Bengaluru: ಹೆಸರಘಟ್ಟದಲ್ಲಿ ಹಕ್ಕಿಜ್ವರ ದೃಢ: ಜನತೆಗೆ ಆತಂಕ ಬೇಡ ಎಂದ ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರವಲಯದ ಹೆಸರಘಟ್ಟ ಸಮೀಪದ ಮತ್ಕೂರು ಗ್ರಾಮದಲ್ಲಿ ಇದೀಗ ಹಕ್ಕಿಜ್ವರ (H5N1) ದೃಢಪಟ್ಟಿದ್ದು, ಸಾರ್ವಜನಿಕರಲ್ಲಿ ಕೊಂಚ ಆತಂಕ ಮನೆಮಾಡಿದೆ. ಆದರೆ, ಸಾರ್ವಜನಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರು ಸ್ಪಷ್ಟಪಡಿಸಿದ್ದಾರೆ. ಜನರು ಯಾವುದೇ ಕಾರಣಕ್ಕೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಅಭಯ ನೀಡಿದ್ದಾರೆ.

ಮತ್ಕೂರು ಗ್ರಾಮದಲ್ಲಿರುವ ಕೋಳಿ ಸಾಕಾಣಿಕೆ ತರಬೇತಿ ಕೇಂದ್ರದಲ್ಲಿ ಹಕ್ಕಿಜ್ವರದ ಪ್ರಕರಣ ದೃಢಪಟ್ಟ ತಕ್ಷಣವೇ ಎಚ್ಚೆತ್ತುಕೊಂಡಿರುವ ಆರೋಗ್ಯ ಮತ್ತು ಪಶುಸಂಗೋಪನಾ ಇಲಾಖೆಯ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ತಕ್ಷಣವೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಮತ್ಕೂರು ಗ್ರಾಮದ ಸುತ್ತಲಿನ 3 ಕಿಲೋಮೀಟರ್ ಪ್ರದೇಶವನ್ನು 'ಸೋಂಕಿತ ವಲಯ' ಎಂದು ಘೋಷಿಸಲಾಗಿದೆ. ಜೊತೆಗೆ, 10 ಕಿಲೋಮೀಟರ್ ವ್ಯಾಪ್ತಿಯನ್ನು 'ಕಣ್ಗಾವಲು ವಲಯ' ಎಂದು ಗುರುತಿಸಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದಾರೆ.

Bird Flu

ಸೋಂಕು ಮತ್ತಷ್ಟು ಹರಡದಂತೆ ತಡೆಯಲು ಈಗಾಗಲೇ ಕಠಿಣ ಹೆಜ್ಜೆಗಳನ್ನು ಇಡಲಾಗಿದೆ. ಇದರ ಭಾಗವಾಗಿ ಸುಮಾರು 7,444 ಕೋಳಿಗಳು ಹಾಗೂ 14,788 ಮೊಟ್ಟೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಈ ಕಾರ್ಯಾಚರಣೆಯಲ್ಲಿ ನೇರವಾಗಿ ತೊಡಗಿಸಿಕೊಂಡಿದ್ದ 10 ಮಂದಿ ಸಿಬ್ಬಂದಿಗಳನ್ನು ಮುನ್ನೆಚ್ಚರಿಕಾ ಕ್ರಮವಾಗಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿದ್ದು, ಅವರನ್ನು ನಿರಂತರ ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ ಎಂದು ಸಚಿವರು ತಮ್ಮ ಅಧಿಕೃತ 'ಎಕ್ಸ್' ಖಾತೆಯಲ್ಲಿ ವಿವರವಾದ ಮಾಹಿತಿ ಹಂಚಿಕೊಂಡಿದ್ದಾರೆ.

Viral: ಪದವಿ ಕೇವಲ ಎಂಟ್ರಿ ಟಿಕೆಟ್; ಕಾರ್ಪೊರೇಟ್ ಜಗತ್ತಿನಲ್ಲಿ ಡಿಗ್ರಿ ಉಪಯೋಗಕ್ಕೆ ಬಂದಿದ್ದು ಶೇ.3ರಷ್ಟು ಮಾತ್ರ ಎಂದ ಯುವತಿ
Viral: ಪದವಿ ಕೇವಲ ಎಂಟ್ರಿ ಟಿಕೆಟ್; ಕಾರ್ಪೊರೇಟ್ ಜಗತ್ತಿನಲ್ಲಿ ಡಿಗ್ರಿ ಉಪಯೋಗಕ್ಕೆ ಬಂದಿದ್ದು ಶೇ.3ರಷ್ಟು ಮಾತ್ರ ಎಂದ ಯುವತಿ

