Breaking: ಕಾಂಗ್ರೆಸ್‌ಗೆ ವಿಧಾನಸಭೆಯಲ್ಲಿಯೇ ತಕ್ಕ ಉತ್ತರ ಕೊಡುತ್ತೇವೆ: ಯಡಿಯೂರಪ್ಪ
ದೊಡ್ಡಬಳ್ಳಾಪುರ, ಸೆಪ್ಟೆಂಬರ್ 10: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದಲ್ಲಿ ಸುಧಾಕರ್‍ರನ್ನು ಹೊಗಳಿದ ಬಿಎಸ್ ಯಡಿಯೂರಪ್ಪ. ಈ ಸಮಾವೇಶದಲ್ಲಿ 3-4 ಲಕ್ಷ ಜನರನ್ನು ಸೇರಿಸಲಾಗಿದೆ ಸುಧಾಕರ್ ಗೆ ಅಭಿನಂದನೆ. ರೈತರಿಗೆ ನೇಕಾರರ ಪರವಾಗಿ ನಮ್ಮ ಸರ್ಕಾರ ಕೆಲಸವನ್ನು ಮಾಡಿದ್ದೇವೆ.
ಬಿಜೆಪಿ ಸರ್ಕಾರ ರೈತರ ಪರವಾಗಿ ಕೆಲಸ ಮಾಡಿದ್ದೇವೆ. ರಾಹುಲ್ ಗಾಂಧಿ ಬಡತನದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ. ಅವರ ಕಾಲದಲ್ಲಿ ಬಡತನ ಸುಧಾರಣೆಯಾಗಿದೆಯೇ . ಮೋದಿ ಬಡವರ ಪರವಾದ ಯೋಜನೆ ಜಾರಿತಂದಿದ್ದಾರೆ.

ಸಿದ್ದರಾಮಯ್ಯ ಬೋಟ್ ನಲ್ಲಿ ಓಡಾಡುವ ಸಂಧರ್ಭ ಬಂದಿದೆ ಎಂದಿದ್ದಾರೆ. ಆದರೆ ಬೆಂಗಳೂರಿನಲ್ಲಿ ಯಾವ ಪ್ರಮಾಣದಲ್ಲಿ ಮಳೆ ಬಂದಿದೆ ಎಂಬುದನ್ನು ಊಹೆ ಮಾಡಿಕೊಳ್ಳಿ. ವಿಧಾನಸಭೆಯಲ್ಲಿ ಇದಕ್ಕೆ ಉತ್ತರ ಕೊಡುತ್ತೇವೆ. ಸಿದ್ದರಾಮಯ್ಯನವರೇ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲೆಸುವಂತೆ ಕನಸನ್ನು ಕಾಣುತ್ತಿದ್ದೀರ. ಬಿಜೆಪಿ 150 ಸೀಟು ಗೆಲ್ಲಲಿದೆ. ಸಿದ್ದರಾಮಯ್ಯ ಮತ್ತು ಶಿವಕುಮಾರ್ ಭ್ರಮೆಯಲ್ಲಿದ್ದಾರೆ ಎಂದು ಹೇಳುತ್ತೇನೆ.

ವಿಧಾನಸಭೆಯ ಎಲ್ಲಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದು ಜನತೆಗೆ ಕರೆಕೊಟ್ಟ ಬಿಎಸ್‌ವೈ. ಜನರ ಬೆಂಬಲ ಮತ್ತು ಸಹಕಾರವನ್ನು ಯಾಚಿಸಿದ್ದಾರೆ. ತಮ್ಮೆಲ್ಲರ ಆಶೀರ್ವಾದವನ್ನು ಬಿಜೆಪಿ ಮೇಲೆ ಬೇಕಾಗಿದೆ. ನಾವು ಮಾಡಿರುವ ಕಾರ್ಯಕ್ರಮಗಳು ಉತ್ತಮ ಕಾರ್ಯಕ್ರಮವನ್ನು ನೀಡಿದ್ದೇವೆ. ಈ ಭಾಗದ ನೇಕಾರ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದೇವೆ. ಸುಧಾಕರ್ ಪರಿಶ್ರಮದಿಂದ ಈ ಭಾಗದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲಿದೆ ಎಂದು ಬಿಎಸ್‌ವೈ ಹೊಗಳಿದ್ದಾರೆ.












Click it and Unblock the Notifications