ಅತ್ತೆ ಸಾಯಿಸಲು ಡಾಕ್ಟರ್ ಬಳಿ ಮಾತ್ರೆ ಕೇಳಿದ ಕೇಸ್‌ಗೆ ಬಿಗ್ ಟ್ವಿಸ್ಟ್
ಬೆಂಗಳೂರು, ಫೆಬ್ರವರಿ 20: ಬೆಂಗಳೂರಿನ ವೈದ್ಯರ ಬಳಿ ಅತ್ತೆಯನ್ನು ಸಾಯಿಸಲು ಮಾತ್ರೆ ಕೇಳಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವೈದ್ಯ ಸುನಿಲ್ ಕುಮಾರ್ ನೀಡಿದ ದೂರಿನ ಮೇರೆ ವಿಚಾರಣೆ ನಡೆಸಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದ್ದು, ಸಾಯಿಸಲು ಮಾತ್ರೆ ಕೇಳಿದ ಮಹಿಳೆ ಸಾಯಲು ನಿರ್ಧರಿಸಿದ್ದರು ಎನ್ನುವ ಆಘಾತಕಾರಿ ವಿಚಾರ ತಿಳಿದು ಬಂದಿದೆ.
ಮಹಿಳೆಯನ್ನು ವಿಚಾರಣೆ ಮಾಡಿದಾಗ ಅತ್ತೆಯನ್ನು ಸಾಯಿಸಲು ಅಲ್ಲ, ತಾನೇ ಸಾಯಬೇಕಾಗಿತ್ತು ಹಾಗಾಗಿ ವೈದ್ಯರ ಬಳಿ ಮಾತ್ರೆ ಕೇಳಿದ್ದೆ ಎಂದು ಮಹಿಳೆ ಬಾಯ್ಬಿಟ್ಟಿದ್ದಾರೆ ಎನ್ನಲಾಗಿದೆ. ಇನ್ನು ವಿಚಾರಣೆ ವೇಳೆ ಈ ಮಹಿಳೆ ಖಿನ್ನತೆಗೆ ಒಳಗಾಗಿರುವುದು ಕೂಡ ತಿಳಿದು ಬಂದಿದೆ. ಈ ಹಿಂದೆ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ ಮಹಿಳೆ, ಒಮ್ಮೆ ಮನೆಯನ್ನು ಬಿಟ್ಟು ಹೋಗಿದ್ದಾರೆ ಎನ್ನಲಾಗಿದೆ.

ಸಂಪೂರ್ಣವಾಗಿ ಖಿನ್ನತೆಗೆ ಜಾರಿದ್ದ ಮಹಿಳೆ ಗೂಗಲ್‌ನಲ್ಲಿ ಡಾಕ್ಟರ್‌ಗಳ ನಂಬರ್ ಹುಡುಕಿದ್ದು, ಆ ಬಳಿಕ ಡಾ.ಸುನಿಲ್ ನಂಬರ್ ಸಿಕ್ಕಿ ಮೆಸೇಜ್ ಮಾಡಿ ಸಾಯಿಸುವ ಮಾತ್ರೆ ಕೇಳಿದ್ದಾಳೆ. ಆದರೆ ವಿಚಾರಣೆ ವೇಳೆ ಮಹಿಳೆಯೇ ಸಾಯಲು ನಿರ್ಧರಿಸಿರುವ ಮಾಹಿತಿ ತಿಳಿದು ಬಂದಿದ್ದು, ಸದ್ಯ ಮಹಿಳೆಯನ್ನು ಕೌನ್ಸಿಲಿಂಗ್ ರವಾನಿಸಲಾಗಿದೆ. ಅಲ್ಲದೇ ವೈದ್ಯರು ಖಿನ್ನತೆಗೆ ಚಿಕಿತ್ಸೆ ಕೊಡಿಸುವಂತೆ ಮಹಿಳೆಯ ಕುಟುಂಬಸ್ಥರಿಗೆ ಸಲಹೆ ನೀಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ಡಾ. ಸುನಿಲ್ ಕುಮಾರ್ ಅವರ ದೂರವಾಣಿ ಸಂಖ್ಯೆ ಪಡೆದ ಮಹಿಳೆ, ಫೆಬ್ರವರಿ 17ರಂದು ಸಂದೇಶ ಕಳುಹಿಸಿದ್ದಾಳೆ. ಈ ವೇಳೆ ಡಾ. ಸುನಿಲ್ ಕುಮಾರ್ ನೇರವಾಗಿ ಮೆಸೇಜ್ ಮಾಡಿದ ಉದ್ದೇಶವನ್ನು ಕೇಳಿದ್ದಾರೆ. ಈ ವೇಳೆ ಮಹಿಳೆ ಕೊಟ್ಟ ಕಾರಣ ಕೇಳಿ ವೈದ್ಯರೇ ದಂಗಾಗಿದ್ದಾರೆ.
'ನಿಮ್ಮ ಬಳಿ ಹೇಳಲು ಭಯವಾಗುತ್ತಿದೆ. ಅತ್ತೆಯನ್ನು ಸಾಯಿಸುವ ವಿಚಾರ, ಹೇಗೆ ಸಾಯಿಸುವುದು ಅಂತಾ. ತುಂಬಾ ಹಿಂಸೆ ಕೊಡುತ್ತಿದ್ದಾರೆ. ಅದಕ್ಕೆ ನಿಮ್ಮನ್ನು ಕೇಳೋಣ ಅಂತ. ಏನಾದ್ರೂ ಹೇಳ್ತೀರಾ ಹೇಗೆ ಸಾಯಿಸೋದು ಅಂತ. ಪ್ಲೀಸ್ ಹೇಳಿ. ಮಾತ್ರೆ ಇರುತ್ತಲ್ಲ ಅದು ಹೇಳಿ. ಒಂದು, ಎರಡು ತಗೊಂಡ್ರೆ ಸಾಯ್ತಾರಲ್ಲ ಆತರ ಇಲ್ವಾ?' ಎಂದು ಮಹಿಳೆ ಅತ್ತೆಯನ್ನು ಸಾಯಿಸಲು ಮಾತ್ರೆ ಹೇಳಿ ಎಂದು ವೈದ್ಯರ ಬಳಿ ವಾಟ್ಸಾಪ್ ಸಂದೇಶದ ಮೂಲಕ ಕೇಳಿದ್ದಾಳೆ.
ಬಳಿಕ ವೈದ್ಯರು ತಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಮಹಿಳೆ ಕೂಡಲೇ ಸಂದೇಶಗಳನ್ನು ಡಿಲೀಟ್ ಮಾಡಿ ವೈದ್ಯರ ನಂಬರ್ ಬ್ಲಾಕ್ ಮಾಡಿದ್ದಾರೆ ಎನ್ನಲಾಗಿದೆ. ಆದರೆ ಈ ಮಹಿಳೆಯ ಆಲೋಚನೆಯಿಂದ ಶಾಕ್ ಆಗಿರುವ ವೈದ್ಯ ಸುನಿಲ್ ಕುಮಾರ್ ಮೆಸೇಜ್‌ಗಳು ಡಿಲೀಟ್ ಆಗುವ ಮೊದಲೇ ಎಲ್ಲವನ್ನೂ ಸ್ಕ್ರೀನ್ಶಾಟ್ ತೆಗೆದುಕೊಂಡು ಸಂಜಯ್ ನಗರದ ಪೊಲೀಸ್ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ನೀಡಿದ್ದರು.
-
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral -
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್












Click it and Unblock the Notifications