ಬೆಂಗಳೂರಿಗೆ ಐಐಟಿ, ಏಮ್ಸ್, ಬುಲೆಟ್ ಟ್ರೈನ್

ಬೆಂಗಳೂರು, ಏ.13: ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದೆನಿಸಿರುವ ಬೆಂಗಳೂರು ಮಹಾನಗರಕ್ಕಾಗಿ ಕರ್ನಾಟಕ ಬಿಜೆಪಿ ಘಟಕ ಪ್ರತ್ಯೇಕ ಪ್ರಣಾಳಿಕೆಯನ್ನು ಹೊರಡಿಸಿದೆ.

ಭರವಸೆಗಳ ಮಹಾಪೂರವನ್ನು ಹೊತ್ತಿರುವ ಈ ಪ್ರಣಾಳಿಕೆ ರಚನೆಗೂ ಮುನ್ನ ಸುಮಾರು 1 ಲಕ್ಷಕ್ಕೂ ಅಧಿಕ ಜನರ ಅಭಿಪ್ರಾಯ, ಸಲಹೆ, ಸೂಚನೆಗಳನ್ನು ಬಿಜೆಪಿ ಆಲಿಸಿದೆ. ಕಾವೇರಿ ನದಿ ನೀರು ಪೂರೈಕೆ, ಐಐಟಿ ಸ್ಥಾಪನೆ, ಅಂತರ್ಜಾಲದಲ್ಲಿ ಕನ್ನಡ ಬಳಕೆ ಹೆಚ್ಚಳ, ಬುಲೆಟ್ ಟ್ರೈನ್, ಏಮ್ಸ್ ಸ್ಥಾಪನೆ ಮುಂತಾದ ಪ್ರಮುಖಾಂಶಗಳು ಇದರಲ್ಲಿ ಸೇರಿದೆ.

ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಬೆಂಗಳೂರು ನಗರ ಅಭಿವೃದ್ಧಿಗೆ ನಮ್ಮ ಬದ್ಧತೆ' ಎಂಬ ಪ್ರಣಾಳಿಕೆ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಅನಂತಕುಮಾರ್, ಉತ್ತರ ಕ್ಷೇತ್ರದ ಅಭ್ಯರ್ಥಿ ಡಿ.ವಿ ಸದಾನಂದ ಗೌಡ, ಕೇಂದ್ರ ಕ್ಷೇತ್ರದ ಅಭ್ಯರ್ಥಿ ಪಿ.ಸಿ ಮೋಹನ್, ಶಾಸಕರಾದ ಸುರೇಶ್ ಕುಮಾರ್, ಡಾ. ಅಶ್ವಥ ನಾರಾಯಣ, ಬಿ.ಎನ್ ವಿಜಯ್ ಕುಮಾರ್, ನಗರ ಘಟಕದ ಅಧ್ಯಕ್ಷ ಸುಬ್ಬಣ್ಣ, ಮಾಜಿ ಗೃಹ ಸಚಿವ ಆರ್ ಅಶೋಕ್ ಉಪಸ್ಥಿತರಿದ್ದರು.

ಬೆಂಗಳೂರು ನಗರವೊಂದರಿಂದಲೇ 1 ಲಕ್ಷ 30 ಸಾವಿರ ಕೋಟಿಯಷ್ಟು ಮೌಲ್ಯದ ಸಾಫ್ಟ್ ವೇರ್ ರಫ್ತು ನಡೆಯುತ್ತಿದೆ. ದೇಶದ ಆದಾಯಕ್ಕೆ ನಗರದ ಕೊಡುಗೆ ಆಪಾರ. ವರಮಾನ ತೆರಿಗೆ ಮತ್ತು ಇನ್ನಿತರ ಕೇಂದ್ರ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ.

ನೀವು ಬಿಜೆಪಿ ಅಭ್ಯರ್ಥಿ ಆಯ್ಕೆ ಮಾಡುವ ಮೂಲಕ ದೇಶಕ್ಕೆ ಉತ್ತಮ ಪ್ರಧಾನಿ ಮತ್ತು ನಗರಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಗಳನ್ನು ಪಡೆಯಲು ಇದು ಸಹಕಾರಿಯಾಗಲಿದೆ ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಪ್ರಣಾಳಿಕೆಯ ಪೂರ್ಣ ಪಾಠ ಇಲ್ಲಿದೆ:

