BESCOM: ಮಳೆಗಾಲದಲ್ಲಿ ವಿದ್ಯುತ್ ಸುರಕ್ಷತೆ ಹೀಗಿರಲಿ: ಬೆಸ್ಕಾಂ ಸಲಹೆ, ಸೂಚನೆಗಳು

ಬೆಂಗಳೂರು, ಜೂನ್ 29: ಮಳೆಗಾಲ ಬಂತೆಂದರೆ ಸಾಕು ವಿದ್ಯುತ್ ಆಗಾಗ ಕಟ್ ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಸಾರ್ವಜನಿಕರು ಬೆಸ್ಕಾಂ ಸಿಬ್ಬಂದಿಯನ್ನು ಬೈಯುತ್ತಲೇ ಇರುತ್ತಾರೆ. ಆದರೆ ಮುಂಜಾಗ್ರತಾ ಕ್ರಮವಾಗಿ, ಯಾವುದೇ ಅಪಾಯ, ಆರ್ಥಿಕ ನಷ್ಟವಾಗದಂತೆ ತಡೆಯಲು ವಿದ್ಯುತ್ ಸರಬರಾಜು ಸಿಬ್ಬಂದಿ ವಿದ್ಯುತ್ ಪೂರೈಕೆ ಕಡಿತಗೊಳಿಸಿರುತ್ತಾರೆ. ಇದು ಅವರ ಕರ್ತವ್ಯವಲ್ಲ. ಗ್ರಾಹಕರಾದ ನಾವು ಸಹ ಕೆಲವು ಸುರಕ್ಷತಾ ಕ್ರಮ ವಹಿಸುವಂತೆ ಅಗತ್ಯ ಎಚ್ಚರಿಕೆ ವಹಿಸುವಂತೆ ಬೆಸ್ಕಾಂ ತಿಳಿಸಿದೆ.

ಮಳೆಗಾಲದಲ್ಲಿ ಗಾಳಿ ಮಳೆಗೆ ಕೆಳಗೆ ಬಿದ್ದ ವಿದ್ಯುತ್ ಕಂಬ, ತುಂಡರಿಸಿ ಬಿದ್ದ ಎಲೆಕ್ಟ್ರಿಕ್ ವಾಯರ್ ಮುಟ್ಟುವುದು, ಅಂತಹ ಸ್ಥಳಗಳಿಗೆ ತೆರಳಿ ಅಪಾಯ ತಂಡುಕೊಳ್ಳುವ ಸಾಧ್ಯತೆ ಇರುತ್ತದೆ. ಅಲ್ಲದೇ ಹಸಿ ಕೈ (ಒದ್ದೆ ಕೈ) ಮೂಲಕ ಕರೆಂಟ್ ಸ್ವಿಚ್ ಬೋರ್ಡ್ ಮುಟ್ಟುವುದು, ಆನ್ ಆಂಡ್ ಆಫ್ ಮಾಡುವುದು ಹೀಗೆ ಅನೇಕ ವಿಧದದಲ್ಲಿ ವಿದ್ಯುತ್‌ನಿಂದ ನಮಗೆ ಅಪಾಯ ಇರುತ್ತದೆ. ಇಂತಹ ಸಮಯದಲ್ಲಿ ಅದರಲ್ಲೂ ಮಳೆಗಾಲದ ಸಂದರ್ಭದಲ್ಲಿ ಸಾರ್ವಜನಿಕರು 'ಏನು ಮಾಡಬೇಕು' & 'ಏನು ಮಾಡಬಾರದು' ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ (BESCOM) ತಿಳಿಸಿದೆ. ಅದರ ಪಟ್ಟಿ ಮುಂದಿದೆ.

BESCOME Be Cautions About Electricity Always Observe Safety Measures in Rainy Season

ಗ್ರಾಹಕರು ಏನು ಮಾಡಬಾರದು?

