ಕೆಂಗೇರಿಯಲ್ಲಿ ಬಿಎಚ್‌ಇಎಲ್ ಮಹಿಳಾ ಉದ್ಯೋಗಿಯ ಕೊಲೆ
ಬೆಂಗಳೂರು, ಫೆಬ್ರವರಿ 16: ಬಿಎಚ್‌ಇಎಲ್ ಮಹಿಳಾ ಉದ್ಯೋಗಿಯೊಬ್ಬರ ಕುತ್ತಿಗೆ ಬಿಗಿದು ಕೊಲೆ ಮಾಡಿರುವ ಘಟನೆ ಬೆಂಗಲೂರಿನ ಕೆಂಗೇರಿ ಸಮೀಪ ನಡೆದಿದೆ.
ಮನೆಗೆ ನುಗ್ಗಿದ ದುಷ್ಕರ್ಮಿಗಳು ಆರು ಮನೆಗಳಿರುವ ಕಟ್ಟಡದ ಮೊದಲ ಮಹಡಿಯಲ್ಲಿ ವಾಸವಿದ್ದ ಅನು(32) ಅವರನ್ನು ಕೊಲೆ ಮಾಡಿದ್ದಾರೆ, ಅದೇ ಮನೆಯ ಮೂರನೇ ಮಹಡಿಯಲ್ಲಿ ಅವರ ಅಕ್ಕ ವಾಸವಿದ್ದಾರೆ. ಒಬ್ಬರೇ ಇದ್ದ ಸಮಯ ನೋಡಿಕೊಂಡು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಅನು ಅವರ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ರಾತ್ರಿ ಅನು ಅವರ ಪತಿ ಅವರ ಮೊಬೈಲ್ ಗೆ ಕಾಲ್ ಮಾಡಿದಾಗ ಸ್ವೀಕರಿಸಲಿಲ್ಲ, ಅದೇ ಕಟ್ಟಡದ 3ಮಹಡಿಯಲ್ಲಿರುವ ಅವರ ಅಕ್ಕನಿಗೆ ಕಾಲ್ ಮಾಡಿದ್ದಾರೆ, ತಕ್ಷಣ ಅನು ಅವರ ಅಕ್ಕ ಮನೆ ಬಳಿ ಹೋಗಿ ನೋಡಿದಾಗ ಬಾಗಿಲು ಹಾಕಿದೆ. ಬಳಿಕ ಅನುಮಾನಗೊಂಡು ಬಾಗಿಲು ಒಡೆದಾಗ ಅನು ಕೊಲೆಯಾಗಿರುವುದು ತಿಳಿದುಬಂದಿದೆ. ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.

ಆದರೆ ಕೊಲೆಗೆ ಅಸಲಿ ಕಾರಣ ಇನ್ನೂ ತಿಳಿದುಬಂದಿಲ್ಲ ಆದರೆ ನಿವೇಶನ ವಿಚಾರಕ್ಕೆ ಕೊಲೆ ನಡೆದಿರಬಹುದು ಎಂದು ಸಂಶಯ ವ್ಯಕ್ತಪಡಿಸಲಾಗಿದೆ. ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.












Click it and Unblock the Notifications