Bengaluru 2nd Airport: ನೆಲಮಂಗಲದಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಬಗ್ಗೆ ವಿನೋದ್ ರಾಜ್ ಹೇಳಿದ್ದಿಷ್ಟು
Bengaluru 2nd International Airport: ಬೆಂಗಳೂರಿನಲ್ಲಿ ಈಗಾಗಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದೆ. ಇದು ಎರಡು ಟರ್ಮಿನಲ್‌ಗಳನ್ನು ಒಳಗೊಂಡಿದೆ. ಆದರೂ ಪ್ರಯಾಣಿಕರ ದಟ್ಟಣೆ ಮತ್ತೆ ಹೆಚ್ಚಾಗುತ್ತಲಿದೆ. ಈ ಹಿನ್ನೆಲೆ ನಗರದ ಸಮೀಪ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರ ನಿರ್ಧರಿಸಿದೆ. ನೆಲಮಂಗಲ ಬಳಿ ಸರ್ವೇ ಕಾರ್ಯಗಳು ನಡೆದಿದೆ ಎನ್ನುವ ಮಾಹಿತಿ ತಿಳಿಯುತ್ತಿದ್ದಂತೆ ಇಲ್ಲಿನ ರೈತರು ರೊಚ್ಚಿಗೆದ್ದಿದ್ದಾರೆ.
ನೆಲಮಂಗಲದ ಬಳಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಜಾಗದ ಸರ್ವೇ ಕಾರ್ಯಗಳು ನಡೆದಿವೆ ಎನ್ನುವ ವಿಚಾರ ತಿಳಿಯುತ್ತಿದ್ದಂತೆ ಈ ಭಾಗದ ರೈತರು ಭೂಮಿ ಕಳೆದುಕೊಳ್ಳುವ ಆತಂಕ್ಕೆ ಒಳಗಾಗಿದ್ದರು. ಅಲ್ಲದೆ, ನೆಲಮಂಗದಲ್ಲಿ ವಿಮಾನ ನಿಲ್ದಾಣ ಬೇಡವೇ ಬೇಡ, ನಾವು ಫಲವತ್ತಾದ ಭೂಮಿಯನ್ನು ಬಿಟ್ಟುಕೊಡುವುದಿಲ್ಲ ಎಂದು ಕೆಂಡಕಾರುತ್ತಾ ಬಂದ್ದಿದ್ದರು. ಇದರ ಬೆನ್ನೆಲ್ಲೇ ಕ್ಷೇತ್ರದ ಶಾಸಕ ಇಲ್ಲಿನ ಜನರಿಗೆ ಅಭಯ ನೀಡುವ ಭರವಸೆಯೊಂದನ್ನು ನೀಡಿದ್ದಾರು. ಇದೇ ವೇಳೆ ನಟ ವಿನೋದ್ ರಾಜ್ ಕೂಡ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಸರ್ಕಾರದಿಂದ ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಸುಮಾರು 6000 ಹೆಕ್ಟೇರ್ ಪ್ರದೇಶದಲ್ಲಿ 2ನೇ ವಿಮಾನ ನಿಲ್ದಾಣಕ್ಕೆ ಸ್ಥಳ ಗುರುತು ಮಾಡಲಾಗಿತ್ತು ಎಂದು ತಿಳಿದುಬಂದಿತ್ತು. ಆದರೆ ಈ ಭಾಗದಲ್ಲಿ ಎರಡನೇ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಲೇ ಇದೆ. ಅಲ್ಲದೆ, ಈ ಭಾಗದ ರೈತರು ಆತಂಕದಲ್ಲಿದ್ದರು. ಈ ಬಗ್ಗೆ ಪ್ರತಿಕ್ರಿಸಿದ ಶಾಸಕರು ರೈತರಿಗೆ ಅಭಯ ತುಂಬುವಂತಹ ಕೆಲಸ ಮಾಡಿದ್ದರು.
