Get Updates
Get notified of breaking news, exclusive insights, and must-see stories!

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮನೆಮುಂದೆ ನಿಲ್ಲಿಸಿದ್ದ 2 ಕಾರುಗಳಿಗೆ ಬೆಂಕಿ

ಬೆಂಗಳೂರು, ಆಗಸ್ಟ್ 12: ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಮನೆಮುಂದೆ ನಿಲ್ಲಿಸಿದ್ದ 2 ಐಷಾರಾಮಿ ಕಾರುಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿರುವ ಘಟನೆ ನಡೆದಿದೆ.

ತಡರಾತ್ರಿ 1.30ರ ವೇಳೆಗೆ ನಾಲ್ವರು ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ. ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಶಾಸಕ ಸತೀಶ್​ ರೆಡ್ಡಿ ಟಿವಿ9ಗೆ ಮಾಹಿತಿ ನೀಡಿದ್ದಾರೆ.

ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಮನೆ ಮುಂದೆ ನಿಲ್ಲಿಸಿದ್ದ ಐಷಾರಾಮಿ ಕಾರುಗಳು ಬೆಂಕಿಗೆ ಆಹುತಿಯಾಗಿವೆ. ಬೊಮ್ಮನಹಳ್ಳಿಯಲ್ಲಿರುವ ಸತೀಶ್ ರೆಡ್ಡಿ ಮನೆ ಮುಂಭಾಗದಲ್ಲಿದ್ದ ಕಾರುಗಳಿಗೆ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದು 2 ಕಾರುಗಳು ಸುಟ್ಟು ಕರಕಲಾಗಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.

BJP MLA Satish Reddy Set Fire To 2 Luxury Cars The Perpetrators Fled

ಶಾಸಕ ಸತೀಶ್ ರೆಡ್ಡಿ ನಿವಾಸದ ಬಳಿ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಜೋಶಿ, ರಾತ್ರಿ 1 ಗಂಟೆ ಸುಮಾರಿಗೆ ಕಾರುಗಳಿಗೆ ಬೆಂಕಿ ಬಿದ್ದಿದೆ.

ಯಾರು ಬೆಂಕಿ ಹಚ್ಚಿದ್ದಾರೆ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ ಎಂದು ಹೇಳಿದ್ದಾರೆ. ಎರಡು ಕಾರುಗಳು ಕೂಡಾ ದುಬಾರಿ ಬೆಲೆಯದ್ದಾಗಿದ್ದು, ಬೆಂಕಿ ಹಚ್ಚಿದವರು ಯಾರು ಎನ್ನುವ ಬಗ್ಗೆ ಇಲ್ಲಿಯ ತನಕ ಸುಳಿವು ಸಿಕ್ಕಿಲ್ಲ.

ಕಾರಿಗೆ ಬೆಂಕಿ ಹಚ್ಚುವುದರ ಹಿಂದೆ ರಾಜಕೀಯ ದ್ವೇಷ ಇದೆಯಾ, ಅಥವಾ ವೈಯಕ್ತಿಕ ಕಾರಣ ಇದೆಯಾ ಎಂಬುದರ ಕುರಿತು ಮಾಹಿತಿ ಲಭ್ಯವಾಗಬೇಕಿದೆ. ಘಟನೆಯ ಬಳಿಕ ಪೊಲೀಸರಿಗೆ ಸತೀಶ್ ರೆಡ್ಡಿ ಮಾಹಿತಿ ನೀಡಿದ್ದು, ಸ್ಥಳಕ್ಕೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬಿಳಿ ಬಣ್ಣದ ಕಾರಿನ ಮುಂಭಾಗ ಸಂಪೂರ್ಣ ಸುಟ್ಟು ಕರಕಲಾಗಿದ್ದರೆ, ಜೀಪ್​ ಮಾದರಿಯ ಇನ್ನೊಂದು ವಾಹನ ಬಹುತೇಕ ಸುಟ್ಟು ಹೋಗಿದೆ. ತಡರಾತ್ರಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ತಡರಾತ್ರಿ 1.30ರ ವೇಳೆಗೆ ನಾಲ್ವರು ಕಿಡಿಗೇಡಿಗಳು ಈ ಕೃತ್ಯವೆಸಗಿದ್ದಾರೆ.

BJP MLA Satish Reddy Set Fire To 2 Luxury Cars The Perpetrators Fled

ಕಾರಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ ಎಂದು ಶಾಸಕ ಸತೀಶ್​ ರೆಡ್ಡಿ ಹೇಳಿರುವುದರಿಂದ ಆ ನಾಲ್ವರು ಕಿಡಿಗೇಡಿಗಳು ಯಾರು ಎಂಬುದು ತಿಳಿದುಬರಬೇಕಿದೆ.

ಕೇವಲ 3 ನಿಮಿಷಗಳಲ್ಲಿ ಕೃತ್ಯ ನಡೆದಿದೆ, ತಡರಾತ್ರಿ 1.25ಕ್ಕೆ ಬಂದ ದುಷ್ಕರ್ಮಿಗಳು 1.28ಕ್ಕೆ ಕೆಲಸ ಮುಗಿಸಿ ಪರಾರಿಯಾಗಿದ್ದಾರೆ. ಹಿಂಬದಿ ಗೇಟ್‌ ಬಳಿಯಿಂದ ಬಂದಿದ್ದರು, ಸಿಸಿಟಿವಿ ದೃಶ್ಯದಲ್ಲಿ ಓರ್ವ ಓಡಾಡುವ ದೃಶ್ಯ ಸೆರೆಯಾಗಿದೆ.

BJP MLA Satish Reddy Set Fire To 2 Luxury Cars The Perpetrators Fled

ಸಿಸಿಟಿವಿ ಮರೆಮಾಚಿ, ಗಿಡಕ್ಕೆ ಒರಗಿ ಬಂದಿದ್ದರು, ಬಳಿಕ ಮೂರೇ ನಿಮಿಷದಲ್ಲಿ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಸದ್ಯ ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಪತ್ತೆಗೆ ಶೋಧ ನಡೆಸಲಾಗುತ್ತಿದೆ.

ಕೇವಲ ಮೂರೇ ನಿಮಿಷದಲ್ಲಿ ಕೃತ್ಯ ನಡೆದಿರುವುದರಿಂದ ಪರಿಚಿತರ ಕೃತ್ಯವಿರಬಹುದು ಎನ್ನುವ ಶಂಕೆ ಎದುರಾಗಿದೆ. ಬೊಮ್ಮನಹಳ್ಳಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದೆ.

Recommended Video

      ಪಾಕಿಸ್ತಾನ್ ಪ್ರಧಾನಿ ಹೊಸ ಆಟ ಶುರು | Oneindia kannada

      More From
      Prev
      Next
      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+