ಕುದುರೆ ರೇಸ್ ಬೆಟ್ಟಿಂಗ್ : ನಾಲ್ವರು ಆರೋಪಿಗಳ ಸೆರೆ
ಬೆಂಗಳೂರು, ನವೆಂಬರ್ 27: ಕುದುರೆ ರೇಸ್ ಜೂಜು ಆಡುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿ 20 ಲಕ್ಷ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ವಿಜಯನಗರದ ಸತ್ಯನಾರಾಯಣ, ಕುಮಾರ, ಶ್ರೀಕಾಂತ್ ಹಾಗೂ ಶೇಷಾದ್ರಿಪುರಂ ನಿವಾಸಿ ಸಂದೀಪ್ ಬಂಧಿತರು. ಇವರಿಂದ ನಗದು ಹಣ 20 ಲಕ್ಷ ಹಾಗೂ ಆರು ಮೊಬೈಲ್ ವಶ ಪಡಿಸಿಕೊಂಡೊದ್ದಾರೆ.

Recommended Video
ಯಡಿಯೂರಪ್ಪಗೆ ತಲೆ ಕೆಟ್ಟಿದೆ!! | Oneindia Kannada
ಆರ್ ಪಿ ಸಿ ಬಡಾವಣೆಯ ಮನೆಯೊಂದರಲ್ಲಿ ಬೆಟ್ಟಿಂಗ್ ಕಟ್ಟಿ ಆಡುತ್ತಿರುವ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೋಲೀಸರು ದಾಳಿ ನಡೆಸಿದ್ದಾರೆ. ಯಾವುದೇ ಅನುಮತಿ ಇಲ್ಲದೇ ಸಾರ್ವಜನಿಕರಿಂದ ಅಕ್ರಮವಾಗಿ ಬೆಟ್ಡಿಂಗ್ ಹಣ ಕಟ್ಟಿಸಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಆಧರಿಸಿ ದಾಳಿ ನಡೆಸಲಾಗಿದೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ತಕರಣ ದಾಖಲಾಗಿದೆ.












Click it and Unblock the Notifications