ವಿಮಾನ ನಿಲ್ದಾಣದ ಅನೇಕ ಸಭೆಗಳಲ್ಲಿ ನಾನು ಕೂಡ ಭಾಗವಹಿಸಿದ್ದರು. ಈ ವೇಳೆ ನನ್ನ ಕ್ಷೇತ್ರಕ್ಕೆ ವಿಮಾನ ನಿಲ್ದಾಣ ಬೇಡ. ಇದರಿಂದ ರೈತರಿಗೆ ಅನ್ಯಾಯ ಆಗಲಿದೆ ಎಂಬುದಾಗಿ ನಾನು ಹೇಳಿದ್ದೇನೆ. ಇದಕ್ಕೆ ಸರ್ಕಾರ ಕೂಡ ಸ್ಪಂದನೆ ನೀಡಿದ್ದು, ನೆಲಮಂಗಲ ಭಾಗದಲ್ಲಿ ಮಾಡುವುದಿಲ್ಲ ಎಂಬ ಭರವಸೆ ನೀಡಿದೆ. ಒಂದು ವೇಳೆ ವಿಮಾನ ನಿಲ್ದಾಣ ಏನಾದ್ರೂ ನಿರ್ಮಾಣ ಮಾಡಲು ಮುಂದಾದರೆ, ನನ್ನ ಶಾಸಕ ಸ್ಥಾನ ಮುಡಿಪಾಗಿಟ್ಟು ಹೋರಾಟ ಮಾಡುತ್ತೇನೆ. ಕ್ಷೇತ್ರದ ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದರು.
ಇನ್ನು ಈ ಬಗ್ಗೆ ಚಲನಚಿತ್ರ ನಟ ವಿನೋದ್‌ರಾಜ್ ಮಾತನಾಡಿದ್ದು, ಶಾಸಕರು ನಮ್ಮ ಜೊತೆ ನಿಂತಿದ್ದಾರೆ. ಯಾವ ಸಮಸ್ಯೆಗಳು ಆಗುವುದಿಲ್ಲ ಎಂಬ ಭರವಸೆ ನಮಗಿದೆ. ಶಾಸಕರ ಮನೆ ಬಳಿ ನಾವೆಲ್ಲ ಹೋದಾಗ ಆತ್ಮೀಯವಾಗಿ ಮಾತನಾಡಿದರು. ಶಾಸಕರು ತಮ್ಮ ಸ್ಥಾನಕ್ಕೆ ಸಮಸ್ಯೆಯಾದರೂ ವಿಮಾನ ನಿಲ್ದಾಣ ಆಗಲು ಬಿಡುವುದಿಲ್ಲ. ನಾನಿದ್ದೇನೆ ಎಂಬ ಭರವಸೆ ನೀಡಿದ್ದರು. ಅವರ ಮೇಲೆ ಸಂಪೂರ್ಣ ನಂಬಿಕೆ ಇದೆ ಎಂದು ಹೇಳಿದರು.
ರಾಜ್ಯ ಸರ್ಕಾರ ನೆಲಮಂಗಲ-ಕುಣಿಗಲ್ ರಾಷ್ಟ್ರೀಯ ಹೆದ್ದಾರಿ 75ರ ಬಳಿ ಸುಮಾರು 6000 ಹೆಕ್ಟೇರ್ ಪ್ರದೇಶದಲ್ಲಿ ಬೆಂಗಳೂರಿನ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ಥಳವನ್ನು ಗುರುತು ಮಾಡಿದೆ. ಕೆಲವು ದಿನಗಳ ಹಿಂದೆಯಷ್ಟೇ ನೆಲಮಂಗಲ-ಕುಣಿಗಲ್ ಬಳಿಯ ಮೋಟಗೊಂಡನಹಳ್ಳಿ, ನೆಲಮಂಗಲ, ಸೋಂಪುರ, ಯೆಂಟಗಾನಹಳ್ಳಿ, ಸೋಲದೇವನಹಳ್ಳಿ ವ್ಯಾಪ್ತಿಯ ಮೂರು ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಸರ ಮಾಲಿನ್ಯ ಅಧಿಕಾರಿಗಳು ಹಾಗೂ ಸರ್ವೇ ಅಧಿಕಾರಿಗಳು ಸೇರಿದಂತೆ ಇನ್ನಿತರ ವಿಶೇಷ ತಂಡ ಭೇಟಿ ನೀಡಿ ಸರ್ವೆ ನಡೆಸಿದೆ.
ಯೋಜನೆಯೂ 13 ಹಳ್ಳಿನ ಪ್ರದೇಶಗಳನ್ನು ಒಳಗೊಂಡಿದೆ. ಇದು 3 ಗ್ರಾಮ ಪಂಚಾಯಿಸಿ ವ್ಯಾಪ್ತಿಗಳಿಗೆ ಸೇರಿದೆ. ಸೋಲದೇವನಹಳ್ಳಿ, ಮೋಟಗೊಂಡನಹಳ್ಳಿ, ಯೆಂಟಗಾನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6,000 ಹೆಕ್ಟೇರ್ ಪ್ರದೇಶ ನೀಡುತ್ತಿರುವ ಸರ್ಕಾರದ ನಡೆ ಕಂಡು ಸ್ಥಳೀಯ ರೈತರು ಹಾಗೂ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದರು.












Click it and Unblock the Notifications