ಸಿದ್ದಗಂಗಾ ಶ್ರೀಗಳ ಚಿಕಿತ್ಸೆ ಕುರಿತು ಹೇಳಿಕೆ: ಡಿಕೆಶಿ ವಿರುದ್ಧ ಬಿಜೆಪಿ ಗರಂ

Recommended Video

      ಸಿದ್ದಗಂಗಾ ಶ್ರೀಗಳ ಚಿಕಿತ್ಸೆ ಹೇಳಿಕೆ: ಡಿಕೆಶಿ ವಿರುದ್ಧ ಬಿಜೆಪಿ ಗರಂ | Oneindia Kannada

      ಬೆಂಗಳೂರು, ಡಿಸೆಂಬರ್ 10: ಚೆನ್ನೈನ ರೇಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿವಕುಮಾರ ಸ್ವಾಮೀಜಿ ಅವರ ಚಿಕಿತ್ಸೆಗೆ ಸಂಬಂಧಿಸಿದಂತೆ ಸಚಿವ ಡಿ.ಕೆ.ಶಿವಕುಮಾರ್‌ ಹೇಳಿಕೆಗೆ ಬಿಜೆಪಿ ತೀವ್ರ ಖಂಡನೆ ವ್ಯಕ್ತಪಡಿಸಿದೆ.

      ನಿನ್ನೆ ಚೆನ್ನೈಗೆ ತೆರಳಿ ಶಿವಕುಮಾರ ಸ್ವಾಮೀಜಿ ಅವರನ್ನು ಭೇಟಿ ಆಗಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರು, ಆ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ, ಶಿವಕುಮಾರ ಸ್ವಾಮೀಜಿ ಅವರಿಗೆ ಅಲ್ಪಸಂಖ್ಯಾತರ ಸಮುದಾಯದ ಆಡಳಿತ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ಸಹ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂದಿದ್ದರು.

      ಡಿಕೆಶಿ ಅವರ ಈ ಮಾತುಗಳು ಬಿಜೆಪಿ ಅವರನ್ನು ಕೆರಳಿಸಿದೆ. ಶ್ರೀಗಳ ಚಿಕಿತ್ಸೆ ವಿಚಾರದಲ್ಲಿ ಸಹ ಧರ್ಮವನ್ನು ಸಚಿವರು ಎಳೆತಂದಿದ್ದಾರೆ. ಕಾಂಗ್ರೆಸ್‌ ತನ್ನ ನಿಜ ಬುದ್ಧಿ ತೋರಿಸಿದೆ ಎಂದು ಬಿಜೆಪಿಯ ಆರ್‌.ಅಶೋಕ್ ಮತ್ತಿತರು ಜರಿದಿದ್ದಾರೆ.

      ಕಿರಿಯ ಸ್ವಾಮೀಜಿಗಳು ಬೇಸರ

      ಕಿರಿಯ ಸ್ವಾಮೀಜಿಗಳು ಬೇಸರ

      ಸಿದ್ದಗಂಗಾ ಮಠದ ಕಿರಿಯ ಸ್ವಾಮಿಗಳು ಸಹ ಶಿವಕುಮಾರ್ ಅವರ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ್ದು, ಸ್ವಾಮೀಜಿ ಅವರ ಆರೋಗ್ಯದ ವಿಚಾರದಲ್ಲಿ ಧರ್ಮ ಎಳೆದು ತರಬಾರದು ಎಂದಿದ್ದಾರೆ.

      'ಸಂಕುಚಿತ ಭಾವ ಪ್ರದರ್ಶಿಸಿದ್ದಾರೆ'

      'ಸಂಕುಚಿತ ಭಾವ ಪ್ರದರ್ಶಿಸಿದ್ದಾರೆ'

      ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಮಾತನಾಡಿ, ಶಿವಕುಮಾರ್‌ಗಿಂತಲೂ ಮುಂಚೆಯೇ ನಾನು ಹೋಗಿ ಶ್ರೀಗಳ ಆರೋಗ್ಯ ವಿಚಾರಿಸಿ ಬಂದಿದ್ದೇನೆ. ಶ್ರೀಗಳಂತಹಾ ಮಹಾಗುರುಗಳ ವಿಚಾರದಲ್ಲಿ ಡಿಕೆಶಿ ಸಂಕುಚಿತ ಮನೋಭಾವ ಪ್ರದರ್ಶಿಸಿದ್ದಾರೆ. ವೈದ್ಯರುಗಳಿಗೆ ಧರ್ಮವಿಲ್ಲ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.

      ಶೋಭಾ ಕರಂದ್ಲಾಜೆ ಟೀಕೆ

      ಶೋಭಾ ಕರಂದ್ಲಾಜೆ ಟೀಕೆ

      ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಸಹ ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಕಾಂಗ್ರೆಸ್‌ಗೆ ಎಲ್ಲದರಲ್ಲೂ ಜಾತಿ ಹುಡುಕುವುದು ಅಭ್ಯಾಸವಾಗಿದೆ ಎಂದು ಟೀಕಿಸಿದರು.

      ವೈದ್ಯ ಮೊಹಮ್ಮದ್ದ ರೇಲಾ ರಿಂದ ಚಿಕಿತ್ಸೆ

      ವೈದ್ಯ ಮೊಹಮ್ಮದ್ದ ರೇಲಾ ರಿಂದ ಚಿಕಿತ್ಸೆ

      ಸಿದ್ದಗಂಗಾ ಶ್ರೀಗಳು ಶನಿವಾರದಂದು ಶಸ್ತ್ರಚಿಕಿತ್ಸೆಗಾಗಿ ಚೆನ್ನೈನ ರೇಲಾ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಶಸ್ತಚಿಕಿತ್ಸೆ ಮಾಡಲಾಯಿತು, ಅದು ಯಶಸ್ವಿಯೂ ಆಯಿತು. ವೈದ್ಯ ಮೊಹಮ್ಮದ್ ರೇಲಾ ಎಂಬುವರ ನೇತೃತ್ವದಲ್ಲಿ ಸ್ವಾಮೀಜಿ ಅವರಿಗೆ ಚಿಕಿತ್ಸೆ ನೀಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+