Bengaluru's Second Airport: ತುಮಕೂರಿನಲ್ಲಿ 2ನೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಆದ್ರೆ ಏನೆಲ್ಲ ಉಪಯೋಗವಾಗಲಿದೆ?

Bengaluru's Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣಕ್ಕೆ ನಾಲ್ಕು ಸ್ಥಳಗಳನ್ನು ಗುರುತಿಸಲಾಗಿತ್ತು. ಆದರೆ, ಸ್ಥಳ ನಿಗಧಿ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಇದರ ನಡುವೆಯೇ ತುಮಕೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವ ಒತ್ತಾಯ ಮಾಡಲಾಗಿದೆ. ಒಂದು ವೇಳೆ ತುಮಕೂರಿನಲ್ಲಿ ನಿರ್ಮಾಣ ಆದರೆ ಯಾವೆಲ್ಲ ಉಪಯೋಗಗಳು ಆಗಲಿವೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಮೊದಲಿನಿಂದಲೂ ತುಮಕೂರಿನಲ್ಲೇ ವಿಮಾನ ನಿಲ್ದಾಣ ಮಾಡಬೇಕು ಎನ್ನುವ ಕೂಗುಗಳು ಜೋರಾಗಿ ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಸಚಿವ ಜಿ.ಪರಮೇಶ್ವರ್ ಅವರು ಜಿಲ್ಲಯಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಆದರೆ ಎಷ್ಟೆಲ್ಲ ಪ್ರಯೋಜನೆಗಳು ಆಗಲಿವೆ ಹಾಗೂ ಯಾವೆಲ್ಲ ಜಿಲ್ಲೆಗಳ ಜನರಿಗೆ ಅನುಕೂಲವಾಗಲಿದ ಎನ್ನುವ ಬಗ್ಗೆ ಸಿಎಂ ಸಿದ್ದರಾಮಯ್ಯಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.

Bengaluru s Second International Airport Construction in Tumakuru Will Benefit 24 Districts

ಇತ್ತೀಚೆಗಷ್ಟೇ ನೆಲಮಂಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ರೈತರಿಂದ ಈಗಾಗಲೇ ಭಾರೀ ವಿರೋಧಗಳು ವ್ಯಕ್ತವಾಗಿದ್ದವು. ಇಲ್ಲಿ ಒಂದು ವೇಳೆ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಯತ್ನಿಸಿದರೆ, ನಾವು ಪ್ರಾಣ ಬೇಕಾದರೂ ಕೊಟ್ಟೇವು ಆದರೆ ಇಲ್ಲಿನ ಫಲವತ್ತಾನ ಭೂಮಿಯನ್ನು ಬಿಟ್ಟು ಕೊಡುವುದಿಲ್ಲ ಎನ್ನುವುದು ಇಲ್ಲಿನ ರೈತರ ವಾದವಾಗಿತ್ತು.

ಇನ್ನು ಇದೀಗ ಬೆಂಗಳೂರು ನಗರದ ಬಳಿಯಿರುವ ತುಮಕೂರು ಜಿಲ್ಲೆಯಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕೆಂದು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ.ಪರಮೇಶ್ವರ ಅವರು ಸಿಎಂ ಸಿದ್ದರಾಮಯ್ಯ, ಡಿಸಿಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ‌ ಮಾಡಿದರು.

ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆದ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ವಿವಿಧ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಣೆಯ ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಅವರು ಮಾತನಾಡಿದರು. ಜಿಲ್ಲೆಯು ಅಭಿವೃದ್ಧಿಯೆಡೆ ದಾಪುಗಾಲು ಇಡುತ್ತಿದೆ. ಸರ್ಕಾರವು ರಾಜ್ಯದಲ್ಲಿ ಮತ್ತೊಂದು ವಿಮಾನ ನಿಲ್ದಾಣ ನಿರ್ಮಿಸಲು ಮುಂದಾಗಿದೆ. ತುಮಕೂರು ಜಿಲ್ಲೆಯಲ್ಲಿ ಈ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಬೇಕು. ಇದರಿಂದ ರಾಜ್ಯದ 24 ಜಿಲ್ಲೆಗಳ ಜನರಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.

