• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರಿಗೆ ಕೊವಿಡ್-19 ಸೋಂಕು

|

ಬೆಂಗಳೂರು, ಸಪ್ಟೆಂಬರ್,29: ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯರಿಗೂ ಕೊರೊನಾವೈರಸ್ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಬಗ್ಗೆ ಸ್ವತಃ ಶಾಸಕರೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂದು ಬೆಳಗ್ಗೆ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಾಣಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ 10ನೇ ಬಾರಿಗೆ ಕೊವಿಡ್ ಪರೀಕ್ಷೆ ಮಾಡಿಸಿದ್ದು, ವರದಿಯಲ್ಲಿ ಕೊರೊನಾವೈರಸ್ ಪಾಸಿಟಿವ್ ಬಂದಿದೆ.

ಕಾನೂನು ಸಚಿವ ಜೆ ಸಿ ಮಾಧುಸ್ವಾಮಿರಿಗೆ ಕೊವಿಡ್-19 ಪಾಸಿಟಿವ್ಕಾನೂನು ಸಚಿವ ಜೆ ಸಿ ಮಾಧುಸ್ವಾಮಿರಿಗೆ ಕೊವಿಡ್-19 ಪಾಸಿಟಿವ್

ಕಳೆದ ನಾಲ್ಕೈದು ದಿನಗಳಿಂದ ನನ್ನ ಸಂಪರ್ಕದಲ್ಲಿದ್ದ ಎಲ್ಲರೂ ಕೊರೊನಾವೈರಸ್ ಪರೀಕ್ಷೆ ಮಾಡಿಸಿಕೊಳ್ಳಲು ವಿನಂತಿಸುತ್ತೇನೆ.

CBC, RFT, LFT, ECG, ಸಿಟಿ ಸ್ಕ್ಯಾನ್, ಡಿ ಡೈಮರ್, LDH, Serum Ferricin ಹಾಗು CRP ಈ ಎಲ್ಲಾ ಪರೀಕ್ಷೆಗಳನ್ನು ವೈದ್ಯರು ಮಾಡಿದ್ದು ಯಾವುದೇ ತೊಂದರೆ ಇಲ್ಲ ಎಂದು ತಿಳಿಸಿರುವ ಬಗ್ಗೆ ಶಾಸಕ ರೇಣುಕಾಚಾರ್ಯ ಅವರು ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ.

ದೂರವಾಣಿ ಮೂಲಕ ಸಂಪರ್ಕಿಸಲು ಮನವಿ:

   ಉಪಚುನಾವಣೆಯ ಟಿಕೆಟ್ ಅಂಗಡಿ ಕುಟಂಬಕ್ಕೆ ಕೊಡಿ! | Oneindia Kannada

   "ಕಳೆದ ಆರು ತಿಂಗಳುಗಳಿಂದ ಕೋವಿಡ್19ರ ವಿರುದ್ಧ ನಾನು ಸಹ ಒಬ್ಬ ಕೊರೊನಾ ವಾರಿಯರ್ ಆಗಿ ನಿರಂತರ ಜನಸೇವೆ ಮಾಡುತ್ತಿದ್ದು, ನನ್ನ ಮತ ಕ್ಷೇತ್ರದ ಬಂಧುಗಳು ನಿಮ್ಮ ಯಾವುದೇ ಸಮಸ್ಯೆಗಳಿಗೆ ದೂರವಾಣಿ ಮುಖಾಂತರ ನನ್ನನ್ನು ಸಂಪರ್ಕಿಸ ಬಹುದು. ನಿಮ್ಮೆಲ್ಲರ ಹಾರೈಕೆ ಹಾಗು ಆಶೀರ್ವಾದದಿಂದ ನಾನು ಆದಷ್ಟು ಬೇಗ ಗುಣಮುಖನಾಗಿ ಬರುತ್ತೇನೆ, ನನ್ನ ಆರೋಗ್ಯದ ಜೊತೆಗೆ ನಿಮ್ಮೆಲ್ಲರ ಯೋಗಕ್ಷೇಮವು ನನಗೆ ಅಷ್ಟೇ ಮುಖ್ಯವಾಗಿದೆ" ಎಂದು ರೇಣುಕಾಚಾರ್ಯ ಫೇಸ್ ಬುಕ್ ಪೋಸ್ಟ್ ಮಾಡಿದ್ದಾರೆ.

   English summary
   BJP MLA M P Renukacharya Tests Positive For Covid-19, Admitted To Apollo Hospital.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X