• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಅನಿತಾ ಕುಮಾರಸ್ವಾಮಿಗೆ ಸುರೇಶ್ ಕುಮಾರ್ 'ಭಲೇ' ಟ್ವೀಟ್!

|
   ಅನಿತಾ ಕುಮಾರಸ್ವಾಮಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಟೀಕಾಸ್ತ್ರ ಪ್ರಯೋಗ..! | Oneindia Kannada

   ಬೆಂಗಳೂರು, ನವೆಂಬರ್ 16: ನೂತನ ಶಾಸಕಿಯಾಗಿ ಗುರುವಾರವಷ್ಟೇ ಪ್ರಮಾಣವಚನ ಸ್ವೀಕರಿಸಿದ ಅನಿತಾ ಕುಮಾರಸ್ವಾಮಿ ಅವರ ಮೇಲೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಟೀಕಾಸ್ತ್ರ ಪ್ರಯೋಗಿಸಿದ್ದಾರೆ.

   ರಾಮನಗರ ಕ್ಷೇತ್ರದ ಜೆಡಿಎಸ್ ಶಾಸಕಿಯಾಗಿ ಉಪಚುನಾವಣೆಯಲ್ಲಿ ಗೆದ್ದ ಅನಿತಾ ಕುಮಾರಸ್ವಾಮಿ, ಗುರುವಾರ ಪ್ರಮಾಣವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡುತ್ತ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.‌ ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುವುದಿಲ್ಲ.‌ ಆದರೆ ಸಚಿವ ಸ್ಥಾನ ನೀಡಿದರೆ ಉತ್ತಮ‌ ಕೆಲಸ ಮಾಡುತ್ತೇನೆ" ಎಂದಿದ್ದರು.

   ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಚನ್ನಪಟ್ಟಣ ಮತ್ತು ರಾಮನಗರ ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡೂ ಕಡೆಗಳಲ್ಲಿ ಗೆಲುವು ಸಾಧಿಸಿದ್ದರು. ನಂತರ ಚನ್ನಪಟ್ಟಣವನ್ನು ತಮ್ಮ ಬಳಿಯೇ ಉಳಿಸಿಕೊಂಡು ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್ ಚಂದ್ರಶೇಖರ್ ಅವರು ಚುನಾವಣೆಗೆ ಎರಡು ದಿನ ಬಾಕಿ ಉಳಿದಿರುವಾಗ ಕಾಂಗ್ರೆಸ್ ಪಕ್ಷ ಸೇರಿದ್ದರಿಂದ ಜೆಡಿಎಸ್ ಗೆಲುವು ಮತ್ತಷ್ಟು ಸುಲಭವಾಗಿತ್ತು.

   ಅನಿತಾ ಕುಮಾರಸ್ವಾಮಿ ಪ್ರಮಾಣವಚನ, ಪತಿ-ಪತ್ನಿ ಬರೆಯಲಿದ್ದಾರೆ ಇತಿಹಾಸ

   ಸುರೇಶ್ ಕುಮಾರ್ ಅವರ ಈ ಟ್ವೀಟಿಗೆ ಹಲವರು ಪ್ರತಿಕ್ರಿಯಿಸಿದ್ದಾರೆ.

   ಸುರೇಶ್ ಕುಮಾರ್ ಟ್ವೀಟ್

   "ಭಲೇ, " ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.‌ ಸಚಿವ ಸ್ಥಾನಕ್ಕಾಗಿ ಯಾವುದೇ ಲಾಬಿ ಮಾಡುವುದಿಲ್ಲ.‌ ಆದರೆ ಸಚಿವ ಸ್ಥಾನ ನೀಡಿದರೆ ಉತ್ತಮ‌ ಕೆಲಸ ಮಾಡುತ್ತೇನೆ" ಎಂಬ ಮನದ ಇಂಗಿತ ವ್ಯಕ್ತಪಡಿಸಿದ್ದಾರೆ, ಈಗಾಗಲೇ ಮುಖ್ಯಮಂತ್ರಿ, ಲೋಕೋಪಯೋಗಿ, ಸಾರಿಗೆ ಸಚಿವರನ್ನು ಒಳಗೊಂಡ ಪರಿವಾರದ ಸದಸ್ಯೆ ಹಾಗೂ ನೂತನ ಶಾಸಕಿ. ಯಾವುದೇ ಮುಜುಗರವಿಲ್ಲದೆ!" ಎಂದು ಟ್ವೀಟ್ ಮಾಡುವ ಮೂಲಕ ರಾಜಾಜೀನಗರ ಕ್ಷೇತ್ರದ ಶಾಸಕ ಸುರೇಶ್ ಕುಮಾರ್ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ಮಾತಿನ ಛಾಟಿಯೇಟು ನೀಡಿದ್ದಾರೆ.