ನೆಲಮಂಗಲದ ರೈತರು ಹೇಳೋದೇನು?: ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನೆಲಮಂಗಲದ ಬಳಿ ಫಲವತ್ತಾದ ಕೃಷಿ ಭೂಮಿಯಲ್ಲಿ ನಿರ್ಮಿಸಿದರೆ ರೈತರನ್ನು ಒಕ್ಕಲೆಬ್ಬಿಸಬೇಡಿ ಎಂದು ಹೋರಾಟ ಮಾಡಲು ರೈತ ಮುಖಂಡರು ಮುಂದಾಗಿದ್ದಾರೆ. ಈ ಬಗ್ಗೆ ಡಿಸೆಂಬರ್ 5ರಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ ಎನ್ನುವ ಮಾಹಿತಿ ಲಭ್ಯವಚಾಗಿತ್ತು.

ನೆಲಮಂಗಲ-ಕುಣಿಗಲ್‌ ನಡುವಿನ ಯಂಟಗನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯದ ನಡುವಿನ ಪ್ರದೇಶದಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಕೆ ಆಗಿದ್ದು, ಈಗಗಾಲೇ ವಿವಿಧ ಹಂತದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು ಎನ್ನಲಾಗಿತ್ತು. ಅಲ್ಲದೆ, ಹಲವು ಕಡೆಗಳಲ್ಲಿ ಎಸ್‌ಸಿಪಿ ಎಂಬ ಮಾರ್ಕ್‌ಗಳ ನಕ್ಷೆಯನ್ನು ಗಡಿಯಲ್ಲಿ ಗುರುತು ಮಾಡಿದ್ದು, ಡಿಜಿಟಲ್‌ ಸರ್ವೆ, ಹೆಲಿಕಾಪ್ಟರ್‌ ಮೂಲಕ ಸರ್ವೆ ಪ್ರಗತಿಯಲ್ಲಿತ್ತು. ಆದರೆ, ಇದು ಈ ಭಾಗದ ರೈತರು, ಸಾರ್ವಜನಿಕರನ್ನು ರೊಚ್ಚಿಗೇಳುವಂತೆ ಮಾಡಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.

ಯಾವತ್ತಿಗೂ ನಮ್ಮ ಭೂಮಿ ಭೂಸ್ವಾಧೀನಪಡಿಸಿಕೊಳ್ಳುವುದಿಲ್ಲ ಎನ್ನುವ ಭರವಸೆಯಲ್ಲಿ ಇಲ್ಲಿನ ರೈತರಿದ್ದರು. ಆದರೆ, ತಾಲೂಕಿನ ಬಹುಮುಖ್ಯ ಕೃಷಿ ಭೂಮಿಯಲ್ಲಿಯೇ ಎರಡನೇ ವಿಮಾನ ನಿಲ್ದಾಣದ ಪ್ರಸ್ತಾವನೆ ಹಾಗೂ ಅಧಿಕಾರಿಗಳ ಓಡಾಟ ಇಲ್ಲಿನ ರೈತರಿಗೆ ಆತಂಕ ಸೃಷ್ಟಿಸಿದೆ. ಇದೀಗ ಪ್ರಸ್ತಾವನೆ ಹಂತದಲ್ಲಿರುವ ಸೋಲದೇವನಹಳ್ಳಿ ಸಮೀಪದ 6,000 ಹೆಕ್ಟೇರ್ ಪ್ರದೇಶದಲ್ಲಿ ತುಂಬಾ ಹಳ್ಳಿಗಳಿವೆ.

ತುಂಬಾ ವರ್ಷಗಳ ಹಿಂದಿನಿಂದಲೂ ಇರುವ ಗ್ರಾಮಗಳನ್ನು ಕೈತಪ್ಪಿ ಹೋಗುವ ಆತಂಕ ಇಲ್ಲಿನ ಜನರಲ್ಲಿ ಸೃಷ್ಟಿಯಾಗಿತ್ತು. ಈಗಗಾಲೇ 2ನೇ ವಿಮಾನ ನಿಲ್ದಾಣ ಸರ್ವೆ ಕಾರ್ಯದ ಹಿನ್ನೆಲೆ ಇಲ್ಲಿ ಹಾಕಿರುವ ನಕ್ಷೆಯ ಸಂಕೇತಗಳಿಂದ ಆತಂಕದಲ್ಲಿರುವ ಗ್ರಾಮಸ್ಥರು "ಒಂದು ವೇಳೆ ಪ್ರಾಣ ಕೊಟ್ಟೇವು ಹೊರತು ಯಾವುದೇ ಕಾರಣಕ್ಕೂ ಭೂಮಿಯನ್ನು ಮಾತ್ರ ಬಿಟ್ಟುಕೊಡುವುದಿಲ್ಲ." ಎಂದು ಪಣತೊಟ್ಟು ನಂತಿದ್ದರು ಎಂದು ತಿಳಿದುಬಂದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+