‘ಬಿಜೆಪಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವವರಿಗಿಂತ ರಾಜೀನಾಮೆ ಸಲ್ಲಿಕೆ...’
ಬೆಂಗಳೂರು: ಬಿಜೆಪಿ ಮತ್ತು ಕಾಂಗ್ರೆಸ್ ನಡುವಿನ ಸೋಷಿಯಲ್ ಮೀಡಿಯಾ ವಾರ್ ಮುಂದುವರಿದಿದೆ. ಎರಡೂ ಪಕ್ಷಗಳ ಅಧಿಕೃತ ಟ್ವಿಟ್ಟರ್ ಅಕೌಂಟ್ ಮೂಲಕ ರಾಜಕೀಯ ದಂಗಲ್ ಮುಂದುವರಿದಿದೆ. ಇದೀಗ ಬಿಜೆಪಿಯ ರಾಜೀನಾಮೆ ಪರ್ವಕ್ಕೆ ಗೇಲಿ ಮಾಡಿರುವ ಕಾಂಗ್ರೆಸ್, 'ಬಿಜೆಪಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವವರಿಗಿಂತ ರಾಜೀನಾಮೆ ಪತ್ರ ಸಲ್ಲಿಕೆ ಮಾಡುವವರೇ ಹೆಚ್ಚಿದ್ದಾರೆ!' ಎಂದಿದೆ.
ಮಾಡರ್ನ್ ಜಗತ್ತಿನಲ್ಲಿ ಎಲ್ಲವೂ ಆನ್‌ಲೈನ್ ಮಯ ಆಗೋಗಿದೆ. ಹೀಗಾಗಿ ಸೋಷಿಯಲ್ ಮೀಡಿಯಾ ಮೂಲಕವೇ ರಾಜಕೀಯ ಪಕ್ಷಗಳ ಫೈಟ್ ಮುಂದುವರಿದಿದೆ. ಬಿಜೆಪಿ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿ ಕಾಲೆಳೆದಿದ್ದು, 'ಬಿಜೆಪಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವವರಿಗಿಂತ ರಾಜೀನಾಮೆ ಪತ್ರ ಸಲ್ಲಿಕೆ ಮಾಡುವವರೇ ಹೆಚ್ಚಿದ್ದಾರೆ! ಮುಳುಗುವ ಹಡಗಿನಿಂದ ಹೊರಜಿಗಿದು ಬದುಕುಳಿಯುವ ಅಭಿಯಾನ ಇದು! ಚಿತ್ತಾಪುರ ಕ್ಷೇತ್ರದಲ್ಲಿ 3 ಭಾರಿ ಶಾಸಕರಾಗಿದ್ದ ಬಿಜೆಪಿಯ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಅವರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ' ಎಂದಿದೆ.

ಬಿಜೆಪಿ ಕೂಡ ಕಾಂಗ್ರೆಸ್ ಆರೋಪಕ್ಕೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. 'ಅದಾನಿ ವಿಚಾರದಲ್ಲಿ ನಿನ್ನೆ ರಾಹುಲ್ ಗಾಂಧಿ ಮಾಡಿದ್ದ ಭಾಷಣಕ್ಕೆ ತಿರುಗೇಟು ನೀಡಿರುವ ರಾಜ್ಯ ಬಿಜೆಪಿ ಘಟಕ, ಕಡೇದಾಗಿ ಒಂದು ಕಿವಿಮಾತು ಕಿಂದರಿಜೋಗಿ @RahulGandhiಯವರೇ - ಉದ್ಯಮಿ ಅದಾನಿ ಬಗ್ಗೆ ಕರ್ನಾಟಕದಲ್ಲಿ ಕಿಂದರಿ ಬಾರಿಸುವ ಬದಲು, ನಿಮ್ಮದೇ ಸರ್ಕಾರಗಳಿರುವ ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ನಿಮ್ಮ ಕೈಗೊಂಬೆ ಮುಖ್ಯಮಂತ್ರಿಗಳಿಗೆ ಬೆತ್ತಹಿಡಿದ ಮೇಷ್ಟ್ರ ಥರ ಯಾಕಿನ್ನೂ ಪಾಠ ಮಾಡಿಲ್ಲ? ನಿಮಗಿಂತ ಗೋಸುಂಬೆಗಳೇ ಅದೆಷ್ಟೋ ಮೇಲು.' ಟ್ವೀಟ್ ಮಾಡಲಾಗಿದೆ.