* ವಿದ್ಯುತ್ ಕಂಬಗಳಿಗೆ ಬ್ಯಾನರ್ ಅಥವಾ ಜಾಹೀರಾತು ಫಲಕಗಳನ್ನು ಕಟ್ಟಬೇಡಿ.
* ಬಟ್ಟೆಗಳನ್ನು ಒಣಗಿಸುವ ತಂತಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಬೇಡಿ.
* ವಿದ್ಯುತ್ ಸ್ವಿಚ್‌ಗಳು ಹಾಗೂ ಉಪಕರಣಗಳನ್ನು ಒದ್ದೆ ಕೈಗಳಿಂದ ಮುಟ್ಟಬೇಡಿ.
* ವಿದ್ಯುತ್ ತಂತಿಗಳ ಹತ್ತಿರವಿರುವ ರೆಂಬೆ-ಕೊಂಬೆ ಗಳನ್ನು ಕಡಿಯಬೇಡಿ.
* ವಿದ್ಯುತ್ ಕಂಬಗಳನ್ನು ಹತ್ತಬೇಡಿ.
* ತಂತಿಬೇಲಿಗಳಿಗೆ ವಿದ್ಯುತ್ ಹಾಯಿಸಬೇಡಿ.
* ತುಂಡಾಗಿ ಬಿದ್ದ ವಿದ್ಯುತ್ ತಂತಿಗಳನ್ನು ಮುಟ್ಟಬೇಡಿ. ಟ್ರಾನ್ಸ್‌ಫಾರ್ಮ‌ರ್ ಬೇಲಿಯನ್ನು ಮುಟ್ಟಬೇಡಿ.
* ಕಟ್ಟಡಗಳನ್ನು ವಿದ್ಯುತ್ ತಂತಿಗಳ ಸಮೀಪ ನಿರ್ಮಿಸಬೇಡಿ.
* ವಿದ್ಯುತ್ ತಂತಿಗಳ ಮೇಲೆ ಬಿದ್ದಿರುವ ಮರಗಳನ್ನು, ರೆಂಬೆಗಳನ್ನು ತೆಗೆಯಲು ಪ್ರಯತ್ನಿಸಬೇಡಿ ಎಂದು ಸಲಹೆ ನೀಡಲಾಗಿದೆ.

ಗ್ರಾಹಕರು ಏನು ಮಾಡಬೇಕು?

* ಯಾವಾಗಲೂ ಐಎಸ್‌ಐ ಪ್ರಮಾಣಿತ ಉಪಕರಣಗಳನ್ನೇ ಬಳಸಿರಿ.
* ವಿದ್ಯುತ್ ಉಪಕರಣಗಳನ್ನು ಲೈಸೆನ್ಸ್ ಹೊಂದಿರುವ ಎಲೆಕ್ಟ್ರಿಷಿಯನ್‌ರವರಿಂದ ಮಾತ್ರ ದುರಸ್ತಿ ಮಾಡಿಸಿ
* ವಿದ್ಯುತ್ ಉಪಕರಣಗಳನ್ನು ಸುರಕ್ಷತೆಗಾಗಿ ನಿಯತಕಾಲಿಕವಾಗಿ ಪರೀಕ್ಷಿಸಿಕೊಳ್ಳಿ.
* ನಿಮ್ಮ ವಿದ್ಯುತ್ ಸಂಪರ್ಕಕ್ಕೆ ಸೂಕ್ತ ಗೌಂಡಿಂಗ್ ವ್ಯವಸ್ಥೆ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
* ವೈರಿಂಗ್ ಕೆಲಸವನ್ನು ಸರ್ಕಾರಿ ಲೈಸೆನ್ಸ್ ಹೊಂದಿದ ವಿದ್ಯುತ್ ಗುತ್ತಿಗೆದಾರಿಂದ ಮಾತ್ರ ಮಾಡಿಸಿಕೊಳ್ಳಿ.
* ಪ್ಲಗ್ ಪಾಯಿಂಟ್‌ಗಳು ಮಕ್ಕಳ ಕೈಗೆ ಎಟುಕದಂತಿರಲಿ.
* ಯಾವಾಗಲೂ 3 ಪಿನ್‌ಗಳ ಪ್ಲಗ್/ಸಾಕೆಟ್‌ಗಳನ್ನು ಬಳಸಿ ಹಾಗೂ 3ನೇ ಪಿನ್ ಅರ್ಥಿಂಗ್ ಮಾಡಿಸಿ.

ಬೆಸ್ಕಾಂ ಬೆಂಗಳೂರು, ಬೆಂಗಳೂರು ನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು ಸೇರಿದಂತೆ ಅನೇಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಮಾಡುತ್ತಿದೆ. ಗ್ರಾಹಕರು ಸುರಕ್ಷತೆಗಾಗಿ ಕುರಿತು ವಾಟ್ಸಾಪ್ ಸಂಖ್ಯೆ 94831 91212/ 94831 91222 ಗೆ ಸಂಪರ್ಕಿಸಬೇಕು. ಹೆಚ್ಚಿನ ಮಾಹಿತಿ ಹಾಗೂ ವಿದ್ಯುತ ವ್ಯತ್ಯಯವಾದಲ್ಲಿ 1912 ಸಂಖ್ಯೆ ಕರೆ ಮಾಡಿದೆ. ಹೆಚ್ಚಿನ ಮಾಹಿತಿಗೆ ttps://bescom.karnataka.gov.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+