ಬೈಪಾಸ್‌ನಲ್ಲಿ ಚಲಿಸುತ್ತಿದ್ದ ಬೈಕ್‌ನಲ್ಲಿ ಏಕಾಏಕಿ ಬೆಂಕಿ, ಸವಾರ ಪಾರು
ಬೆಂಗಳೂರು, ಮೇ 4: ಕರ್ನಾಟಕ-ತಮಿಳುನಾಡು ಗಡಿ ಸುಲಗಿರಿಯ ಬೈಪಾಸ್ ಬಳಿ ಬೈಕ್ ಒಂದಕ್ಕೆ ಚಲಿಸುತ್ತಿರುವಾಗಲೇ ಏಕಾಏಕಿ ಬೆಂಕಿ ಹೊತ್ತಿಕೊಂಡ ಘಟನೆ ನಡೆದಿದೆ.
ಅದೃಷ್ಟವಶಾತ್ ಸವಾರ ಓಡಿಹೋಗಿ ಜೀವ ಉಳಿಸಿಕೊಂಡಿದ್ದಾನೆ.ಸವಾರ ಬೈಕಿನಲ್ಲಿ ಹೋಗುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸವಾರ ಬೈಕ್ ಬಿಟ್ಟು ಓಡಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಕಣ್ಣೆದುರಿಗೆ ಬೈಕ್ ಸುಟ್ಟು ಕರಕಲಾಗಿದೆ.

ಸಮೀಪದಲ್ಲೇ ತೆರಳುತ್ತಿದ್ದ ನೀರಿನ ಟ್ಯಾಂಕರ್‌ನ್ನು ತಡೆದು ನಿಲ್ಲಿಸಿ, ಅದರಲ್ಲಿರುವ ನೀರು ಬಳಸಿಕೊಂಡು ಬೈಕ್‌ಗೆ ಹತ್ತಿದ್ದ ಬೆಂಕಿಯನ್ನು ಹತೋಟಿಗೆ ತರಲಾಯಿತು. ಬೈಕ್ ಬಿಟ್ಟು ಸವಾರ ಓಡಿ ಹೋಗಿದ್ದರಿಂದ ಪ್ರಾಣ ಉಳಿಯಿತು. ಸ್ಥಳಕ್ಕೆ ಸೂಲಗಿರಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications