• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೋದಿ ವಿರುದ್ಧ ಹೇಳಿಕೆ: ಬೇಳೂರು ಗೋಪಾಲಕೃಷ್ಣ ವಿರುದ್ಧ ಬಿಜೆಪಿ ನಿಯೋಗ ದೂರು

|

ಬೆಂಗಳೂರು, ಮಾರ್ಚ್ 6: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿರುವ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ವಿರುದ್ಧ ಬಿಜೆಪಿ ಆಯೋಗವು ಪೊಲೀಸ್ ಕಮಿಷನ್‌ಗೆ ದೂರು ನೀಡಿದೆ.

ಬೇಳೂರು ಗೋಪಾಲಕೃಷ್ಣ ಉದ್ಧಟತನ ಹೇಳಿಕೆ: ಬಿಜೆಪಿಗರ ಉಗ್ರ ಪ್ರತ್ಯುತ್ತರ

ಕಾರ್ಯಕ್ರಮವೊಂದರಲ್ಲಿ ಬೇಳೂರು ಗೋಪಾಲಕೃಷ್ಣ ಅವರು ಉದ್ಧಟತನದ ಮಾತನಾಡಿದ್ದರು. ಪ್ರಜಾಪ್ರಭುತ್ವ ವ್ಯವಸ್ಥೆಯ ವಿರುದ್ಧ ಹೋಗುವವರನ್ನು ನಿಮಗೆ ತಾಕತ್ತಿದ್ದರೆ ನಿಮ್ಮ ಮೋದಿಯವರನ್ನು ಮೊದಲು ಗುಂಡಿಕ್ಕಿ ಸಾಯಿಸಿ ಎಂದು ಹೇಳಿದ್ದರು.

ಬೇಕಾದರೆ ಪ್ರಧಾನಿ ಮೋದಿಯನ್ನು ಗುಂಡಿಕ್ಕಿ ಸಾಯಿಸಿ: ಬೇಳೂರು ಗೋಪಾಲಕೃಷ್ಣ ಉದ್ದಟತನ

ಮೋದಿಯನ್ನು ಸಾಯಿಸಿದರೆ ಈ ದೇಶದಲ್ಲಿ ಬೇರೆ ಯಾರನ್ನೂ ಸಾಯಿಸುವ ಅಗತ್ಯವಿಲ್ಲ ಎನ್ನುವ ವಿವಾದಾತ್ಮಕ ಹೇಳಿಕೆಗೆ ಬಿಜೆಪಿ ವಲಯದಿಂದ ಭಾರಿ ವಿರೋಧ ವ್ಯಕ್ತವಾಗಿದೆ. ಇಷ್ಟೇ ಅಲ್ಲದೆ ಕಾಂಗ್ರೆಸ್‌ ಮುಖಂಡರು ಕೂಡ ಗೋಪಾಲಕೃಷ್ಣ ಅವರು ಆಡಿರುವ ಮಾತು ತಪ್ಪು ಆ ರೀತಿ ಮಾತನಾಡಬಾರದಿತ್ತು ಎಂದೇ ಹೇಳಿದ್ದಾರೆ.

ಪ್ರಧಾನಿಯವರನ್ನು ಸಾಯಿಸಿ ಎನ್ನುವವರು ದೇಶಕ್ಕೆ ಅಪಾಯಕಾರಿ ಮನುಷ್ಯನಾಗುತ್ತಾರೆ. ಇಂತವರ ವಿರುದ್ದ ತುರ್ತಾಗಿ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ, ಕೇಂದ್ರ ಗೃಹಸಚಿವಾಲಯ ಮತ್ತು ಬೆಂಗಳೂರು ಪೊಲೀಸ್ ಕಮಿಷನರ್ ಅವರನ್ನು ಟ್ಯಾಗ್ ಮಾಡಿ, ಟ್ವೀಟ್ ಮಾಡಿತ್ತು. ಇದೀಗ ಪೊಲೀಸ್ ಠಾಣೆಯ ಮೆಟ್ಟಿಲನ್ನು ಏರಿದೆ.

English summary
BJP commission filed complaint against Former MLA Beluru Gopalakrihna statement against Prime minister Narendra Modi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X