ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಯನಗರ: ಬಿಜೆಪಿ ಕಾರ್ಯಕರ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

|
Google Oneindia Kannada News

Recommended Video

ಬಿಜೆಪಿ ಕಾರ್ಯಕರ್ತನ ಮೇಲೆ ಫಲಿತಾಂಶದ ಹಿಂದಿನ ದಿನ ಹಲ್ಲೆ | Oneindia Kannada

ಬೆಂಗಳೂರು, ಜೂನ್ 12: ಜಯನಗರ ಕ್ಷೇತ್ರದ ಚುನಾವಣೆ ಮತದಾನ ಮುಗಿದರೂ ಕಾರ್ಯಕರ್ತರ ನಡುವೆ ವೈಷಮ್ಯ ಮುಗಿದಿಲ್ಲ. ಇಂದು ಬಿಜೆಪಿ ಕಾರ್ಯಕರ್ತನೊಬ್ಬನ ಮೇಲೆ ಹಲ್ಲೆ ಆಗಿದ್ದು ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಯನಗರದಲ್ಲಿ ಸೌಮ್ಯಾ ರೆಡ್ಡಿ ಬೆಂಬಲಿಸಿದ ಜೆಡಿಎಸ್!ಜಯನಗರದಲ್ಲಿ ಸೌಮ್ಯಾ ರೆಡ್ಡಿ ಬೆಂಬಲಿಸಿದ ಜೆಡಿಎಸ್!

ಬಿಜೆಪಿ ಕಾರ್ಯಕರ್ತ ಧೀರಜ್ ಎಂಬುವರ ಮೇಲೆ ಯಾರೋ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದು, ಇದೊಂದು ರಾಜಕೀಯ ಪ್ರೇರಿತ ದಾಳಿ ಎನ್ನಲಾಗಿದೆ. ದಾಳಿಯಲ್ಲಿ ಧೀರಜ್ ಅವರ ಕಣ್ಣಿನ ಭಾಗಕ್ಕೆ ತೀವ್ರ ಪೆಟ್ಟಾಗಿದೆ.

BJP party worker attacked by miscreants in Jayangar

ಧೀರಜ್ ಅವರು ಜಯನಗರದ ಶಾಕಾಂಬರಿ ವಾರ್ಡ್‌ನ ಬಿಜೆಪಿ ಕಾರ್ಯಕರ್ತರಾಗಿದ್ದರು. ಸಂಜೆ ವೇಳೆ ಬಂದ ನಾಲ್ಕು ಜನ ದುಷ್ಕರ್ಮಿಗಳು ಧೀರಜ್‌ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಮತದಾನದ ವೇಳೆ ನಡೆದಿದ್ದ ಘರ್ಷಣೆಯೇ ಈ ದಾಳಿಗೆ ಕಾರಣ ಎನ್ನಲಾಗಿದೆ.

ಜಯನಗರ ಚುನಾವಣೆ : ಶೇ 54.9 ರಷ್ಟು ಮತದಾನಜಯನಗರ ಚುನಾವಣೆ : ಶೇ 54.9 ರಷ್ಟು ಮತದಾನ

ಬಿಜೆಪಿ ಕಾರ್ಯಕರ್ತ ಧೀರಜ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ. ಜಯನಗರದಲ್ಲಿ ನಿನ್ನೆಯಷ್ಟೆ (ಜೂನ್ 12) ಮತದಾನ ಮುಗಿದಿದ್ದು ನಾಳೆ ಫಲಿತಾಂಶ ಹೊರಬೀಳಲಿದೆ.

ಜಯನಗರ ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿಗೆ ನೇರ ಸ್ಪರ್ಧೆ ಇದ್ದು, ಜೆಡಿಎಸ್ ಪಕ್ಷವು ಕಾಂಗ್ರೆಸ್‌ನ ಸೌಮ್ಯಾ ರೆಡ್ಡಿ ಅವರಿಗೆ ಬೆಂಬಲಿಸುತ್ತಿದೆ.

English summary
In Bengaluru's Jayangar BJP party worker Dheeraj attacked by miscreants. He is admitted to hospital. Jayanagar election result will be announce tomorrow.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X