ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಮಾನುಲ್ಲಾ ಖಾನ್ ವಿರುದ್ಧ ಆಯೋಗಕ್ಕೆ ಬಿಜೆಪಿ ದೂರು

|
Google Oneindia Kannada News

ಬೆಂಗಳೂರು, ಏಪ್ರಿಲ್ 05 : ಕೆ.ಆರ್.ಪುರಂ ಕ್ಷೇತ್ರದ ನಾಮ ನಿರ್ದೇಶಿತ ಪಾಲಿಕೆ ಸದಸ್ಯ ಅಮಾನುಲ್ಲಾ ಖಾನ್ ವಿರುದ್ಧ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಏಪ್ರಿಲ್ 18ರಂದು ಬೆಂಗಳೂರು ನಗರದಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ.

ಅಮಾನುಲ್ಲಾ ಖಾನ್ ಅವರು ಮತದಾರರಲ್ಲಿ ಆತಂಕ ಉಂಟು ಮಾಡುವ ಸಂಚನ್ನು ರೂಪಿಸಿದ್ದಾರೆ. ಹಲವು ನಾಯಕರ ಸಭೆಯನ್ನು ನಡೆಸಿ ಏನೇನು ಕುತಂತ್ರ ಮಾಡಬೇಕು ಎಂಬ ಜವಾಬ್ದಾರಿಯನ್ನು ಹಂಚಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಬಿಜೆಪಿ ನಾಯಕರ ತಲೆ ಕಡಿಯುವ ಮಾತನಾಡಿದ ಕಾಂಗ್ರೆಸ್ ನಾಯಕ!ಬಿಜೆಪಿ ನಾಯಕರ ತಲೆ ಕಡಿಯುವ ಮಾತನಾಡಿದ ಕಾಂಗ್ರೆಸ್ ನಾಯಕ!

ಏಪ್ರಿಲ್ 18ರಂದು ಬೆಂಗಳೂರಿನಲ್ಲಿ ಚುನಾವಣೆ ನಡೆಯುತ್ತಿದ್ದು, ನಿರ್ಭಯವಾಗಿ ಮತದಾನ ಮಾಡಬೇಕು ಎಂಬುದು ಪಕ್ಷಗಳು ಹಾಗೂ ಚುನಾವಣಾ ಆಯೋಗದ ಆಶಯವಾಗಿದೆ. ಇದಕ್ಕೆ ಪೂರಕವಾಗಿ ಭದ್ರತೆ ನೀಡುತ್ತಿರುವ ಪೊಲೀಸರು ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ ಕೈಗೊಂಡಿದ್ದಾರೆ.

ಈಶ್ವರ್ ಖಂಡ್ರೆ ನಾಮಪತ್ರ ತಿರಸ್ಕರಿಸುವಂತೆ ಬಿಜೆಪಿ ಅಭ್ಯರ್ಥಿ ದೂರುಈಶ್ವರ್ ಖಂಡ್ರೆ ನಾಮಪತ್ರ ತಿರಸ್ಕರಿಸುವಂತೆ ಬಿಜೆಪಿ ಅಭ್ಯರ್ಥಿ ದೂರು

BJP lodges complaint with EC against Congress worker

ಬಿಜೆಪಿ ಚುನಾವಣಾ ಆಯೋಗ ಮತ್ತು ಪೊಲೀಸರು ಕೈಗೊಂಡಿರುವ ಎಲ್ಲಾ ಕ್ರಮಗಳನ್ನು ಸ್ವಾಗತಿಸಲಿದೆ. ಮತದಾನದ ದಿನ ನಡೆಯಬಹುದಾದದ ಬಹುದೊಡ್ಡ ಕುತಂತ್ರ, ಅಪರಾಧ ಸಂಚು, ಜೀವಹಾನಿ ಮಾಡುವ ಸಂಘಟಿತ ಸಂಚೊಂದರ ವಿಡಿಯೋ ಮಾಹಿತಿಯನ್ನು ಆಯೋಗ ಮತ್ತು ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗುತ್ತಿದೆ.

ಹಾಸನ : ಬಿಜೆಪಿ ಶಾಸಕರ ದೂರು, ಎಸ್ಪಿ ಎತ್ತಂಗಡಿ ಮಾಡಿದ ಆಯೋಗಹಾಸನ : ಬಿಜೆಪಿ ಶಾಸಕರ ದೂರು, ಎಸ್ಪಿ ಎತ್ತಂಗಡಿ ಮಾಡಿದ ಆಯೋಗ

ಅಮಾನುಲ್ಲಾ ಖಾನ್ ಚುನಾವಣಾ ಆಯೋಗದ ನಿಯಮಗಳನ್ನು ಉಲ್ಲಂಘನೆ ಮಾಡಿ ಭಯದ ವಾತಾವರಣವನ್ನು ಉಂಟು ಮಾಡಲು ಪ್ರಚೋದನೆ ನೀಡುತ್ತಿದ್ದಾರೆ ಎಂದು ಬಿಜೆಪಿ ಆರೋಪಿ ಮಾಡಿದ್ದು, ಆಯೋಗಕ್ಕೆ ದೂರು ನೀಡಿದೆ.

ಪಕ್ಷದ ಕಾರ್ಯಕರ್ತರ ಜೊತೆ ಸಭೆ ನಡೆಸಿದ್ದ ಅಮಾನುಲ್ಲಾ ಖಾನ್, 'ಎಷ್ಟು ಕೇಸ್ ಆದ್ರು ಸರಿ, ಎಷ್ಟು ತಲೆಗಳು ಉದುರಿದ್ರು ಸರಿ. ನನ್ನ ಕಾಂಗ್ರೆಸ್‌ನಿಂದ ಕಿತ್ತು ಹಾಕಿದ್ರು ಪರ್ವಾಗಿಲ್ಲ. ಬಿಜೆಪಿಯವರನ್ನು ಈ ಬಾರಿ ಬಿಡಲ್ಲ' ಎಂದು ಅಮಾನುಲ್ಲಾ ಖಾನ್ ಹೇಳಿಕೆ ನೀಡಿದ್ದರು.

ಅಮಾನುಲ್ಲಾ ಖಾನ್ ವಿಡಿಯೋ

English summary
Karnataka BJP lodged a complaint with the Election Commission against Congress leader Amanullah Khan who sparked controversy after his statement of chop off heads of BJP workers in K.R.Puram, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X