Bengaluru's Double Decker Flyover: ಸಂಚಾರ ಮುಕ್ತ ಯಾವಾಗ?-ಇಲ್ಲಿದೆ ಅಪ್ಡೇಟ್ ಮಾಹಿತಿ

ಬೆಂಗಳೂರು, ಏಪ್ರಿಲ್‌, 02: ಬೆಂಗಳೂರಿನಲ್ಲಿ ರಸ್ತೆ, ಸೇತುವೆಗಳ ಅಭಿವೃದ್ಧಿ ಆಗುತ್ತಲೇ ಇವೆ. ಹಾಗೆಯೇ ರಾಗಿಗುಡ್ಡ ಹಾಗೂ ಸಿಲ್ಕ್‌ ಬೋರ್ಟ್‌ ನಡುವೆ ನಿರ್ಮಾಣ ಆಗುತ್ತಿರುವ ಡಬಲ್‌ ಡೆಕ್ಕರ್‌ ಮೇಲ್ಸೇತುವೆ ಯಾವಾಗ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.

ರಾಗಿಗುಡ್ಡ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ನಡುವೆ ನಿರ್ಮಾಣ ಆಗುತ್ತಿರುವ 3.3 ಕಿಲೋ ಮೀಟರ್‌ ಉದ್ದದ ಡಬಲ್ ಡೆಕ್ಕರ್ ಮೇಲ್ಸುತುವೆಯನ್ನು ಇದೇ ಜೂನ್‌ನಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ ಎಂದು ಬಿಎಂಆರ್‌ಸಿಎಲ್‌ನಿಂದ ಮಾಹಿತಿ ಲಭ್ಯವಾಗಿದೆ.

Bengaluru s Double Decker Flyover When will open

ಇದು ಸಾರ್ವಜನಿಕರಿಗೆ ಸಂಚಾರ ಮುಕ್ತವಾದರೆ ಸೆಂಟ್ರಲ್ ಸಿಲ್ಕ್ ಬೋರ್ಡ್‌ನಲ್ಲಿ ಟ್ರಾಫಿಕ್ ಸಮಸ್ಯೆಗೆ ಕಡಿವಾಣ ಹಾಕಿದಂತಾಗುತ್ತದೆ. ಸಿಗ್ನಲ್ ಮುಕ್ತ ಎಲಿವೇಟೆಡ್ ರಸ್ತೆಯು ಲೋಕಾರ್ಪಣೆ ಆದರೆ ಬಿಟಿಎಂ ಲೇಔಟ್‌ನಿಂದ ಕೆಆರ್ ಪುರಂ, ರಾಗಿಗುಡ್ಡದಿಂದ ಕೆಆರ್ ಪುರಂ ಮತ್ತು ರಾಗಿಗುಡ್ಡ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಬರುವ ವಾಹನ ಸವಾರರಿಗೆ ಪ್ರಯೋಜನಕಾರಿ ಆಗಲಿದೆ ಎನ್ನುವ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ.

ಇದೇ ಮೇ ತಿಂಗಳ ಅಂತ್ಯದಲ್ಲಿ ಈ ರಸ್ತೆಯು ಸಾರ್ವಜನಿಕರಿಗೆ ಮುಕ್ತ ಆಗಲಿದೆ ಎಂದು ಈ ಹಿಂದೆ ತಿಳಿಸಲಾಗಿತ್ತು. ಡಬಲ್ ಡೆಕ್ಕರ್ ಮೇಲ್ಸುತುವೆಯಿಂದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ ವಾಹನಗಳ ದಟ್ಟಣೆ ತಗ್ಗಿದಂತಾಗುತ್ತದೆ. ಇನ್ನು ಇಲ್ಲಿ ಪ್ರತಿ ಗಂಟೆಗೆ 15,000ಕ್ಕೂ ಹೆಚ್ಚು ವಾಹನಗಳು ಸಂಚಾರ ಮಾಡುತ್ತವೆ ಎನ್ನುವ ಮಾಹಿತಿ ಇದೆ.

ಮಾರ್ಚ್ 17ರಂದು 2,520 ಕ್ಯೂಬಿಕ್ ಮೀಟರ್ ಕಾಂಕ್ರೀಟ್ ಸ್ಲ್ಯಾಬ್ ಅನ್ನು 42 ಗಂಟೆಗಳ ಕಾಲ ತಡೆರಹಿತವಾಗಿ ಹಾಕಲಾಗಿತ್ತು. ಸ್ಲ್ಯಾಬ್‌ಗೆ ಇದೀಗ 28 ದಿನಗಳ ಕ್ಯೂರಿಂಗ್ ಅಗತ್ಯ ಇದ್ದು, ಏಪ್ರಿಲ್ 15ರ ವೇಳಗೆ ಸಿದ್ಧ ಆಗಲಿದೆ. ಬಳಿಜ ಮತ್ತೊಂದಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಅಧಿಕಾರಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಲ್ಲಿ 5 ಲೂಪ್‌ಗಳು ಮತ್ತು ರ‍್ಯಾಂಪ್‌ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ಅವುಗಳು ರಾಗಿಗುಡ್ಡದಿಂದ ಹೊಸೂರು ರಸ್ತೆ, ರಾಗಿಗುಡ್ಡದಿಂದ ಕೆಆರ್ ಪುರಂ, ಎಚ್‌ಎಸ್‌ಆರ್ ಲೇಔಟ್‌ನಿಂದ ರಾಗಿಗುಡ್ಡ, ಬಿಟಿಎಂ ಲೇಔಟ್‌ನ ನೆಲಮಟ್ಟದಿಂದ ಫ್ಲೈಓವರ್ ರಸ್ತೆಯ ಮೊದಲ ಹಂತ ಮತ್ತು ಮೊದಲ ಹಂತದ ಫ್ಲೈಓವರ್ ರಸ್ತೆಯ ಮೊದಲ ಹಂತದಿಂದ ಬಿಟಿಎಂ ಲೇಔಟ್‌ನ ನೆಲ ಮಟ್ಟದ ಕಡೆಗೆ ಕಾರ್ಯನಿರ್ವಹಿಸಲಿವೆ ಎಂದು ಅಧಿಕಾರಿಗಳಿ ಮಾಹಿತಿ ನೀಡಿದ್ದಾರೆ.

ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ಹೊರ ವರ್ತುಲ ರಸ್ತೆ (2ಎ ಹಂತ) ಮತ್ತು ಆರ್‌ವಿ ರಸ್ತೆಯಿಂದ ಬೊಮ್ಮಸಂದ್ರ ಮಾರ್ಗದ (ರೀಚ್) BMRCL 2ಎ ಮಾರ್ಗದ ಇಂಟರ್ ಚೆಂಜ್ ಆಗಲಿದೆ. ಡಿಸೆಂಬರ್‌ನಲ್ಲಿ ರಿಟರ್ನ್ ದಿಕ್ಕಿನ ರಸ್ತೆ ಕಾರ್ಯಾರಂಭ ಮಾಡಲಿದೆ. ಈ ಜಂಕ್ಷನ್ ದಕ್ಷಿಣ ಭಾರತದ ಅತ್ಯಂತ ಕೆಟ್ಟ ಚಾಕ್ ಪಾಯಿಂಟ್ ಎಂದು ಗುರುತಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+