• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

2,000 ಕೋಟಿ ರುಪಾಯಿ ಜಿಎಸ್ ಟಿ ವಂಚನೆ ಹಗರಣ ಬೆಂಗ್ಳೂರಲ್ಲಿ ಬಯಲು

|

ಬೆಂಗಳೂರು, ಸೆಪ್ಟೆಂಬರ್ 26: ಈ ವರೆಗೆ ದೇಶದಲ್ಲಿ ನಡೆದ ಅತಿ ದೊಡ್ಡ ಮಟ್ಟದ ಜಿಎಸ್ ಟಿ ವಂಚನೆ ಹಗರಣ ಯಾವುದು? ಇದೀಗ ಆ ಕುಖ್ಯಾತಿ ಕರ್ನಾಟಕಕ್ಕೆ ಸೇರಿದೆ. ಕರ್ನಾಟಕದ ವಾಣಿಜ್ಯ ತೆರಿಗೆ ಅಧಿಕಾರಿಗಳು ರು. 2,000 ಕೋಟಿ ರುಪಾಯಿಯ ಹಗರಣವನ್ನು ಬಯಲು ಮಾಡಿದ್ದಾರೆ. ಇದರಲ್ಲಿ ಹದಿನಾಲ್ಕು ಸಂಸ್ಥೆಗಳು ಪಾಲ್ಗೊಂಡಿವೆ ಎಂದು ಖಚಿತವಾಗಿದೆ.

ಆ ನಂತರದ ಬೆಳವಣಿಗೆಯಲ್ಲಿ ಹಲವೆಡೆ ದಾಳಿಗಳು ಮುಂದುವರಿದಿವೆ. ತೆರಿಗೆ ಅಧಿಕಾರಿಗಳಿಂದ ಮೂವರನ್ನು ವಶಕ್ಕೆ ಪಡೆಯಲಾಗಿದ್ದು, ವಂಚನೆಗೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ. 203 ಕೋಟಿ ರುಪಾಯಿ ಬೋಗಸ್ ಜಿಎಸ್ ಟಿ ಇನ್ ವಾಯ್ಸ್ ಗಳನ್ನು ನೂರಾರು ಮಂದಿ ಜಿಎಸ್ ಟಿ ಡೀಲರ್ ಗಳಿಗೆ ನೀಡಿದ ಆರೋಪ ಈ ಮೂವರ ಮೇಲಿದೆ.

ಜಿಎಸ್‌ಟಿ ವಂಚನೆ: 'ದಿ ಆಕ್ಸಿಡೆಂಟಲ್ ಪ್ರೈಮ್ ಮಿನಿಸ್ಟರ್' ಸಿನಿಮಾ ನಿರ್ದೇಶಕನ ಬಂಧನ

ಟಿ ದಾಸರಹಳ್ಳಿ, ಚಿಕ್ಕ ಬಾಣಾವರ ಸೇರಿದಂತೆ ಉತ್ತರ ಬೆಂಗಳೂರಿನ ವಿವಿಧೆಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಹಲವು ಲ್ಯಾಪ್ ಟಾಪ್, ಕಂಪ್ಯೂಟರ್, ಡೈರಿಗಳು ಮತ್ತು ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಎಲ್ಲ ದಾಳಿಗಳನ್ನು ಮಂಗಳವಾರ ನಡೆಸಲಾಗಿದೆ.

English summary
Commercial tax sleuths from Karnataka have busted a scam worth Rs 2000 crore. Involvement of 14 firms in the scam is confirmed and the development follows raids at several places.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X