ಗೋಮಾಂಸ ಸೇವನೆ ಬಗ್ಗೆ ಬಿಜೆಪಿ ವಕ್ತಾರ ವಾಮನ್ ನೀಡಿದ ವಿವಾದಿತ ಹೇಳಿಕೆ
ಗೋ ಮಾಂಸ ಸೇವನೆ ಕುರಿತಂತೆ ಸುದ್ದಿವಾಹಿನಿಯ ಚರ್ಚಾಕೂಟದಲ್ಲಿ ಬಿಜೆಪಿ ವಕ್ತಾರ ವಾಮನಾಚಾರ್ಯ ನೀಡಿದ ಹೇಳಿಕೆ ಈಗ ವಿವಾದಕ್ಕೆ ಕಾರಣವಾಗಿದೆ. ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರೂ ಸೇರಿದಂತೆ ಎಲ್ಲರೂ ಗೋ ಮಾಂಸ ಸೇವನೆ ಮಾಡುತ್ತಿದ್ದರು ಎಂದಿದ್ದರು.
ಬೆಂಗಳೂರು, ಜೂನ್ 05:ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದ ಬಳಿಕ ಡಾ. ವಾಮನ್ ಆಚಾರ್ಯ ಅವರು ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಘನ ತ್ಯಾಜ್ಯ ವಿಂಗಡಣೆ, ಕಸ ನಿರ್ವಹಣೆಗೆ ತಂತ್ರಜ್ಞಾನ ಬಳಕೆ , ಜೈವಿಕ ಗೊಬ್ಬರ ಬಳಕೆಗೆ ಪ್ರೋತ್ಸಾಹ ಹೀಗೆ ಅನೇಕ ಕ್ರಮಗಳನ್ನು ಜಾರಿಗೆ ತಂದು ತಮ್ಮನ್ನು ತಾವು ಗಾರ್ಬೆಜ್ ಮ್ಯಾನ್ ಎಂದು ಕರೆದುಕೊಳ್ಳುತ್ತಿದ್ದ ಡಾ. ವಾಮನ್ ಆಚಾರ್ಯ ಅವರು ಪ್ರಸ್ತುತ ಬಿಜೆಪಿ ವಕ್ತಾರರಾಗಿ ಕಾಯನಿರ್ವಹಿಸುತ್ತಿದ್ದಾರೆ.['ಬಿಲೀಫ್ ಫೆಸ್ಟ್' ಆಚರಿಸುವಂತೆ ಯುವ ಬ್ರಿಗೇಡ್ ಕರೆ, ಏನಿದು ಬಿಲೀಫ್ ಫೆಸ್ಟ್!]

ಸುವರ್ಣ ಸುದ್ದಿವಾಹಿನಿಯಲ್ಲಿ ನಡೆದ ಚರ್ಚಾಕೂಟದಲ್ಲಿ ಭಾಗವಹಿಸಿದ್ದ ಬಿಜೆಪಿ ವಕ್ತಾರ ಡಾ. ವಾಮನಾಚಾರ್ಯ ಅವರು, 'ಗೋವನ್ನು ಮಾತೇ ಎಂದು ಒಪ್ಪಲು ಸಾಧ್ಯವಿಲ್ಲ, ಭಾರತ ಕೃಷಿ ಪ್ರಧಾನ ರಾಷ್ಟ್ರವಾಗುವ ಮುನ್ನ ಬ್ರಾಹ್ಮಣರೂ ಸೇರಿದಂತೆ ಎಲ್ಲರೂ ಗೋ ಮಾಂಸ ಸೇವನೆ ಮಾಡುತ್ತಿದ್ದರು' ಎಂದು ಹೇಳಿದ್ದರು.[ ಏನು ತಿನ್ನಬೇಕು ಎಂಬ ಪಾಠ ದೆಹಲಿಯಿಂದ ಕಲಿಯಬೇಕಿಲ್ಲ: ವಿಜಯನ್]
ಆದರೆ, ಬಿಜೆಪಿ ವಕ್ತಾರ ವಾಮನಾಚಾರ್ಯ ನೀಡಿರುವ ಹೇಳಿಕೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಗೋ ಮಾಂಸ ಸೇವನೆ ಬಗ್ಗೆ ಅವರು ನೀಡಿದ ಹೇಳಿಕೆ, ಪಕ್ಷದ ಹೇಳಿಕೆಯಲ್ಲ. ಅದು ಅವರ ವೈಯಕ್ತಿ ಹೇಳಿಕೆಯಾಗಿದೆ. ಸಂಪೂರ್ಣ ಗೋಹತ್ಯ ನಿಷೇಧವಾಗಬೇಕು ಎನ್ನುವುದೇ ಬಿಜೆಪಿಯ ನಿಲುವಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಸ್ಪಷ್ಟಪಡಿಸಿದ್ದಾರೆ.[ಗೋವಿನ ಬಗ್ಗೆ ನಿಮಗೆ ತಿಳಿಯದ ರೋಚಕ ಸಂಗತಿಗಳು]
ಪಕ್ಷದ ನಿಲುವು ಮಾತ್ರ ಸಂಪೂರ್ಣ ಗೋಹತ್ಯೆ ನಿಷೇಧ ಜಾರಿಯಾಗಬೇಕು ಎನ್ನುವುದರ ಪರವಾಗಿಯೇ ಇದೆ. ಒಂದು ವೇಳೆ ಅವರು ಗೋ ಹತ್ಯೆ ನಿಷೇಧ ಕಾನೂನು ಜಾರಿ ವಿರುದ್ಧವಾಗಿ ಹೇಳಿಕೆ ನೀಡಿದ್ದರೆ ಅದನ್ನು ಅವರು ಸರಿಪಡಿಸಿಕೊಳ್ಳಬೇಕು ಎಂದು ಸಿಟಿ ರವಿ ಹೇಳಿದರು.












Click it and Unblock the Notifications