ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಪ್ರಚಾರ ನಿರ್ಬಂಧಿಸುವಂತೆ ಆಯೋಗಕ್ಕೆ ಬಿಜೆಪಿ ಆಗ್ರಹ

|
Google Oneindia Kannada News

ಬೆಂಗಳೂರು, ಮೇ 13: ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಹಣ ಹಂಚಿಕೆ ಆರೋಪ ಮಾಡಿ ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಬಿಜೆಪಿ, ಸಿದ್ದರಾಮಯ್ಯ ಮತ್ತು ಸಿ.ಎಂ.ಇಬ್ರಾಹಿಂ ಅವರುಗಳ ವಿರುದ್ಧವೂ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

ಸಿದ್ದರಾಮಯ್ಯ ಅವರು ನರೇಂದ್ರ ಮೋದಿ ವಿರುದ್ಧ ವೈಯಕ್ತಿಕ ನಿಂದನೆ ಮಾಡಿದ್ದಾರೆ, ಅವರನ್ನು ಸುಳ್ಳುಗಾರ ಎಂದು ಕರೆದಿದ್ದಾರೆ, ವಿದೇಶಕ್ಕೆ ಹೋಗಲು ಸಾರ್ವಜನಿಕ ಹಣ ವ್ಯಯಮಾಡಿದ್ದಾರೆ, ಮೋದಿ ದೇಶವನ್ನು ಒಡೆದು ಆಳುತ್ತಿದ್ದಾರೆ ಎಂದು ಹೇಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಸೌಮ್ಯ ಸ್ವಭಾವದ ಎಚ್ ವಿಶ್ವನಾಥ್ ಗುಟುರು: ಅಸಲಿ ಸೂತ್ರಧಾರ ಯಾರು? ಸೌಮ್ಯ ಸ್ವಭಾವದ ಎಚ್ ವಿಶ್ವನಾಥ್ ಗುಟುರು: ಅಸಲಿ ಸೂತ್ರಧಾರ ಯಾರು?

ಅಲ್ಲದೆ, ಬಿಜೆಪಿಯವರು ಮಹಾತ್ಮಾ ಗಾಂಧಿಯನ್ನು ಕೊಂದಿದ್ದಾರೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾಗಿ ಬಿಜೆಪಿ ದೂರಿನಲ್ಲಿ ಉಲ್ಲೇಖಿಸಿದೆ. ಇದೊಂದು ಸುಳ್ಳು ಹೇಳಿಕೆಯಾಗಿದ್ದು, ಬಿಜೆಪಿ ಅಥವಾ ಆರ್‌ಎಸ್‌ಎಸ್‌ ಪಕ್ಷಕ್ಕೂ ಮಹಾತ್ಮಾ ಗಾಂಧಿ ಹತ್ಯೆಗೂ ಯಾವುದೇ ಸಂಬಂಧವಿಲ್ಲ, ಹೀಗೆ ಸುಳ್ಳು ಹೇಳಿಕೆಗಳನ್ನು ನೀಡಿರುವ ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ಆರೋಪಿಸಿದೆ.

BJP complaint against Siddaramaiah to election commission

ಸಿದ್ದರಾಮಯ್ಯ ಅವರ ಈ ಹೇಳಿಕೆಯು ಸಮಾಜದ ಸ್ವಾಸ್ಥ್ಯವನ್ನು ಕೆಡಿಸಿ ಪಂಗಡಗಳ ನಡುವೆ ದ್ವೇಷ ಹೆಚ್ಚಲು ಕಾರಣವಾಗುತ್ತದೆ ಎಂದು ಬಿಜೆಪಿಯು ಆತಂಕ ವ್ಯಕ್ತಪಡಿಸಿದೆ.

ಕೈಲಾಗದವರ ಜೊತೆ ವಾದ ಇಲ್ಲ:ವಿಶ್ವನಾಥ್‌ಗೆ ಸಿದ್ದರಾಮಯ್ಯ ಟ್ವೀಟ್‌ ಏಟು ಕೈಲಾಗದವರ ಜೊತೆ ವಾದ ಇಲ್ಲ:ವಿಶ್ವನಾಥ್‌ಗೆ ಸಿದ್ದರಾಮಯ್ಯ ಟ್ವೀಟ್‌ ಏಟು

ಸಿದ್ದರಾಮಯ್ಯ ಅವರ ಈ ಹೇಳಿಕೆಗಳು ಕನ್ನಡದ ಬಹುತೇಕ ಮಾಧ್ಯಮಗಳಲ್ಲಿ ಪ್ರಸಾರವಾಗಿದ್ದು, ಈ ಹೇಳಿಕೆಗಳು ಸಮಾಜದಲ್ಲಿ ವಿಷ ಪಸರಿಸುವಂತ ಹೇಳಿಕೆಗಳಾಗಿವೆ ಎಂದು ಬಿಜೆಪಿ ಹೇಳಿದೆ.

ಸೌಮ್ಯ ಸ್ವಭಾವದ ಎಚ್ ವಿಶ್ವನಾಥ್ ಗುಟುರು: ಅಸಲಿ ಸೂತ್ರಧಾರ ಯಾರು? ಸೌಮ್ಯ ಸ್ವಭಾವದ ಎಚ್ ವಿಶ್ವನಾಥ್ ಗುಟುರು: ಅಸಲಿ ಸೂತ್ರಧಾರ ಯಾರು?

ಸಿದ್ದರಾಮಯ್ಯ ವಿರುದ್ಧ ಚುನಾವಣಾ ಆಯೋಗವು ಶೀಘ್ರವಾಗಿ ಕ್ರಮಕೈಗೊಳ್ಳಬೇಕು, 72 ಗಂಟೆ ಕಾಲ ಸಿದ್ದರಾಮಯ್ಯ ಅವರು ಪ್ರಚಾರ ಮಾಡದಂತೆ ಆಯೋಗವು ನಿಷೇಧ ಹೇರಬೇಕೆಂದು ಬಿಜೆಪಿ ಒತ್ತಾಯ ಮಾಡಿದೆ.

English summary
Karnataka BJP alleged that Siddaramaiah attacking Narendra Modi personally in his election campaign speeches. BJP demand election commission that Siddaramaiah should ban from campaigning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X