ಬಿಜೆಪಿಯಲ್ಲಿ ನಾಮಪತ್ರ ಸಲ್ಲಿಕೆ ಮಾಡುವವರಿಗಿಂತ ರಾಜೀನಾಮೆ ಪತ್ರ ಸಲ್ಲಿಕೆ ಮಾಡುವವರೇ ಹೆಚ್ಚಿದ್ದಾರೆ!
— Karnataka Congress (@INCKarnataka) April 17, 2023
ಮುಳುಗುವ ಹಡಗಿನಿಂದ ಹೊರಜಿಗಿದು ಬದುಕುಳಿಯುವ ಅಭಿಯಾನ ಇದು!
ಚಿತ್ತಾಪುರ ಕ್ಷೇತ್ರದಲ್ಲಿ 3 ಭಾರಿ ಶಾಸಕರಾಗಿದ್ದ ಬಿಜೆಪಿಯ ಮಾಜಿ ಶಾಸಕ ವಿಶ್ವನಾಥ್ ಪಾಟೀಲ್ ಹೆಬ್ಬಾಳ ಅವರು ಬಿಜೆಪಿಗೆ ರಾಜೀನಾಮೆ ಸಲ್ಲಿಸಿದ್ದಾರೆ. pic.twitter.com/WA9GNGQIPN
'ಲಿಂಗಾಯತ ನಾಯಕರ ಬೆನ್ನಿಗೆ ಚೂರಿ'
ಬಿಜೆಪಿ ತನ್ನ ಟ್ವೀಟ್‌ನಲ್ಲಿ ಬಳಸಿದ 'ಗೋಸುಂಬೆ' ಪದಕ್ಕೆ ತಿರುಗೇಟು ನೀಡಿರುವ ಕಾಂಗ್ರೆಸ್, 'ಲಿಂಗಾಯತ ನಾಯಕರ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ತಿರುಗಿ ಬೀಳುತ್ತಿದ್ದಂತೆಯೇ ಊಸರವಳ್ಳಿ ಬಣ್ಣ ಬದಲಿಸಿದೆ ಬಿಜೆಪಿ. ಹಿಂದುಳಿದವರ ಕೈಗೆ ನಾಯಕತ್ವ ಕೊಡುತ್ತೇವೆ, ದಲಿತರ ಕೈಗೆ ನಾಯಕತ್ವ ಕೊಡುತ್ತೇವೆ, ಶೋಷಿತರ ಕೈಗೆ ಅಧಿಕಾರ ಕೊಡುತ್ತೇವೆ ಎಂದು @BJP4Karnataka ಹೇಳುವುದಿಲ್ಲವೇಕೆ? ಇದೇನಾ ಸಾಮಾಜಿಕ ನ್ಯಾಯ?' ಎಂದು ಪ್ರಶ್ನೆ ಮಾಡಲಾಗಿದೆ. ಈ ಮೂಲಕ ಕಾಂಗ್ರೆಸ್ ಹಾಗೂ ಬಿಜೆಪಿ ಟ್ವೀಟ್ ಫೈಟ್ ಅಡೆತಡೆ ಇಲ್ಲದೆ ಮುನ್ನುಗ್ಗುತ್ತಿದೆ.
ಕಡೇದಾಗಿ ಒಂದು ಕಿವಿಮಾತು ಕಿಂದರಿಜೋಗಿ @RahulGandhiಯವರೇ - ಉದ್ಯಮಿ ಅದಾನಿ ಬಗ್ಗೆ ಕರ್ನಾಟಕದಲ್ಲಿ ಕಿಂದರಿ ಬಾರಿಸುವ ಬದಲು, ನಿಮ್ಮದೇ ಸರ್ಕಾರಗಳಿರುವ ರಾಜಸ್ಥಾನ ಮತ್ತು ಹಿಮಾಚಲ ಪ್ರದೇಶದ ನಿಮ್ಮ ಕೈಗೊಂಬೆ ಮುಖ್ಯಮಂತ್ರಿಗಳಿಗೆ ಬೆತ್ತಹಿಡಿದ ಮೇಷ್ಟ್ರ ಥರ ಯಾಕಿನ್ನೂ ಪಾಠ ಮಾಡಿಲ್ಲ?
— BJP Karnataka (@BJP4Karnataka) April 17, 2023
ನಿಮಗಿಂತ ಗೋಸುಂಬೆಗಳೇ ಅದೆಷ್ಟೋ ಮೇಲು.
