New Railway Projects: ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೊಸ ರೈಲು, ಉಪನಗರ ರೈಲು ಯೋಜನೆ ಅಪ್ಡೇಟ್ಸ್!
ಬೆಂಗಳೂರು ಹಾಗೂ ಬೆಂಗಳೂರು ಕೇಂದ್ರಿತ ರೈಲುಗಳ ಸಂಚಾರದ ವಿಷಯದಲ್ಲಿ ಮಹತ್ವದ ಬೆಳವಣಿಗೆ ಆಗಿದೆ. ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಜನ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಇದಕ್ಕೆ ಅನುಗುಣವಾಗಿ ವಿವಿಧ ಸಾರಿಗೆ ಸೌಲಭ್ಯವನ್ನು ಹೆಚ್ಚಿಸುವ ಅವಶ್ಯಕತೆ ಇದೆ.ಅದರಲ್ಲಿ ಪ್ರಧಾನವಾಗಿ ರೈಲು ಯೋಜನೆಗಳು ಸಹ ಸೇರಿವೆ. ಯಾಕೆಂದರೆ ಬೆಂಗಳೂರಿಗೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಿಂದ ಕೆಲಸಕ್ಕೆಂದು ಬೆಂಗಳೂರಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಇದೀಗ ಕೇಂದ್ರ ರೈಲ್ವೆಯ ಸಂಸದೀಯ ಸ್ಥಾಯಿ ಸಮಿತಿಯ ಬೆಂಗಳೂರಿಗೆ ಅಧ್ಯಯನಕ್ಕೆಂದು ಭೇಟಿ ನೀಡಿದೆ. ಈ ಸಂದರ್ಭದಲ್ಲಿ ಪ್ರಮುಖ ರೈಲು ಯೋಜನೆಗಳನ್ನು ಪರಿಶೀಲಿಸಲಾಗಿದೆ.
ಹೌದು ಬೆಂಗಳೂರು ಹಾಗೂ ಬೆಂಗಳೂರು ಕೇಂದ್ರಿತವಾಗಿ ಹಲವು ಪ್ರಮುಖ ರೈಲು ಯೋಜನೆಗಳು ಪ್ರಗತಿಯಲ್ಲಿವೆ. ವೈಟ್‌ಫೀಲ್ಡ್ -ಕೆಂಗೇರಿ ಉಪನಗರ ರೈಲು ಯೋಜನೆಯೂ ಪ್ರಮುಖವಾಗಿದೆ. ಪಾಣತ್ತೂರು ರೈಲ್ವೆ ಅಂಡರ್‌ಪಾಸ್ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಈ ಸಂದರ್ಭದಲ್ಲಿ ಪರಿಶೀಲನೆ ಮಾಡಲಾಗಿದೆ ಎಂದು ಸಂಸದ ಪಿ.ಸಿ ಮೋಹನ್ ಅವರು ಮಾಹಿತಿ ನೀಡಿದ್ದಾರೆ.

ಕೇಂದ್ರ ರೈಲ್ವೆ ಸಂಸದೀಯ ಸ್ಥಾಯಿ ಸಮಿತಿಯು ಪರಿಶೀಲನೆ ಮಾಡಿರುವ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ.
1. ವೈಟ್‌ಫೀಲ್ಡ್-ಕೆಂಗೇರಿ ಉಪನಗರ ರೈಲು ಯೋಜನೆ: 35-ಕಿಮೀ ವೈಟ್‌ಫೀಲ್ಡ್-ಕೆಂಗೇರಿ ಉಪನಗರ ರೈಲು (ಪಾರಿಜಾತ ಮಾರ್ಗ)ದ ಬಗ್ಗೆ ಪರಿಶೀಲನೆ ಮಾಡಲಾಗಿದೆ. ಇನ್ನು 149.348 ಕಿಮೀ ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಬಿಜೆಪಿ ಸರ್ಕಾರ ಹಾಗೂ ಪ್ರಧಾನಿ ಮೋದಿ ಸರ್ಕಾರ ಅನುಮೋದಿಸಿದೆಯಾದರೂ ಇದರ ಡಿಪಿಆರ್ ಯಥಾಸ್ಥಿತಿಯಲ್ಲಿ ಉಳಿದಿದೆ.
2. ಪಾಣತ್ತೂರು ರೈಲ್ವೆ ಅಂಡರ್‌ಪಾಸ್ (RUB): K-RIDE ಈಗಾಗಲೇ ಪಾಣತ್ತೂರು ರೈಲ್ವೆ ಅಂಡರ್‌ಪಾಸ್‌ನ (RUB) ಒಂದು ಭಾಗದ ಮಾರ್ಗವನ್ನು ಮುಕ್ತಾಯವಾಗಿದ್ದು, ಇನ್ನೊಂದು ಜನವರಿ 2025 ರೊಳಗೆ ಪ್ರಾರಂಭವಾಗಲಿದೆ.
3. ಕಾರ್ಮೆಲರಾಮ್ ರೈಲು ಮೇಲ್ಸೇತುವೆ (ROB): ಕಾರ್ಮೆಲಾರಾಮ್ ರೈಲು ಮೇಲ್ಸೇತುವೆ (ROB)ಯ ರೈಲ್ವೆ ಭಾಗದ ನಿರ್ಮಾಣ ಪ್ರಗತಿಯಲ್ಲಿದೆ. ಆದರೆ, ಬಿಬಿಎಂಪಿಯಿಂದ ಭೂಸ್ವಾಧೀನ ಪ್ರಕ್ರಿಯೆ ವಿಳಂಬವಾಗುತ್ತಿರುವುದರಿಂದ ಕಾಮಗಾರಿ ಸ್ಥಗಿತಗೊಂಡಿದೆ.

4. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ರೈಲು ಯೋಜನೆ: ಬೆಂಗಳೂರು ನಗರದಿಂದ ವಿಶೇಷವಾಗಿ ವೈಟ್‌ಫೀಲ್ಡ್‌ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೊಸ ರೈಲುಗಳನ್ನು ಪರಿಚಯಿಸಲು ಕಾರ್ಯಸಾಧ್ಯತೆಯ ಅಧ್ಯಯನದ ಬಗ್ಗೆಯೂ ಚರ್ಚೆ ಮಾಡಲಾಗಿದೆ.
5. ಬೆಂಗಳೂರು ಕಂಟೋನ್ಮೆಂಟ್-ವೈಟ್‌ಫೀಲ್ಡ್ ಚತುಷ್ಪಥ: ಬೆಂಗಳೂರು ಕಂಟೋನ್ಮೆಂಟ್‌ನಿಂದ ವೈಟ್‌ಫೀಲ್ಡ್ ವಿಭಾಗದ ಚತುಷ್ಪಥ ಕೆಲಸವು ಮುಂದಿನ ವರ್ಷ ಅಂದರೆ 2025ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ.
6. ದ್ವಿಮಾರ್ಗ (Doubling Projects)ಯೋಜನೆಗಳು: ಯಶವಂತಪುರ ನಿಲ್ದಾಣದ ಮೂಲಕ ಹೊಸೂರು-ಸೇಲಂ ಮಾರ್ಗದಲ್ಲಿ ದ್ವಿಮುಖ (ಎರಡು ಮಾರ್ಗದ ರೈಲು ಮತ್ತು ಬೈಯ್ಯಪ್ಪನಹಳ್ಳಿ - ಹೊಸೂರು ಮಾರ್ಗವು 2025ರ ಆಗಸ್ಟ್ ವೇಳೆಗೆ ಪೂರ್ಣಗೊಳ್ಳಲಿದೆ.
7. ಸರ್ಕಲ್ ರೈಲ್ವೆ ನೆಟ್‌ವರ್ಕ್ ( Status of the Circular Rail Network): ಎ. ವಡ್ಡರಹಳ್ಳಿ-ದೇವನಹಳ್ಳಿ ವಲಯ: ಈ ಭಾಗದಲ್ಲಿ ಸಮೀಕ್ಷೆ ಪೂರ್ಣಗೊಂಡಿದೆ. ಡಿಪಿಆರ್ ಅನ್ನು ರೈಲ್ವೆ ಮಂಡಳಿಗೆ ಈಗಾಗಲೇ ಮಂಡಿಸಲಾಗಿದೆ. ಇದಕ್ಕಾಗಿ ₹1638.24 ಕೋಟಿ ರೂಪಾಯಿಗೆ ಅನುದಾನ ಕೋರಲಾಗಿದೆ. ರೈಲ್ವೆ ಮಂಡಳಿಯು 2025 ಫೆಬ್ರವರಿಯ ಒಳಗೆ ಸಂಪೂರ್ಣ ಡಿಪಿಆರ್ ಅನ್ನು ಮಂಡನೆ ಮಾಡುವಂತೆ ಹೇಳಲಾಗಿದೆ. ಉಳಿದ 6 ಭಾಗಗಳು (ದೇವನಹಳ್ಳಿ-ಮಾಲೂರು-ಹೀಲಲಿಗೆ-ಹೆಜ್ಜಾಲ-ಸೋಲೂರು-ನಿಡವಂದ-ವಡ್ಡರಹಳ್ಳಿ)ದಲ್ಲಿ ಇನ್ನೂ ಸರ್ವೆ ಕಾರ್ಯ ಮುಂದುವರಿದಿದೆ.
8. ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು: ಬೆಂಗಳೂರಿನಿಂದ ಮುಂಬೈ ನಡುವೆ ಹೈಸ್ಪೀಡ್ ರೈಲು ಮಾರ್ಗ ಪರಿಚಯಿಸುವುದಕ್ಕೆ ಪ್ರಸ್ತಾಪಿಸಲಾಗಿದೆ.
9. ಕೆಂಗೇರಿ ಮತ್ತು ವೈಟ್‌ಫೀಲ್ಡ್ ನಡುವೆ MEMU ರೈಲುಗಳು: ಕೆಂಗೇರಿ ಮತ್ತು ವೈಟ್‌ಫೀಲ್ಡ್ ನಡುವೆ ಹೆಚ್ಚುವರಿ MEMU ರೈಲುಗಳ ಪರಿಚಯವನ್ನು ಪ್ರಸ್ತಾಪಿಸಲಾಗಿದೆ.
10. ನಮೋ ಭಾರತ್ ಸ್ಪೀಡ್ ರೈಲು: ಬೆಂಗಳೂರು-ತುಮಕೂರು ಮತ್ತು ಬೆಂಗಳೂರು-ಮೈಸೂರು ನಡುವೆ ನಮೋ ಭಾರತ್ ರಾಪಿಡ್ ರೈಲು ಬೇಕು ಎಂದು ಎನ್ನುವ ವಿಷಯವನ್ನು ಈ ಸಂದರ್ಭದಲ್ಲಿ ಪ್ರಸ್ತಾಪಿಸಿರುವುದಾಗಿ ಸಂಸದ ಪಿ.ಸಿ ಮೋಹನ್ ಅವರು ಮಾಹಿತಿ ನೀಡಿದ್ದಾರೆ.












Click it and Unblock the Notifications