ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ 'ಕೊಳ್ಳುಬಾಕತನ'ವನ್ನು ಸದನದಲ್ಲಿ ಬಯಲು ಮಾಡಿದ ಜೆಡಿಎಸ್ ಶಾಸಕ

|
Google Oneindia Kannada News

Recommended Video

Karnataka Crisis : ಬಿಜೆಪಿ ತಂತ್ರದ ಬಗ್ಗೆ ಬಯಲು ಮಾಡಿದ ಜೆಡಿಎಸ್ ಶಾಸಕ | Oneindia Kannada

ಬೆಂಗಳೂರು, ಜುಲೈ 19: ಬಿಜೆಪಿಯು ಆಪರೇಷನ್ ಕಮಲ ಮಾಡಿ ನಮ್ಮ ಶಾಸಕರನ್ನು ಕೊಂಡು ಕೊಳ್ಳುತ್ತಿದೆ ಎಂದು ಸದನದ ಹೊರಗಷ್ಟೆ ಆರೋಪ ಮಾಡುತ್ತಿದ್ದ ಮೈತ್ರಿ ಸದಸ್ಯರು ಇಂದು ಸದನದ ಒಳಗೆ ಹೆಸರುಗಳ ಸಮೇತ ಘಟನೆಯನ್ನು ಬಿಡಿಸಿಟ್ಟರು.

Photos : ಸದನದಲ್ಲಿ ಗದ್ದಲ, ಅಹೋರಾತ್ರಿ ಧರಣಿ, ಮಾರ್ನಿಂಗ್ ವಾಕ್

ಬಿಜೆಪಿಯ ಕುದುರೆ ವ್ಯಾಪಾರಕ್ಕೆ ತೀವ್ರ ಆಕ್ರೋಶವನ್ನು ಆಡಳಿತ ಪಕ್ಷದ ಸದಸ್ಯರು ಹೊರ ಹಾಕಿದರು.

ವಿಶ್ವಾಸಮತ LIVE: ಸಿಎಂ ಭಾವುಕ ಭಾಷಣ; ಹೋಲ್'ಸೇಲ್' ಆರೋಪ ವಿಶ್ವಾಸಮತ LIVE: ಸಿಎಂ ಭಾವುಕ ಭಾಷಣ; ಹೋಲ್'ಸೇಲ್' ಆರೋಪ

ಜೆಡಿಎಸ್‌ನ ಶಾಸಕ ಶ್ರೀನಿವಾಸಗೌಡ ಅವರು ಮಾತನಾಡಿ, ನನಗೆ ಐದು ಕೋಟಿ ರೂಪಾಯಿ ಹಣವನ್ನು ಬಿಜೆಪಿ ಕೊಡಲು ಬಂದಿದ್ದರು ನಾನು ನಿರಾಕರಿಸಿದ್ದೆ ಎಂದರು.

BJP offerd five crore rupees to Me: JDS MLA Suresh Gowda

ಆಗ ಎದ್ದ ಬಿಜೆಪಿಯ ಮಾಧುಸ್ವಾಮಿ, ಇದನ್ನು ದಾಖಲು ಮಾಡಿಕೊಳ್ಳಿ ನಾವು ಪ್ರಕರಣ ದಾಖಲಿಸುತ್ತೇವೆ ಎಂದರು. ಕಾಂಗ್ರೆಸ್-ಜೆಡಿಎಸ್ ಸದಸ್ಯರೂ ಸಹ ತನಿಖೆ ಆಗಲಿ ಎಂದರು. ಸಿ.ಟಿ.ರವಿ ಅವರು ಎದ್ದು ಶ್ರೀನಿವಾಸಗೌಡ ವಿವರವಾಗಿ ಹೇಳಿಬಿಡಲಿ ಎಂದರು.