5/5 pic.twitter.com/4PR0X5djRn
ಇಷ್ಟುದಿನ ಚುನಾವಣೆಗಳಲ್ಲಿ ರಾಜಕಾರಣಿಗಳು ಸಭೆ ಮತ್ತು ಸಮಾರಂಭದಲ್ಲಿ ಆರೋಪ & ಪ್ರತ್ಯಾರೋಪ ಮಾಡುವುದನ್ನ ನೋಡಿದ್ದೇವೆ. ಇದೀಗ ಎಲ್ಲಾ ಸೋಷಿಯಲ್ ಮೀಡಿಯಾಗೆ ಶಿಫ್ಟ್ ಆಗಿದ್ದು, ಎರಡೂ ಪಕ್ಷಗಳ ನಡುವೆ ಫೈಟ್ ಕೂಡ ಜೋರಾಗಿದೆ. ಈಗಾಗಲೇ ಬಹುತೇಕ ಎಲ್ಲಾ ಕ್ಷೇತ್ರಗಳನ್ನು ಫೈನಲ್ ಮಾಡಿರುವ ಬಿಜೆಪಿ ಮತ್ತು ಕಾಂಗ್ರೆಸ್, ಬಂಡಾಯದ ಕಾರಣಕ್ಕೆ ಕೆಲ ಕ್ಷೇತ್ರಗಳನ್ನು ಖಾಲಿ ಬಿಟ್ಟುಕೊಂಡಿದೆ. ಇಂದು ಬಹುತೇಕ ಆ ಎಲ್ಲಾ ಕ್ಷೇತ್ರಗಳ ಹೆಸರು ಫೈನಲ್ ಆಗುವ ನಿರೀಕ್ಷೆ ಇದೆ. ಈ ಮೂಲಕ ಮತ್ತೊಂದು ಹಂತದ ಟ್ವೀಟ್ ವಾರ್‌ಗೆ ಎರಡೂ ಪಕ್ಷಗಳು ಸಿದ್ಧತೆ ನಡೆಸಿವೆ.
ಲಿಂಗಾಯತ ನಾಯಕರ ಬೆನ್ನಿಗೆ ಚೂರಿ ಹಾಕಿದ ಬಿಜೆಪಿ ವಿರುದ್ಧ ಲಿಂಗಾಯತ ಸಮುದಾಯ ತಿರುಗಿ ಬೀಳುತ್ತಿದ್ದಂತೆಯೇ ಊಸರವಳ್ಳಿ ಬಣ್ಣ ಬದಲಿಸಿದೆ ಬಿಜೆಪಿ.
— Karnataka Congress (@INCKarnataka) April 17, 2023
ಹಿಂದುಳಿದವರ ಕೈಗೆ ನಾಯಕತ್ವ ಕೊಡುತ್ತೇವೆ,
ದಲಿತರ ಕೈಗೆ ನಾಯಕತ್ವ ಕೊಡುತ್ತೇವೆ,
ಶೋಷಿತರ ಕೈಗೆ ಅಧಿಕಾರ ಕೊಡುತ್ತೇವೆ ಎಂದು @BJP4Karnataka ಹೇಳುವುದಿಲ್ಲವೇಕೆ?
ಇದೇನಾ ಸಾಮಾಜಿಕ ನ್ಯಾಯ? pic.twitter.com/qB9lKRVeWP
ಒಟ್ನಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು 'ಕೈ' ಪಡೆಗೆ ಶಕ್ತಿ ಬಂದಂತಾಗಿದೆ. ಇದೇ ವಿಚಾರವನ್ನ ಮುಂದಿಟ್ಟುಕೊಂಡು ಕರ್ನಾಟಕ ಕಾಂಗ್ರೆಸ್ ಘಟಕ ಬಿಜೆಪಿ ನೀತಿಯ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರೆ, ಮತ್ತೊಂದು ಕಡೆ ಕಾಂಗ್ರೆಸ್ ಲೋಪಗಳನ್ನು ಬಿಜೆಪಿ ಜನರ ಮುಂದೆ ಇಡುವ ಪ್ರಯತ್ನ ಮಾಡುತ್ತಿದೆ. ಎರಡೂ ಕಡೆ ಸಮನವಾದ ಫೈಟ್ ನಿರೀಕ್ಷಿಸಲಾಗುತ್ತಿದ್ದು, ನಾಮಿನೇಷನ್ ಗಡುವು ಮುಗಿದ ಬಳಿಕ ಅಸಲಿ ಆಟಕ್ಕೆ ಕರ್ನಾಟಕದ ರಾಜಕೀಯ ವೇದಿಕೆ ಸಜ್ಜಾಗಿದೆ.












Click it and Unblock the Notifications