ಶಾಲೆಯಲ್ಲಿ ಬೈಬಲ್ ಬೋಧನೆ: ಆರ್ಚ್ ಬಿಷಪ್ ಹೇಳುವುದೇನು?
ಬೆಂಗಳೂರು, ಏಪ್ರಿಲ್ 28: ಬೆಂಗಳೂರಿನ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಅನ್ನು ಪ್ರತಿನಿತ್ಯ ಬ್ಯಾಗ್‌ನಲ್ಲಿ ತರಬೇಕು. ಬೈಬಲ್ ವ್ಯಾಸಂಗವನ್ನು ಮಾಡಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಉಂಟಾಗಿತ್ತು. ಹಿಂದೂ ಸಂಘಟನೆಗಳು ಬೈಬಲ್ ಶಿಕ್ಷಣಕ್ಕೆ ವಿರೋಧ ವ್ಯಕ್ತಪಡಿಸಿದ್ದವು. ಶಿಕ್ಷಣ ಇಲಾಖೆ ಕ್ಲಾರೆನ್ಸ್ ಪ್ರೌಢಶಾಲೆಯ ವಿರುದ್ದ ಕ್ರಮವನ್ನು ಕೈಗೊಳ್ಳುವಂತೆಯೂ ಒತ್ತಾಯಿಸಿದ್ದರು. ಶಿಕ್ಷಣ ಸಚಿವರು ಸಹ ಶಾಲೆಗೆ ನೊಟೀಸ್ ನೀಡುವಂತೆ ಅಧಿಕಾಗಿಳಿಗೆ ಸೂಚಿಸಿದ್ದರು. ಇದೀಗ ಶಾಲೆಯ ಪ್ರಾಂಶುಪಾಲರು ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನವನ್ನು ಮಾಡಿದ್ದಾರೆ.
ಕ್ಲಾರೆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲರು ಹೇಳಿದ್ದೇನು..?
ಕ್ಲಾರೆನ್ಸ್ ಪ್ರೌಢಶಾಲೆಯ ಪ್ರಾಂಶುಪಾಲ ಜೆರ್ರಿ ಜಾರ್ಜ್ ಮಾಧ್ಯಗೋಷ್ಠಿಯನ್ನು ಕರೆದಿದ್ದರು. ಈ ವೇಳೆ ಮಾತನಾಡಿದ ಅವರು ""ಕ್ಲಾರೆನ್ಸ್ ಶಾಲೆ ಅನುದಾನ ರಹಿತ ಶಾಲೆಯಾಗಿದೆ. ಇದೊಂದು ಕ್ರೈಸ್ತ ಟ್ರಸ್ಟ್ ನಿಂದ ಅಲ್ಪಸಂಖ್ಯಾತರು ನಡೆಸುವ ಶಾಲೆ. ನಮ್ಮಲ್ಲಿ ಕ್ರೈಸ್ತ ರಂತೆ ಇತರೆ ಧರ್ಮದ ಮಕ್ಕಳು ಕೂಡ ಇದ್ದಾರೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ನೈತಿಕ ಮೌಲ್ಯಗಳು, ಕ್ರೀಡೆ, ಅವರ ಪ್ರತಿಭೆಗೆ ಪ್ರೋತ್ಸಾಹ ಕೊಡುತ್ತೇವೆ, ನಮ್ಮ ಶಾಲೆಯಲ್ಲಿ ಕಲಿತ ಮಕ್ಕಳು ಈಗ ದೇಶ ಮಿಲಿಟರಿ, ನೇವಿ, ರಾಜಕೀಯ ಹೀಗೆ ಹಲವು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ನಾವು ಧರ್ಮ, ಬಣ್ಣ, ಜಾತಿ ಯಾವುದನ್ನು ಪರಿಗಣಿಸುವುದಿಲ್ಲ. ಕ್ರೈಸ್ತ ದೇವನ ಚರಿತ್ರೆಯಿಂದ ಮಕ್ಕಳಿಗೆ ವಾರಕ್ಕೊಮ್ಮೆ ಮಾರೆಲ್ ಶಿಕ್ಷಣ ಕೊಡಲಾಗುತ್ತಿದೆ. ಅಡ್ಮಿಷನ್ ಗೂ ಮೊದಲೇ ಈ ವಿಚಾರ ನಾವು ಪೋಷಕರಿಗೆ ತಿಳಿಸಿರುತ್ತೇವೆ. ಸದ್ಯಕ್ಕೆ ಕೆಲ ಸಂಘಟನೆಗಳು ಮಾಡಿದ ಆರೋಪದಲ್ಲಿ ಹುರುಳಿಲ್ಲ. ನಾವು ಈ ನೆಲದ ಕಾನೂನಿಗೆ ಬದ್ಧವಾಗಿಯೇ ಸೇವೆ ಮಾಡುತ್ತಿದ್ದೇವೆ. ನಮಗೆ ಶೋಕಾಸ್ ನೋಟೀಸ್ ಶಿಕ್ಷಣ ಇಲಾಖೆಯಿಂದ ಬಂದಿದೆ. ಅದಕ್ಕೆ ನಾವು ಉತ್ತರಿಸುತ್ತೇವೆ,'' ಎಂದು ಹೇಳಿದರು.

