುವಿನ ಸ್ನೇಹ ವ್ಯವಹಾರಕ್ಕೂ ಸಂಬಂಧಿಸಿದೆಯೇ?

* ಐಎಂಎ ಸಂಸ್ಥೆ ಆರ್ ಬಿಐನ ನಿಗಾದಲ್ಲಿದ್ದರೂ ಮನ್ಸೂರ್ ಖಾನ್ ದೇಶ ಬಿಟ್ಟು ಪರಾರಿಯಾಗಲು ಹೇಗೆ ಸಾಧ್ಯವಾಯಿತು? ಅಲ್ಲದೆ, ಹಣಕಾಸು ಸಂಸ್ಥೆಗಳಲ್ಲಿ ಹಣ ತೊಡಗಿಸಿರುವ ಹೂಡಿಕೆದಾರರ ಹಿತರಕ್ಷಣಾ ಕಾಯಿದೆಯಡಿಯಲ್ಲಿ (KPID Act) ಸಂಸ್ಥೆಯ ಮೇಲೆ ತನಿಖೆ ನಡೆಸಲು ಸರಕಾರ ಯಾಕೆ ತಡ ಮಾಡಿತು?

* ಇದು ಕರ್ನಾಟಕದ 'ಶಾರದಾ ಚಿಟ್ ಫಂಡ್' ಹಗರಣವಾಗಿದ್ದು, ಜನಸಾಮಾನ್ಯರ ದುಡ್ಡನ್ನು ದೋಚಿರುವ ಆರೋಪಿಗಳಿಗೆ ಶಿಕ್ಷೆಯಾಗಬೇಕಿದೆ ಮತ್ತು ಹೂಡಿಕೆದಾರರ ಹಣವನ್ನು ಹಿಂತಿರುಗಿಸುವಲ್ಲಿ ಸರಕಾರದ ಪ್ರಾಮಾಣಿಕ ಪ್ರಯತ್ನ ಅಗತ್ಯವಿದೆ.

* ಸರಕಾರದ ಮಟ್ಟದಲ್ಲಿ ದೊಡ್ಡ ಸಂಚು ಹಾಗೂ ಅದನ್ನು ಮುಚ್ಚಿಹಾಕುವ ಪ್ರಯತ್ನದ ಅನುಮಾನವಿದ್ದು, ಈ ಸರಕಾರದಿಂದ ನಿಷ್ಪಕ್ಷಪಾತ ತನಿಖೆಯಾಗುವುದೇ ಎಂಬ ಸಂಶಯ ನಮಗಿದೆ.

* ಸಾವಿರಾರು ಜೀವನದ ಪ್ರಶ್ನೆಯಾಗಿರುವ ಈ ಪ್ರಕರಣವನ್ನು ಸರಕಾರ ಸೂಕ್ಷ್ಮತೆ ಮತ್ತು ಗಂಭೀರತೆಯಿಂದ ತೆಗೆದುಕೊಂಡು, ರಾಜಕೀಯವನ್ನು ಬದಿಗಿಟ್ಟು, ಸಿಬಿಐ ಮತ್ತು ಇ.ಡಿ. ತನಿಖಾ ಸಂಸ್ಥೆಗಳಿಗೆ ಪ್ರಕರಣವನ್ನು ಒಪ್ಪಿಸಬೇಕಿದೆ.

* 'ಇಸ್ಲಾಮಿಕ್ ಬ್ಯಾಂಕಿಂಗ್' ಮತ್ತು 'ಹಲಾಲ್ ಆದಾಯ'ದ ಹೆಸರಿನಲ್ಲಿ ಸಾವಿರಾರು ಅಲ್ಪಸಂಖ್ಯಾತರ ಹಣವನ್ನು ದೋಚಿರುವ ಈ ಪ್ರಕರಣದ ಬಗ್ಗೆ ಸರಕಾರ ನಿಷ್ಪಕ್ಷಪಾತ ಮತ್ತು ಕೂಲಂಕಷ ತನಿಖೆ ನಡೆಸಬೇಕು. ಅಲ್ಪಸಂಖ್ಯಾತರನ್ನು ಮತಬ್ಯಾಂಕ್ ರೀತಿಯಲ್ಲಿ ಮಾತ್ರ ನೋಡುವ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರಕ್ಕೆ ಅಲ್ಪಸಂಖ್ಯಾತರ ಕೊರಗು ಕಾಣಿಸುತ್ತಿಲ್ಲವೇ? ಯಾವ ಪ್ರಭಾವಿ ವ್ಯಕ್ತಿಗಳ ರಕ್ಷಣೆಗೆ ಸರಕಾರ ಮುಂದಾಗಿದೆ?

* ಅಲ್ಪಸಂಖ್ಯಾತರ ಬಗ್ಗೆ ಮತದಾನ ಸಮಯದಲ್ಲಿ ಮಾತ್ರ ನೆನಪಾಗುವ ಸರಕಾರ ಅವರ ಕೊರಗನ್ನು ಕೂಡಾ ನೋಡುವ ಮನಸ್ಸು ಮಾಡಲಿ. ಪ್ರಕರಣದ ತೀವ್ರತೆ ಗಮನದಲ್ಲಿಟ್ಟು, ಈ ಪ್ರಕರಣವನ್ನು ಸಿಬಿಐ ಮತ್ತು ಇ.ಡಿ. ತನಿಖಾ ಸಂಸ್ಥೆಗಳಿಗೆ ಒಪ್ಪಿಸುವಂತೆ ನಮ್ಮ ಮನವಿ.

ಮಲ್ಲೇಶ್ವರ ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ್, ಕರ್ನಾಟಕ ಬಿಜೆಪಿ ಮಾಧ್ಯಮ ಪ್ರಮುಖ ಎಸ್. ಪ್ರಕಾಶ್, ರಾಷ್ಟ್ರೀಯ ಬಿಜೆಪಿ ಕಾನೂನು ವಿಭಾಗದ ಸದಸ್ಯ ವಿವೇಕ್ ಸುಬ್ಬಾರೆಡ್ಡಿ ಹಾಜರಿದ್ದರು.

English summary
BJP urged Karnataka government to hand over IMA scam case to CBI. Malleshawara MLA Dr Ashwath Narayan and others present in a press meet and presented some of the points and urged for CBI and Enforcement Directorate probe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X