ಬಡವರಿಗಾಗಿ ಬಿಜೆಪಿ ಯೋಜನೆ

ಬಡವರಿಗಾಗಿ ಬಿಜೆಪಿ ಯೋಜನೆ

* ರಸ್ತೆ ಬದಿ ಬಡ ವ್ಯಾಪಾರಿಗಳಿಗೆ ಬ್ಯಾಂಕ್ ಮೂಲಕ ಕೈ ಸಾಲ ಯೋಜನೆ ಜಾರಿ, 50,000 ಸಾಲವನ್ನು ಆವರ್ತ ರೀತಿಯಲ್ಲಿ ಬಳಸಲು ಯೋಜನೆ
* ಸ್ಲಂ ನಿವಾಸಿಗಳಿಗೆ ಶಾಶ್ವತ ಸೂರು ನಿರ್ಮಾಣ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ, ಗುಡಿಸಲು ರಹಿತ ನಗರ ಮಾಡಲು ಪಣ.
* ಎನ್ಡಿಎ ಸರ್ಕಾರದ ಸಂದರ್ಭದಲ್ಲಿ ವಾಲ್ಮೀಕಿ-ಅಂಬೇಡ್ಕರ್ ಆವಾಸ್ ಯೋಜನೆ ರೀತಿ ಬಡವರಿಗೆ ವಸತಿ ಯೋಜನೆ ಅನುಷ್ಠಾನ

ಕ್ರೀಡೆ, ಯುವಜನ ಸೇವೆ, ಪ್ರವಾಸೋದ್ಯಮ

ಕ್ರೀಡೆ, ಯುವಜನ ಸೇವೆ, ಪ್ರವಾಸೋದ್ಯಮ

* ಬೆಂಗಳೂರು ಹೊರವಲಯದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 1000 ಕೋಟಿ ರು ಅನುದಾನ ಪಡೆಯಲಾಗುವುದು
* ಪ್ರವಾಸೋದ್ಯಮಕ್ಕೆ ಒತ್ತು ನೀಡಲು ಬೆಂಗಳೂರಿನ 60 ಕಿ.ಮೀ ವ್ಯಾಪ್ತಿಯ ಪ್ರೇಕ್ಷಣೀಯ ಸ್ಥಳನ್ನು ಅಭಿವೃದ್ಧಿ ಪಡಿಸಿ ಸ್ಥಳೀಯರಿಗೆ ಉದ್ಯೋಗ ನೀಡಲಾಗುವುದು

ಕನ್ನಡ ಭಾಷೆ, ಸಂಸ್ಖೃತಿ ಅಭಿವೃದ್ಧಿ

ಕನ್ನಡ ಭಾಷೆ, ಸಂಸ್ಖೃತಿ ಅಭಿವೃದ್ಧಿ

* ಕನ್ನಡ ಭಾಷೆ ಅಭಿವೃದ್ಧಿಗಾಗಿ ಕನ್ನಡವನ್ನು ಅಂತರ್ಜಾಲದಲ್ಲಿ ಮತ್ತು ಮೊಬೈಲಿನಲ್ಲಿ ಅಳವಡಿಸಿಕೊಳ್ಳಲು ಕೇಂದ್ರ ಸಂಸ್ಕೃತಿ ಇಲಾಖೆಯಿಂದ ವಿಶೇಷ ಅನುದಾನ.
* ಕನ್ನಡ ಸಾಹಿತ್ಯ ಕೃತಿಗಳನ್ನು ಡಿಜಿಟಲೈಜ್ ಮಾಡಲು ಅನುದಾನ

ನಗರಕ್ಕೆ ರೈಲು ಯೋಜನೆಗಳು

ನಗರಕ್ಕೆ ರೈಲು ಯೋಜನೆಗಳು

* ಮೆಟ್ರೋ ರೈಲುಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದವರೆಗೆ ವಿಸ್ತರಣೆ ಮಾಡಲು ಯೋಜನೆ
* ಮೋನೋ ರೈಲು ಯೋಜನೆ ಜಾರಿಗೊಳಿಸುವಂತೆ ಕೇಂದ್ರಕ್ಕೆ ಪ್ರಸ್ತಾವನೆ, ಒತ್ತಡ ಹೇರಿಕೆ
* ಬೆಂಗಳೂರು-ಮೈಸೂರು-ತುಮಕೂರು -ಕೋಲಾರ- ಚಿಕ್ಕಬಳ್ಳಾಪುರ-ಬಂಗಾರಪೇಟೆ ವೇಗದ ರೈಲು ಸಂಪರ್ಕಕ್ಕೆ ಆಗ್ರಹ
* ನಗರ ರೈಲು ನಿಲ್ದಾಣಕ್ಕೆ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಎಂದು ನಾಮಕರಣ ಮಾಡಲು ಕ್ರಮ.
* ಬೆಂಗಳೂರು ದೆಹಲಿ ನಡುವೆ ಬುಲೆಟ್ ಟ್ರೈನ್ ಗೆ ಚಾಲನೆ, ಲೋಕಲ್ ರೈಲು ಸೇವೆ ಆರಂಭಕ್ಕೆ ಆಗ್ರಹ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+