   ರಾಮನಗರ ಶಾಸಕಿ ಅನಿತಾ ಕುಮಾರಸ್ವಾಮಿ ಪರಿಚಯ

   ರಾಧಿಕಾಗೂ ಸ್ಥಾನ!

   "ಸಚಿವ ಸ್ಥಾನಕ್ಕಾಗಿ ಪೀಠಿಕೆ ? ಮುಂದೆ ರಾಧಿಕಾಗೂ ವಿಧಾನ ಪರಿಷತ್ ಸ್ಥಾನ ನೀಡಿದರೂ ಆಶ್ವರ್ಯವೇನಿಲ್ಲ" ಎಂದು ಕುಟುಕಿದ್ದಾರೆ ಮುಕುಂದ್ ಎಂಬುವವರು.

   ಪತ್ನಿ ಜೊತೆ ವಿಧಾನಸಭೆ ಪ್ರವೇಶಿಸಿ ಇತಿಹಾಸ ನಿರ್ಮಿಸಲಿರುವ ಕುಮಾರಸ್ವಾಮಿ!

   ನಮ್ಮ ಸಂಸಾರ ಆನಂದ ಸಾಗರ!

   ಹೇಗಿದ್ದರೂ 34 ಸೀಟ್ ಮಂತ್ರಿ ಮಾಡಬಹುದು ಇವರ ಇಡೀ ವಂಶಕ್ಕೆ ಮಂತ್ರಿ ಮತ್ತು ನಿಗಮ ಮಂಡಳಿ ಅಧ್ಯಕ್ಷ ಎಲ್ಲಾ ಇವರಿಗೆ ಕೊಟ್ಟು ಸುಮ್ಮನೆ ಇರುವುದು ಒಳ್ಳೆಯದು ನಮ್ಮ ಸಂಸಾರ ಆನಂದ ಸಾಗರ ಅಂತ ಸ್ವಲ್ಪನಾದರೂ ಇವರಿಗೆ ಮಾನಮರ್ಯಾದೆ ಇದೆಯೇ ಎಂದು ಪ್ರಶ್ನಿಸಿದ್ದಾರೆ ಚಂದ್ರಶೇಖರ್ ಜಿ ಬಿ.

   ಗೌಡರ ಮನೆ ಮುಂದೆ ಧರಣಿ ಕೂರಿ!

   ಎಲ್ಲಿದೆ ವಿರೋದ ಪಕ್ಷ ?! ಮಾನ್ಯ ದೇವೇಗೌಡರ ಮನೆ ಮುಂದೆ ಧರಣಿ ಕುತ್ಕೊಳ್ಳಿ ಕುಟುಂಬಕ್ಕೊಂದೇ ಸಚಿವ ಸ್ಥಾನ ಅಂತ. ಮಾನ್ಯ ಮಾಜಿ ಪ್ರಧಾನಿ ತಮಗಲ್ಲವಾದರೂ ಲೋಕದ ಜನರಿಗೆ ಅಂಜಿ ತಮ್ಮ ನಿರ್ಧಾರ ಬದಲಿಸಬಹುದು ಸರ್ ಎಂದಿದ್ದಾರೆ ಸದಾನಂದ ಕಲಬುರಗಿ.

   ಬಿಜೆಪಿಯ ಕುಟುಂಬ ರಾಜಕಾರಣ ವಿರೋಧಿಸುವುದಿಲ್ಲವೇಕೆ?

   ಬಿಜೆಪಿಯ ಕುಟುಂಬ ರಾಜಕಾರಣ ವಿರೋಧಿಸುವುದಿಲ್ಲವೇಕೆ?

   ಎಷ್ಟೇ ಆದರೂ ನೀವು "ಹೆಣ್ಣು ಮಕ್ಕಳು ಮುಸುರೆ ತಿಕ್ಕಲು ಮಾತ್ರ ಲಯಕ್ಕೂ ಎನ್ನುವ ಚಡ್ಡಿ ಪರಿವಾರದವರಲ್ಲವೇ? ಕುಟುಂಬ ರಾಜಕಾರಣ ವಿರೋಧಿಸುವ ನೀವು B.Y.ರಾಘವೇಂದ್ರ ನಿಂತಾಗ ವಿರೋಧಿಸಲು ನಿಮಗೇನಾಗಿತ್ತು? ಎಂದು ಕನ್ನಡದ ಕಂದ ಎಂಬ ಟ್ವೀಟ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

   English summary
   Rajajinagar BJP MLA Suresh Kumar mocks CM HD Kumarawamy's wfe and newly appointed JDS MLA from Ramanagara constituency Anitha Kumaraswamy.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X