ಮಾಜಿ ಕಾರ್ಪೊರೇಟರ್ ಪತಿ ಮಿಸ್ಸಿಂಗ್: ನಂದಗುಡಿ ಬಳಿ ಕಾರು ಪತ್ತೆ, ಲೋಹಿತ್ ಸುಳಿವು ಇಲ್ಲ!
ಬೆಂಗಳೂರು, ಏ. 04: ಬೆಂಗಳೂರಿನ ಬಿನ್ನಿಪೇಟೆ ಜೆಡಿಎಸ್ ಮಾಜಿ ಕಾರ್ಪೋರೇಟರ್ ಐಶ್ವರ್ಯಾ ನಾಗರಾಜ್ ಅವರ ಪತಿ ಲೋಹಿತ್ ನಾಲ್ಕು ದಿನಗಳ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದಾರೆ .ಲೋಹಿತ್ ತೆರಳಿದ್ದ ಕಾರು ಚಿಂತಾಮಣಿ ರಸ್ತೆಯಲ್ಲಿ ಪತ್ತೆಯಾಗಿದ್ದು, ಕಾರಿನೊಳಗೆ ರಕ್ತದ ಗುರುತುಗಳು ಕಂಡುಬಂದಿವೆ. ಈ ಸಂಬಂಧ ನಂದಗುಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಬಿನ್ನಿಪೇಟೆ ಲೋಹಿತ್ ಯಾರು?:
ಲಿಂಗರಾಜಪುರ ನಿವಾಸಿ ಲೋಹಿತ್. ಐಶ್ವರ್ಯಾ ನಾಗರಾಜ್ ಅವರನ್ನು ಪ್ರೀತಿಸಿ ಹತ್ತು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಎಂಟು ವರ್ಷದ ಭುವನ್ ಎಂಬ ಪುತ್ರನಿದ್ದಾನೆ. ನಾಲ್ಕು ವರ್ಷದಿಂದ ಲೋಹಿತ್ ಮತ್ತು ಐಶ್ವರ್ಯಾ ನಾಗರಾಜ್ ತವರು ಮನೆಯಲ್ಲಿಯೇ ಇದ್ದು, ಲೋಹಿತ್ ಕಮಲಾನಗರದ ಪುಷ್ಪಾಂಜಲಿ ಚಿತ್ರಮಂದಿರ ಬಳಿ ಕಾರ್ ಗ್ಯಾರೇಜ್ ಇಟ್ಟುಕೊಂಡಿದ್ದರು. ರೇಸ್ ಕಾರ್ ಮತ್ತು ರೇಸ್ ಬೈಕ್ ಇವೆಂಟ್ ಆಯೋಜಿಸುತ್ತಿದ್ದ.

ಮಾ. 28 ರಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಎಂದಿನಂತೆ ಗ್ಯಾರೇಜ್‌ಗೆ ಹೋಗಿದ್ದಾರೆ. ಅವತ್ತು ರಾತ್ರಿ 11 ಗಂಟೆಯಾದರೂ ವಾಪಸು ಬಂದಿಲ್ಲ. ಹೀಗಾಗಿ ಪೋನ್ ಮಾಡಿದರೆ ಪೋನ್ ಸ್ವಿಚ್ ಆಫ್ ಆಗಿದೆ. ಪಾರ್ಟಿಗೆ ಹೋಗಿರಬಹುದೆಂದು ಕುಟುಂಬಸ್ಥರು ಸುಮ್ಮನಾಗಿದ್ದಾರೆ. ಮರು ದಿನ ಬೆಳಗ್ಗೆ ಪೋನ್ ಮಾಡಿದ್ರೂ ಸ್ವಿಚ್ ಆಫ್ ಆಗಿದೆ. ನಂತರ ಗ್ಯಾರೇಜ್‌ನಲ್ಲಿ ಕೆಲಸ ಮಾಡುವ ನಿತಿನ್ ಎಂಬ ಹುಡುಗಿನಗೆ ಪೋನ್ ಮಾಡಿದಾಗ, ಲೋಹಿತ್ ತಾನು ಹಳೇ ಊರಿಗೆ ಹೋಗುತ್ತಿದ್ದು, ಸ್ನೇಹಿತ ಹಣ ಕೊಡಬೇಕಿದ್ದು, ಹಾಗೇಯೇ ಜಮೀನು ನೋಡಿಕೊಂಡು ಬರುತ್ತೇನೆ ಎಂದು ಹೇಳಿ ಹೋಗಿದ್ದಾಗಿ ತಿಳಿಸಿದ್ದಾನೆ. ಪುನಃ ಪೋನ್ ಮಾಡಿದಾಗ, ಕಾರು ನಂದಗುಡಿ ಸಮೀಪ ಪಂಚರ್ ಆಗಿದೆ. ಸ್ವಲ್ಪ ಹೊತ್ತಿನ ಬಳಿಕ ಪೋನ್ ಮಾಡುತ್ತೇನೆ ಎಂದು ಹೇಳಿದ್ದಾಗಿ ನಿತಿನ್ ಹೇಳಿದ್ದಾನೆ. ಆ ಬಳಿಕ ಪುನಃ ಪೋನ್ ಮಾಡಿದ ನಿತಿನ್ ನನ್ನ ಕರೆ ಸಹ ಸ್ವೀಕರಿಸುತ್ತಿಲ್ಲ ಎಂದು ಕುಟುಂಬಕ್ಕೆ ತಿಳಿಸಿದ್ದಾನೆ.