ರೋಗ ಹರಡುವಿಕೆಯನ್ನು ತಡೆಯುವ ನಿಟ್ಟಿನಲ್ಲಿ ಮುಂದಿನ 10 ದಿನಗಳ ಕಾಲ ಸೋಂಕಿತ ಪ್ರದೇಶದ ಸುತ್ತಮುತ್ತಲಿನ 19 ಗ್ರಾಮಗಳಲ್ಲಿ ಆರೋಗ್ಯ ಕಾರ್ಯಕರ್ತರು ಮನೆ-ಮನೆಗೆ ಭೇಟಿ ನೀಡಿ ಜ್ವರದ ಬಗ್ಗೆ ಕಣ್ಗಾವಲು ನಡೆಸಲಿದ್ದಾರೆ. ಯಾವುದೇ ರೀತಿಯ ಶೀತ, ಜ್ವರ, ಕೆಮ್ಮು ಲಕ್ಷಣಗಳಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಹೆಸರಘಟ್ಟ ಹಾಗೂ ಸೊನ್ನೆನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯಕೀಯ ಸಿಬ್ಬಂದಿಗೆ ಅಗತ್ಯವಿರುವ ಪಿಪಿಇ ಕಿಟ್‌ಗಳು, ಮಾಸ್ಕ್ ಹಾಗೂ ಜೀವರಕ್ಷಕ ಔಷಧಗಳ ದಾಸ್ತಾನು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದೆ ಎಂದು ಸರ್ಕಾರ ಖಚಿತಪಡಿಸಿದೆ.

ಸಾರ್ವಜನಿಕರಿಗೆ ಸರ್ಕಾರದ ಮನವಿ

ಹಕ್ಕಿಜ್ವರದ ಭೀತಿಯ ಹಿನ್ನೆಲೆಯಲ್ಲಿ ಸರ್ಕಾರವು ನಾಗರಿಕರಿಗೆ ಕೆಲವು ಪ್ರಮುಖ ಮಾರ್ಗಸೂಚಿ ಮತ್ತು ಸಲಹೆಗಳನ್ನು ನೀಡಿದೆ. ರಸ್ತೆ ಬದಿಯಲ್ಲಿ ಅಥವಾ ಎಲ್ಲೇ ಆಗಲಿ ಅನಾರೋಗ್ಯ ಪೀಡಿತ ಅಥವಾ ಸತ್ತ ಹಕ್ಕಿಗಳ ಸಂಪರ್ಕಕ್ಕೆ ಬರಬೇಡಿ. ಅಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ನಿಮ್ಮ ಸಮೀಪದ ಸ್ಥಳೀಯ ಆರೋಗ್ಯ ಇಲಾಖೆ ಅಥವಾ ಪಶುಸಂಗೋಪನಾ ಇಲಾಖೆಗೆ ಮಾಹಿತಿ ನೀಡಿ.

ಬೆಂಗಳೂರಲ್ಲಿ ಜನಗಣತಿ ಸ್ವಯಂ ನೋಂದಣಿಗೆ ಕೇವಲ 2% ಸ್ಪಂದನೆ; ಮನೆ ಮನೆ ಸಮೀಕ್ಷೆ ಶುರು, ಮಾಹಿತಿ ನೀಡದಿದ್ದರೆ ಕಾನೂನು ಕ್ರಮ
ಬೆಂಗಳೂರಲ್ಲಿ ಜನಗಣತಿ ಸ್ವಯಂ ನೋಂದಣಿಗೆ ಕೇವಲ 2% ಸ್ಪಂದನೆ; ಮನೆ ಮನೆ ಸಮೀಕ್ಷೆ ಶುರು, ಮಾಹಿತಿ ನೀಡದಿದ್ದರೆ ಕಾನೂನು ಕ್ರಮ

ಕೋಳಿ ಮಾಂಸ ಮತ್ತು ಮೊಟ್ಟೆಗಳ ಸೇವನೆಯ ಬಗ್ಗೆ ಭಯ ಬೇಡ, ಆದರೆ ಚೆನ್ನಾಗಿ ಬೇಯಿಸಿದ ಮಾಂಸ ಹಾಗೂ ಮೊಟ್ಟೆಗಳನ್ನು ಮಾತ್ರ ಸೇವಿಸುವುದು ಸಂಪೂರ್ಣ ಸುರಕ್ಷಿತವಾಗಿದೆ. ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಹಕ್ಕಿ ಜ್ವರದ ಕುರಿತು ಯಾವುದೇ ಮಾಹಿತಿ ಸಿಕ್ಕಲ್ಲಿ ಅಥವಾ ಅನುಮಾನವಿದ್ದಲ್ಲಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಹಾಗೂ ಪಶು ಚಿಕಿತ್ಸಾಲಯಗಳಿಗೆ ಮಾಹಿತಿ ನೀಡಿ ಸರ್ಕಾರದ ಕಾರ್ಯಾಚರಣೆಗೆ ಸಹಕರಿಸಬೇಕು ಎಂದು ಮನವಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+