ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿನ್ನನ್ನು ಯಾವನೋ ರೇಪ್ ಮಾಡಿದ್ರೆ ನಾ ಏನ್ ಮಾಡಕಾಗುತ್ತೆ: ಈಶ್ವರಪ್ಪ

By Vanitha
|
Google Oneindia Kannada News

ಬೆಂಗಳೂರು, ಅಕ್ಟೋಬರ್, 17 : 'ನಿನ್ನನ್ನು ಯಾವನೋ ಎಳೆದ್ಕೊಂಡು ಹೋಗಿ ರೇಪ್ ಮಾಡಿದ್ರೆ ನಾ ಏನ್ ಮಾಡೋಕಾಗುತ್ತೆ, ನಾನು ಎಲ್ಲೋ ಇರ್ತಿನಿ' ಎಂದು ಪತ್ರಕರ್ತೆಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಈಶ್ವರಪ್ಪ ಅಸಂಬದ್ದ ಹೇಳಿಕೆ ನೀಡಿ ಇದೀಗ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದ್ದಾರೆ.

ಕಳ್ಳರಿಂದ ಹತ್ಯೆಗೀಡಾಗಿದ್ದ ದೊಡ್ಡಬಳ್ಳಾಪುರದ ಪಿಎಸ್ ಐ ಜಗದೀಶ್ ಅವರಿಗೆ ಅಂತಿಮ ನಮನ ಸಲ್ಲಿಸಲು ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಮಲ್ಲಾಪುರಕ್ಕೆ ಅಕ್ಟೋಬರ್ 17ರ ಶನಿವಾರ ಮಧ್ಯಾಹ್ನದಂದು ತೆರಳಿದ ಈಶ್ವರಪ್ಪ ಈ ಹೇಳಿಕೆ ನೀಡಿದ್ದಾರೆ. ಮಹಿಳೆಯರ ಮೇಲಿರುವ ತಾತ್ಸಾರ ಮನೋಭಾವವನ್ನು ಬಹಿರಂಗವಾಗಿ ವ್ಯಕ್ತಪಡಿಸಿ, ತಮ್ಮ ವ್ಯಕ್ತಿತ್ವಕ್ಕೆ ಕಳಂಕ ಹಚ್ಚಿಕೊಂಡಿದ್ದಾರೆ.[ಅತ್ಯಾಚಾರ ತಡೆಗೆ ನಾನು ಸಹಿ ಹಾಕಾಯ್ತು, ನಿಮ್ಮದೊಂದು ಸಹಿ ಸೇರಿಸಿ]

BJP Leader Eshwarappa told opposite reaction about rape incidents

ಪತ್ರಕರ್ತೆ ಕೇಳಿದ ಪ್ರಶ್ನೆ ಏನು?

'ರಾಜ್ಯದಲ್ಲಿ ದಕ್ಷ ಅಧಿಕಾರಿಗಳ ಹತ್ಯೆ, ದರೋಡೆ, ಅತ್ಯಾಚಾರಗಳು ಹೆಚ್ಚುತ್ತಿವೆಯಲ್ಲ. ಈ ಬಗ್ಗೆ ವಿರೋಧ ಪಕ್ಷವಾದ ನೀವು ಸರ್ಕಾರವನ್ನು ಎಚ್ಚರಿಸುತ್ತಿಲ್ಲ?ಎಂದು ಪತ್ರಕರ್ತೆ ಅಕ್ಟೋಬರ್ 17ರ ಶನಿವಾರದಂದು ಕೇಳಿದ ಪ್ರಶ್ನೆಗೆ ಈ ರೀತಿಯ ಉದ್ದಟತನದ ಉತ್ತರ ನೀಡಿದ್ದಾರೆ.

ಪ್ರತಿಕ್ರಿಯೆ :

ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಮಂಜುಳಾ ಮಾನಸ ಈ ಬಗ್ಗೆ ಪ್ರತಿಕ್ರಿಯಿಸಿದ್ದು, 'ಈಶ್ವರಪ್ಪ ಅವರ ಈ ಹೇಳಿಕೆ ಬಹಳ ಖಂಡನೀಯವಾದುದು'ಎಂದು ಹೇಳಿದ್ದಾರೆ. ಹಾಗೂ ಬಿಜೆಪಿ ನಾಯಕಿಯಾದ ಶೋಭಾ ಕರಂದಾಜ್ಞೆ ಅವರು 'ಈಶ್ವರಪ್ಪನವರ ಈ ಬೇಜಾವಾಬ್ದಾರಿಯುತವಾದ ಮಾತನ್ನು ನಾನು ವಿರೋಧಿಸುತ್ತೇನೆ' ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಮೊದಲು ಗೃಹ ಸಚಿವ ಕೆ.ಜೆ ಜಾರ್ಜ್ ಅವರಿಗೆ ಈಶ್ವರಪ್ಪ, 'ನಿಮ್ಮ ಮಗಳ ಮೇಲೆ ರೇಪ್ ಆಗಿದ್ದರೆ ಸುಮ್ಮನಿರುತ್ತಿದ್ದೆಯಾ ಜಾರ್ಜ್ ನೀವು ಏನ್ ಮಾಡ್ತಿದ್ರಿ' ಎಂದು ರಾಜ್ಯದಲ್ಲಿ ನಡೆಯುತ್ತಿದ್ದ ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಅವರನ್ನು ಪ್ರಶ್ನಿಸಿದ್ದರು.[ಜಾರ್ಜ್ ಗೆ ಇಂಥ ಪ್ರಶ್ನೆ ಕೇಳಬಹುದಾ ಈಶ್ವರಪ್ಪನವರೆ?]

English summary
"If someone kidnaps and rapes you what can I do?" BJP leader K.S. Eshwarappa has put himself in a spot of controversy by uttering this nonsense when a woman journalist asked his responsibility as opposition leader. Eshwarappa had come to the last rites of SI Jagadish who died on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X