ಲೋಹಿತ್ ಕಾರು ನಂದಗುಡಿ ಸಮೀಪ ಪಂಚರ್ ಅಗಿರುವ ವಿಚಾರ ತಿಳಿದು ಗಾಬರಿಯಾದ ಐಶ್ವರ್ಯ ನಾಗರಾಜ್ ಕುಟುಂಬಸ್ಥರು ಹುಡುಕಿಕೊಂಡು ಹೋಗಿದ್ದು, ನಂದಗುಡಿ ಪೊಲೀಸ್ ಠಾಣೆ ಸಮೀಪದ ಚಿಂತಾಮಣಿ ರಸ್ತೆಯಲ್ಲಿ ಕಾರು ಪತ್ತೆಯಾಗಿದೆ. ಕಾರಿನಲ್ಲಿ ರಕ್ತದ ಕಲೆಗಳಿದ್ದು, ಕೆಎ 03- N-F- 1467 ಕಾರಿನ ಬಗ್ಗೆ ನಂದಗುಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಈ ಕೂಡಲೇ ಪೊಲೀಸರಿಗೆ ನಂದಗುಡಿ ಪೊಲೀಸರಿಗೆ ದೂರು ನೀಡಿದ್ದು, ನಾಪತ್ತೆ ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ದಾವಿಸಿದ ನಂದಗುಡಿ ಪೊಲೀಸರು ಎಲ್ಲಾ ಆಯಾಮದಲ್ಲಿ ತನಿಖೆ ನಡೆಸುತ್ತಿದ್ದಾರೆ. ಲೋಹಿತ್ ಬಳಸುತ್ತಿದ್ದ ಕಾರು ರಸ್ತೆ ಬದಿ ಪಂಚರ್ ಅಗಿದ್ದು, ಕಾರಿನ ಟೈರ್ ಬಿಚ್ಚಲಾಗಿದೆ. ಆ ಬಳಿಕ ಸಣ್ಣ ಪುಟ್ಟ ರಕ್ತದ ಕಲೆಗಳು ಅಗಿವೆ. ಯಾವ ಕಾರಣಕ್ಕೆ ಹೀಗೆ ಆಗಿದೆ ಗೊತ್ತಿಲ್ಲ. ಲೋಹಿತ್ ಗೆ ಸೇರಿದ ಜಮೀನು ಹತ್ತು ಎಕರೆ ಇಲ್ಲಿದ್ದು, ಬಂದು ಹೋಗುತ್ತಿದ್ದರು. ಇದೇ ಭಾಗದಲ್ಲಿ ಕಾರ್ ಮತ್ತು ಬೈಕ್ ರೇಸ್ ಆಯೋಜನೆ ಮಾಡುತ್ತಿದ್ದರು. ಈ ಭಾಗದಲ್ಲಿ ಆತನಿಗೆ ಯಾರೂ ಶತ್ರುಗಳು ಇರಲಿಲ್ಲ. ಎಲ್ಲಾ ಅಯಾಮದಲ್ಲಿ ತನಿಖೆ ನಡೆಸುತ್ತಿದ್ದೇವೆ ಎಂದು ನಂದಗುಡಿ ಪೊಲೀಸರು ತಿಳಿಸಿದ್ದಾರೆ.
Recommended Video













Click it and Unblock the Notifications