ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಾಡಿಗೆ ಕಾರಿಗೆ ಕರ್ನಾಟಕ ಸರ್ಕಾರದ ಬೋರ್ಡ್: ಸುರೇಶ್ ಕುಮಾರ್ ಕುಟುಕು

|
Google Oneindia Kannada News

ಬೆಂಗಳೂರು, ಜುಲೈ 02: ಬಾಡಿಗೆ ಕಾರಿಗೂ ಕರ್ನಾಟಕ ಸರ್ಕಾರದ ಬೋರ್ಡ್ ಹಾಕಿಕೊಂಡು ತಿರುಗಾಡುತ್ತಿದ್ದ ವಾಹನವೊಂದರ ಚಿತ್ರವನ್ನು ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರ 'ಕನ್ನಡ ಅಭಿವೃದ್ಧಿ ಪ್ರಾಧಿಕಾರ' ಎಂಬ ಬೋರ್ಡ್ ಹಾಕಿಕೊಂಡು ಮುಖ್ಯಮಂತ್ರಿಗಳ ನಿವಾಸದ ಎದುರು ನಿಂತಿದ್ದ ಕೆ.ಎ.02.ಎಂಕೆ9394 ಸಂಖ್ಯೆಯ ಬೆಂಜ್ ಕಾರಿನ ಚಿತ್ರವನ್ನು ಸುರೇಶ್ ಕುಮಾರ್ ಅವರು ಫೇಸ್‌ಬುಕ್‌ನಲ್ಲಿ ಹಾಕಿದ್ದಾರೆ.

BJP MLA Suresh Kumar raise voice against illegal name board on car

ಇದೊಂದು ಬಾಡಿಗೆ ಕಾರಾಗಿದ್ದು ಗುಡ್‌ವಿಲ್ ಹೌಸಿಂಗ್ ಎಂಬ ಸಂಸ್ಥೆಗೆ ಸೇರಿದ ಕಾರಾಗಿದೆ. ಖಾಸಗಿ ಹೊಟೆಲ್‌ಗಳ ಕಾರ್‌ ಸರ್ವಿಸ್ ಅಥವಾ ಐಶಾರಾಮಿ ಕಾರುಗಳನ್ನು ಬಾಡಿಗೆಗೆ ನೀಡುವ ಸಂಸ್ಥೆಗೆ ಸೇರಿದ ಕಾರು ಇದು.

ಬಾಡಿಗೆ ಕಾರಿಗೆ ಸರ್ಕಾರದ ಬೋರ್ಡ್ ಹಾಕಿಕೊಂಡಿರುವ ಬಗ್ಗೆ ಸುರೇಶ್ ಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಾರಿಗೆ ಇಲಾಖೆ ನಿಯಮಗಳ ಪ್ರಕಾರ ಇದು ಅಪರಾಧವಾಗಿದೆ.

BJP MLA Suresh Kumar raise voice against illegal name board on car

ಸುರೇಶ್ ಕುಮಾರ್ ಅವರ ಈ ಪೋಸ್ಟ್‌ಗೆ ಹಲವು ಪ್ರತಿಕ್ರಿಯೆಗಳು ಹರಿದುಬಂದಿದ್ದು, ಸಾರಿಗೆ ಇಲಾಖೆಯ ನಿರ್ಲಕ್ಷತನವನ್ನು ಟೀಕಿಸಲಾಗಿದೆ. ಹೆದ್ದಾರಿಯ ಟೋಲ್ ಗಳಲ್ಲಿ ಹಣ ಉಳಿಸಲು, ಪೊಲೀಸರು ತಮ್ಮ ವಾಹನವನ್ನು ನಿಲ್ಲಿಸದಿರಲೆಂದು ಹೀಗೆ ಮಾಡುತ್ತಾರೆ ಎಂದು ಕೆಲವರು ಹೇಳಿದ್ದಾರೆ.

English summary
BJP MLA Suresh Kumar upload a photo on Facebook of illegal name plate on a car. A rented car holding government name board. As per the transport department it is illegal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X