Bengaluru 2nd Airport: ನೆಲಮಂಗಲದಲ್ಲಿ 2ನೇ ಅಂತಾಷ್ಟ್ರೀಯ ವಿಮಾನ ನಿಲ್ದಾಣ; ಜನ, ಜನಪ್ರತಿಧಿನಿಗಳ ನಿರ್ಧಾರವೇನು?

Bengaluru 2nd Airport: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್‌ 1ರಲ್ಲಿ ಪ್ರಯಾಣಿಕರ ದಟ್ಟಣೆ ಸಂಭವಿಸುತ್ತಲೇ ಇತ್ತು. ಈ ಹಿನ್ನೆಲೆ ಟರ್ಮಿನಲ್‌ 2 ಅನ್ನು ನಿರ್ಮಾಣ ಮಾಡಿದ್ದು, ಇದು ವಿಶ್ವದಲ್ಲೇ ಅತ್ಯಂತ ಸುಂದರ ಟರ್ಮಿನಲ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದೀಗ ಮತ್ತೆ ಪ್ರಯಾಣಿಕರ ಹೆಚ್ಚಳ ಹಿನ್ನೆಲೆ ಬೆಂಗಳೂರಿನ ಸಮೀಪ 2ನೇ ವಿಮಾನ ನಿಲ್ದಾಣವನ್ನು ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ.

ಬೆಂಗಳೂರಿನ ಬಳಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಲು ಮೊದಲಿನಿಂದಲೂ ಚರ್ಚೆ ಜೋರಾಗಿ ಕೇಳಿಬಂದಿದ್ದು, ಇದೀಗ ನಾಲ್ಕು ಕಡೆ ಸ್ಥಳ ಗುರುತಿಸಲಾಗಿದೆ. ಬಿಡದಿ, ನೆಲಮಂಗಲ, ತುಮಕೂರು, ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ವಿಮಾನ ನಿಲ್ದಾಣ ಮಾಡಲು ಸ್ಥಳ ಗುರುತಿಸಲಾಗಿತ್ತು. ಆದರೆ, ಇದೇ ಸ್ಥಳ ಅಂತಾ ಇನ್ನೂ ನಿಗಧಿಯಾಗಿಲ್ಲ.

Bengaluru s Second Airport in Nelamangala What Did Public and Politicians Decision

ಈ ನಡುವೆಯೇ ತುಮಕೂರು, ನೆಲಮಂಗಲ ಬಳಿಯೇ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಬೇಕೆನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಅದರಲ್ಲೂ ನೆಲಮಂಗಲ ಬಳಿ ವಿಮಾನ ನಿಲ್ದಾಣಕ್ಕೆ ಭಾರೀ ವಿರೋಧಗಳು ವ್ಯಕ್ತವಾಗುತ್ತಲೇ ಇವೆ. ವಿಮಾನ ನಿಲ್ದಾಣಕ್ಕೆ ಗುರುತಿಸಲಾದ ಸ್ಥಳವು ಫಲವತ್ತಾದ ಭೂಮಿಯಾಗಿದೆ. ಆದ್ದರಿಂದ ನಾವು ರಕ್ತ ಕೊಟ್ಟೇವು, ಭೂಮಿ ಮಾತ್ರ ಬಿಟ್ಟು ಕೊಡುವುದಿಲ್ಲ ಎನ್ನುವುದು ನೆಲಮಂಗಲ ರೈತರ ಮಾತಾಗಿದೆ. ಇನ್ನು ಈ ಬಗ್ಗೆ ಇಲ್ಲಿನ ಮಾಜಿ ಶಾಸಕರು ಕೂಡ ಪ್ರತಿಕ್ರಿಯಿಸಿದ್ದಾರೆ.

