ಎಂಜಿರಸ್ತೆಯಲ್ಲಿ ಇಂದಿನಿಂದ ನಮ್ಮಮೆಟ್ರೋ ಸಂಚಾರ ಪುನಾರಂಭ
ಬೆಂಗಳೂರು, ಜನವರಿ 1: ನಾಯಂಡಹಳ್ಳಿ-ಬೈಯಪ್ಪನಹಳ್ಳಿ ಮೆಟ್ರೋ ಮಾರ್ಗದ ಎಂಜಿ ರಸ್ತೆಯಿಂದ ಇಂದಿರಾನಗರ ಮೆಟ್ರೋ ಮಾರ್ಗದಲ್ಲಿ ಸಂಚಾರ ಇಂದಿನಿಂದ ಪುನಾರಂಭಗೊಳ್ಳಲಿದೆ.
ಟ್ರಿನಿಟಿ ವೃತ್ತದ ಬಳಿ ಮೆಟ್ರೋ ಪಿಲ್ಲರ್‌ನಲ್ಲಿ ಬಿರುಕು ಕಾಣಿಸಿಕೊಂಡಿದ್ದ ಪರಿಣಾಮ ಶುಕ್ರವಾರದಿಂದಲೇ ಎಂಜಿ ರಸ್ತೆಯಿಂ ಇಂದಿರಾನಗರದವರೆಗೆ ಮೆಟ್ರೋ ಸಂಚಾರ ರದ್ದುಗೊಳಿಸಲಾಗಿತ್ತು. ಇದೀಗ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು ಇಂದು ಮಧ್ಯಾಹ್ನದಿಂದ ಮೆಟ್ರೋ ಎಂದಿನಂತೆ ಸಂಚರಿಸಲಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಹೊರಗಿನ ಏಜೆನ್ಸಿಯಿಂದ ಒಂದನೇ ಹಂತದ ಪೂರ್ಣ ಮಾರ್ಗದ ಗುಣಮಟ್ಟ ತಪಾಸಣಡ ನಡೆಸಲು ತೀರ್ಮಾನಿಸಲಾಗಿದೆ.

ದುರಸ್ತಿ ಭಾನುವಾರ ಮುಗಿದು ಎಂಜಿರಸ್ತೆ, ಟ್ರಿನಿಟಿ, ಹಲಸೂರು, ಇಂದಿರಾನಗರ ಮಾರ್ಗದಲ್ಲಿ ಸೋಮವಾರ ಬೆಳಗ್ಗೆಯಿಂದ ಸಂಚಾರ ಆರಂಭವಾಗಬೇಕಿತ್ತು. ಕೆಲ ದುರಸ್ತಿ ಪರೀಕ್ಷಾರ್ಥ ಸಂಚಾರ ಬಾಕಿ ಉಳಿದಿದ್ದರಿಂದ ಮತ್ತೊಂದು ದಿನದ ಕಾಲಾವಕಾಶ ತೆಗೆದುಕೊಳ್ಳಲಾಗಿದೆ.
ದುರಸ್ತಿ ಮುಗಿದಿದ್ದರೂ ಟ್ರಿನಿಟಿ ನಿಲ್ದಾಣದ 155ನೇ ಸಂಖ್ಯೆಯ ಕಂಬದ ಕೆಳಗಿನ ಕಬ್ಬಿಣದ ಆಧಾರವನ್ನೂ ಇನ್ನೂ ಒಂದು ವಾರ ತೆಗೆಯುವುದಿಲ್ಲ, ಒಂದಉ ವಾರ ಕಂಬ, ವಯಾಡಕ್ಟ್, ಬೀಮ್‌ನ ಪರೀಕ್ಷೆ ನಡೆಸಲಾಗುತ್ತದೆ. ಇದಕ್ಕಾಗಿ ಕಬ್ಬಿಣದ ಆಧಾರವನ್ನು ಹಾಗೆಯೇ ಇರಿಸಲಾಗುತ್ತದೆ.












Click it and Unblock the Notifications