ಶಿಕ್ಷಕರ ಕ್ಷೇತ್ರದ ಚುನಾವಣೆ, ಮಹತ್ವದ ಮಾಹಿತಿ ಇಲ್ಲಿದೆ ನೋಡಿ!

ಬೆಂಗಳೂರು: ಭಾರತೀಯ ಚುನಾವಣಾ ಆಯೋಗ, ಈಗಾಗಲೇ ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸುವ ಬಗ್ಗೆ ವೇಳಾಪಟ್ಟಿ ಪ್ರಕಟಿಸಿದೆ. ಕೆಲವೆ ದಿನದಲ್ಲಿ ಚುನಾವಣೆ ನಡೆಯಲಿದ್ದು ಈ ಕುರಿತು ಈಗ ಮಹತ್ವದ ಮಾಹಿತಿ ಹೊರಬಿದ್ದಿದೆ. ಹಾಗಾದರೆ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯೋದು ಯಾವಾಗ? ಈ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಅಂದಹಾಗೆ ಇದೀಗ ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಉಪ ಚುನಾವಣೆಗೆ ನಿಗದಿಯಾದ ದಿನಾಂಕ ಪ್ರಕಾರ, 16-02-2024ಕ್ಕೆ ಮತದಾನ ನಡೆಯಲಿದೆ. ಹಾಗೇ ದಿನಾಂಕ 20-02-2024 ರಂದು ಮತ ಎಣಿಕೆ ನಡೆಯಲಿದೆ. ಹೀಗಾಗಿ ಇದೀಗ ಅಗತ್ಯ ಇರುವ ಎಲ್ಲಾ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ. ಹಾಗೇ ಚುನಾವಣೆ ಬಗ್ಗೆ ಇನ್ನೂ ಅನೇಕ ಮಾಹಿತಿಯನ್ನ ಈಗ ನೀಡಲಾಗಿದೆ. ಆ ಕುರಿತು ತಿಳಿದುಕೊಳ್ಳಲು ಮುಂದೆ ಓದಿ.

Big Update About The Bengaluru Teachers Constituency Election

ಯಾವಾಗ ನಡೆಯಲಿದೆ ಮತದಾನ?

ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ನಡೆಯುವ, ಉಪ ಚುನಾವಣೆ 2024ರ ಸಂಬಂಧ ಈಗ ಮಹತ್ವದ ಮಾಹಿತಿ ಸಿಕ್ಕಿದೆ. 16.02.2024 ರಂದು ಮತದಾನವನ್ನು ನಡೆಸಿದರೆ, ಕೆಲವೇ ದಿನದಲ್ಲಿ ಫಲಿತಾಂಶ ಕೂಡ ಹೊರಬೀಳಲಿದೆ. ಹಾಗೇ ಚುನಾವಣೆಯ ಹಿನ್ನೆಲೆ, ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾರರಿಗೆ ಬಲಗೈನ ಮಧ್ಯ ಬೆರಳಿಗೆ ಅಳಿಸಲಾಗದ ಶಾಯಿ ಹಚ್ಚುವ ಬಗ್ಗೆ ತಿಳಿಸಲಾಗಿದೆ. ಬೆಂಗಳೂರು ಶಿಕ್ಷಕರ ಕೇತ್ರ ಮತ್ತೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಈ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಾದರಿ ನೀತಿ ಸಂಹಿತೆ ಜಾರಿ

ದಿ. 16.01.2024ರಿಂದ 23.02.2024 ರವರೆಗೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿ ಇರಲಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳಾದ, 150 ಯಲಹಂಕ & 152 ಬ್ಯಾಟರಾಯನಪುರ, 153 ಯಶವಂತಪುರ, 155 ದಾಸರಹಳ್ಳಿ, 174 ಮಹದೇವಪುರ ಮತ್ತೆ 176 ಬೆಂಗಳೂರು ದಕ್ಷಿಣ ಸೇರಿದಂತೆ, 177 ಆನೇಕಲ್ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣೆಗೆ ಸಂಬಂಧಿಸಿದ ಸಾರ್ವಜನಿಕರ ದೂರು ಮತ್ತು ಕುಂದು ಕೊರತೆಗಳ ನಿವಾರಣೆಗಾಗಿ, ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 24/7 ಕಾರ್ಯನಿರ್ವಹಿಸಲು ಕಂಟ್ರೋಲ್ ರೂಂ/ದೂರು ನಿವಾರಣಾ ಕೇಂದ್ರ ಸ್ಥಾಪಿಸಲಾಗಿದೆ.

ಮತದಾರರು, ಸಾರ್ವಜನಿಕರು, ಸಂಘ ಸಂಸ್ಥೆಗಳು & ಇತರರು ಚುನಾವಣೆಗೆ ಸಂಬಂಧಿಸಿದಂತೆ ತಮ್ಮ ದೂರು /ಕುಂದು ಕೊರತೆಗಳನ್ನು ಕಂಟ್ರೋಲ್ ರೂಂ ದೂರು ನಿವಾರಣಾ ಕೇಂದ್ರದಲ್ಲಿನ ಸಹಾಯವಾಣಿ ಸಂಖ್ಯೆ 080-22211106 ಅಥವಾ ಇ-ಮೇಲ್ [email protected] ಮೂಲಕ ಸಲ್ಲಿಸಬಹುದು ಎಂದು ಮಾಹಿತಿ ನೀಡಲಾಗಿದೆ.

Big Update About The Bengaluru Teachers Constituency Election

ಸಾಮಾಜಿಕ ಮಾಧ್ಯಮ ಅಥವಾ ಜಾಲ ತಾಣಗಳಾದ ಫೇಸ್ ಬುಕ್ -Deputy Commissioner, Bengaluru Urban, ಇನ್ ಸ್ಟಾಗ್ರಾಮ್ ಐಡಿ- dc_bangalore_urban, ಟ್ವಿಟರ್ ಐಡಿ- DC_blrurban, ಮೂಲಕವು ದೂರು ಸಲ್ಲಿಸಬಹುದು ಅಂತ ಸಹಾಯಕ ಚುನಾವಣಾಧಿಕಾರಿ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+