ಹಾಗಾದರೆ ನೆಲಮಂಲದಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ಯಾರು ಏನು ಹೇಳಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ. ಸೋಲದೇವನಹಳ್ಳಿ, ಯಂಟಗನಹಳ್ಳಿ ಪ್ರದೇಶಗದಲ್ಲಿ ತುಂಬಾ ರೈತ ಕುಟುಂಬಗಳಿವೆ. ಇದು ಕುಮುದ್ವತಿ ನದಿಯ ವಲಯ ಆಗಿದೆ. ಆದ್ದರಿಂದ ರೈತರನ್ನು ಒಕ್ಕಲೆಬ್ಬಿಸಿ 2ನೇ ವಿಮಾನ ನಿಲ್ದಾಣ ಮಾಡುವುದಕ್ಕೆ ನಮ್ಮ ಸಂಪೂರ್ಣ ವಿರೋಧ ಇದ್ದು ಕೂಡಲೇ ಇಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಮಾಜಿ ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಕೆಂಡಕಾರಿದ್ದಾರೆ.

ನೆಲಮಂಗಲದ ಹಂಚೀಪುರ ಗ್ರಾಮದ ಮಾಜಿ ಶಾಸಕರ ಗೃಹ ಕಚೇರಿಯಲ್ಲಿಆಯೋಜಿಸಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾಜಿ ಶಾಸಕರು ಪ್ರತಿಕ್ರಿಯಿಸಿದ್ದಾರೆ. ಈಗಗಾಲೇ ನೆಲಮಂಗಲದ ಸೋಂಪುರ, ತ್ಯಾಮಗೊಂಡ್ಲು ಹೋಬಳಿಯಲ್ಲಿ ಕೈಗಾರಿಕೆಗಳಿಗೆ ಭೂಸ್ವಾಧೀನ ಹಿನ್ನೆಲೆ ರೈತರು ಜಮೀನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ವಿಮಾನ ನಿಲ್ದಾಣ ಆದರೆ, ಮತ್ತಷ್ಟು ರೈತರು ಬೀದಿಗೆ ಬರಲಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಜೆಡಿಎಸ್‌ ತಾಲೂಕು ಅಧ್ಯಕ್ಷ ತಿಮ್ಮರಾಯಪ್ಪ ಅವರು ಮಾತನಾಡಿ ನಮ್ಮ ಭಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು ಸರಿಯಲ್ಲ. ಇದಕ್ಕೆ ನಾವೂ ಸಂಪೂರ್ಣವಾಗಿ ವಿರೋಧ ಮಾಡುತ್ತೇವೆ. ನಮ್ಮ ಪಕ್ಷದಿಂದ ಬೇರೆ ಕಡೆ ಹೋಗುವವರು ಹೋಗಲಿ. ಅವರು ನಮ್ಮ ಪಕ್ಷದಲ್ಲಿ ಗೆದ್ದು ಸೇವೆ ಮಾಡದೆ ಬೇರೆ ಪಕ್ಷಕ್ಕೆ ಹೋಗಿ ಪಕ್ಷ ದ್ರೋಹ ಮಾಡುವುದು ತಂದೆ-ತಾಯಿಯನ್ನು ಕೊಲೆ ಮಾಡಿದಂತೆ, ಇಂತಹ ದ್ರೋಹ ಬಗೆಯಬೇಡಿ ಎಂದು ಕಾಂಗ್ರೆಸ್‌ ಸೇರಿದವರ ವಿರುದ್ಧ ಆಕ್ರೋಶ ಹೊರಹಾಕಿದರು.

ಮತ್ತೊಂದೆಡೆ ಗೃಹ ಸಚಿವ ಜಿ.ಪರಮೇಶ್ವರ್ ಅವರು, ನಮ್ಮ ತುಮಕೂರಿನಲ್ಲೇ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡಿ. ಇದರಿಂದ ತುಂಬಾ ಜಿಲ್ಲೆಗಳಿಗೆ ಸಹಾಯ ಆಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಬಳಿ ಕೇಳಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಹಗೆ ಮೊದಲಿನಿಂದಲೂ ಕೂಡ ನಮ್ಮ ಜಿಲ್ಲೆಯಲ್ಲೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿ ಅಂತಾ ಹೇಳಿಕೊಂಡು ಬರುತ್ತಿದ್ದಾರೆ. ಇದು ಎಷ್ಟರ ಮಟ್ಟಿಗೆ ಸಕ್ಸಸ್‌ ಆಗುತ್ತೋ ಎಂದು ಕಾದುನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+