ಆಗ ಮಾತನಾಡಿದ ಶ್ರೀನಿವಾಸಗೌಡ, 'ನನಗೆ ಮಾಜಿ ಬಿಜೆಪಿ ಶಾಸಕ ಸಿಪಿ.ಯೋಗೇಶ್ವರ್ ಹಾಗೂ ಯಲಹಂಕ ಶಾಸಕ ವಿಶ್ವನಾಥ್ ಅವರು ಐದು ಕೋಟಿ ನೀಡಲು ಬಂದಿದ್ದರು ಆದರೆ ನಾನು ಸ್ವೀಕರಿಸಲಿಲ್ಲ' ಎಂದರು. ಕೂಡಲೇ ಎದ್ದ ಆಡಳಿತ ಪಕ್ಷದ ಸದಸ್ಯರು ಬಿಜೆಪಿಯವರ ಮೇಲೆ ತೀವ್ರವಾಗಿ ಹರಿಹಾಯ್ದರು. ಬಿಜೆಪಿ ಸದಸ್ಯರು ಮೌನಕ್ಕೆ ಶರಣಾದರು.

ನಮ್ಮದು ಮಾಟ ಮಂತ್ರ ಮಾಡುವ ಕುಟುಂಬವಲ್ಲ ಎಂದ ಕುಮಾರಸ್ವಾಮಿನಮ್ಮದು ಮಾಟ ಮಂತ್ರ ಮಾಡುವ ಕುಟುಂಬವಲ್ಲ ಎಂದ ಕುಮಾರಸ್ವಾಮಿ

ಕೂಡಲೇ ಎದ್ದ ಕೃಷ್ಣಬೈರೇಗೌಡ ಅವರು, ಈ ಆರೋಪ ಆಗಿರುವುದು ದಾರಿಯಲ್ಲಿ ಅಲ್ಲ, ಸದನದಲ್ಲಿ, ಸ್ಪೀಕರ್ ಅವರ ಮುಂದೆ ನೀವು ಇದಕ್ಕೆ ಸಂಬಂಧ ಪಟ್ಟ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ನಂತರ ಎದ್ದ ಜೆಡಿಎಸ್ ಸಚಿವ ಸಾ.ರಾ.ಮಹೇಶ್ ಅವರು ಜೆಡಿಎಸ್ ಶಾಸಕ ಎಚ್.ವಿಶ್ವನಾಥ್ ಹಾಗೂ ಅವರ ನಡುವೆ ನಡೆದಿದ್ದ ಖಾಸಗಿ ಘಟನೆಯೊಂದನ್ನು ಸದನಕ್ಕೆ ಹೇಳಿ, ಬಿಜೆಪಿಯು 28 ಕೋಟಿ ಆಫರ್ ನೀಡಿದ್ದಾಗಿ ವಿಶ್ವನಾಥ್ ಹೇಳಿದ್ದಾಗಿ ಸಾ.ರಾ.ಮಹೇಶ್ ಹೇಳಿದರು.

ಬ್ರದರ್ ಕುಮಾರಸ್ವಾಮಿ ಬೈಬಲ್‌ನ 'Judgement Day' ನೆನಪಿಸಿಕೊಂಡಿದ್ದೇಕೆ? ಬ್ರದರ್ ಕುಮಾರಸ್ವಾಮಿ ಬೈಬಲ್‌ನ 'Judgement Day' ನೆನಪಿಸಿಕೊಂಡಿದ್ದೇಕೆ?

ಬಿಜೆಪಿಯು ಪತ್ರಕರ್ತರೊಬ್ಬರ ಮೂಲಕ ತಮಗೆ ಆಫರ್ ಕಳಿಸಿದೆ ಎಂದು ವಿಶ್ವನಾಥ್ ಅಂದು ಹೇಳಿದ್ದರು, ಆ ಪತ್ರಕರ್ತರು ಈಗ ಇದೇ ಸದನದಲ್ಲಿ ನನ್ನ ಮುಂದೆಯೇ ಕೂತಿದ್ದಾರೆ ಎಂದೂ ಸಹ ಸಾ.ರಾ.ಮಹೇಶ್ ಹೇಳಿದರು. ಈ ಘಟನೆ ನಡೆದದ್ದು ನನ್ನ ತಾಯಿಯ ಆಣೆಗೂ ನನ್ನ ಮಕ್ಕಳ ಆಣೆಗೂ ಸತ್ಯವೆಂದು ಸಾ.ರಾ.ಮಹೇಶ್ ಹೇಳಿದರು.

English summary
JDS MLA Suresh Gowda said BJP's MLAs offered me five crore rupees to leave the party, But i refused. He said BJP former MLA CP Yogeshwar and present MLA Vishwanath came to my house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X