ಆರ್ಚ್ ಬಿಷಪ್ ಪೀಟರ್ ಹೇಳಿದ್ದೇನು..?
ಇನ್ನು ಬೈಬಲ್ ಶಿಕ್ಷಣಕ್ಕೆ ಸಂಬಂದಿಸಿದಂತೆ ಆರ್ಚ್ ಬಿಷಪ್ ಪೀಟರ್ ಮಚಾಡೋ ಕೂಡ ಮಾತನಾಡಿದ್ದಾರೆ. ""ಧಾರ್ಮಿಕತೆಯನ್ನು ನೈತಿಕೆಯನ್ನು ನಾವು ಬೇರ್ಪಡಿಸಲು ಸಾಧ್ಯವಿಲ್ಲ. ಈ ಕ್ಲಾರೆನ್ಸ್ ಶಾಲೆಗೆ ನೂರು ವರ್ಷದ ಇತಿಹಾಸವನ್ನು ಹೊಂದಿದೆ. ಇಲ್ಲಿ 75 % ಮಕ್ಕಳು ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುವುದು ಸುಳ್ಳು ನಾವು ಹಿಂದೂ, ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಬೈಬಲ್ ಕಡ್ಡಾಯ ಮಾಡಿಲ್ಲ. ಎಲ್ಲಾ ಕ್ರೈಸ್ತ ಶಾಲೆಗಳಿಗೆ ಬೈಬಲ್ ಬಣ್ಣ ಬಳಿಯುವುದು ಸರಿಯಲ್ಲ,'' ಎಂದು ಹೇಳಿದ್ದಾರೆ.

''ಈ ಸಂಬಂಧ ಸರ್ಕಾರ ತನಿಖೆ ಮಾಡಲು ಇಚ್ಚಿಸಿದರೆ ತನಿಖೆ ಮಾಡಲಿ ಈ ಶಾಲೆಯಲ್ಲಿ ಎಷ್ಟು ಮಕ್ಕಳು ಮತಾಂತರ ಆಗಿದ್ದಾರೆ..? ಅದನ್ನೂ ತನಿಖೆ ಮಾಡಲಿ ಮೊದಲು ಚರ್ಚ್ ಟಾರ್ಗೆಟ್ ಮಾಡಿದ್ರು, ಚರ್ಚ್ ದ್ವಂಸ ಮಾಡಿದ್ರು ಈಗ ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಅಡ್ವಾಣಿ, ನಾನು ಓದಿದ್ದು ಕ್ರಿಶ್ಚಿಯನ್ ಶಾಲೆಯಲ್ಲಿ ಹೇಳಿದ್ದರು , ಪಿಯೂಶ್ ಗೋಯೆಲ್ ಕೂಡ ಓದಿದ್ದು ಕ್ರಿಶ್ವಿಯನ್ ಶಾಲೆಯಲ್ಲಿ, ಹೀಗೆ ನಾಡಿಗೆ ಹಲವು ಗಣ್ಯರನ್ನು ಕೊಟ್ಟ ಹೆಗ್ಗಳಿಕೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗಿದೆ,'' ಎಂದು ಆರ್ಚ್ ಬಿಷಪ್ ಸ್ಪಷ್ಟನೆ ನೀಡಿದ್ದಾರೆ.

ಶಿಕ್ಷಣ ಇಲಾಖೆ ನೀಡಿರೋ ನೋಟೀಸ್‌ಗೆ ಇನ್ನೂ ಬಂದಿಲ್ಲ
Recommended Video
ಬೈಬಲ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಶಿಕ್ಷಣ ಇಲಾಖೆಯ ಕ್ರಮಕ್ಕೆ ಒತ್ತಾಯಿಸಿದ್ದರು. ಆ ಬಳಿಕ ಕ್ಲಾರೆನ್ಸ್ ಪ್ರೌಢಶಾಲೆಗೆ ಶಿಕ್ಷಣ ಇಲಾಖೆ ಕೂಡ ಶೋಕಾಸ್ ನೋಟೀಸ್ ಇನ್ನು ನೀಡಿ ಏಳು ದಿನಗಳ ಒಳಗೆ ಉತ್ತರಿಸುವಂತೆ ತಿಲಿಸಲಾಗಿತ್ತು. ಆದರೆ ಕ್ಲಾರೆನ್ಸ್ ಶಾಲೆಯ ಪ್ರಾಂಶುಪಾಲರು ಶೀಘ್ರವೇ ಉತ್ತರಿಸುತ್ತೇವೆ ಎಂದಿದ್ದಾರೆ. ಸದ್ಯ ತಾವು ಆ ವಿಚಾರವನ್ನು ಕೈಬಿಟ್ಟಿದ್ದೇವೆ ಎನ್ನುವ ಮೂಲಕ ವಿವಾದಕ್ಕೆ ತೆರೆಎಳೆದಿದ್ದಾರೆ.












Click it and Unblock the Notifications