ಹೆಚ್ಚು ಸಂಬಳಕ್ಕಿಂತ ನೆಮ್ಮದಿ ಮುಖ್ಯ ಎಂದ ಬೆಂಗಳೂರು ಯುವತಿ; ವೈರಲ್ ಆಯ್ತು ಪೋಸ್ಟ್‌

ಬೆಂಗಳೂರು ಮೂಲದ ಉದ್ಯೋಗಿಯೊಬ್ಬರ ತಮ್ಮ ವೃತ್ತಿ ನಿರ್ಧಾರ ಬಗ್ಗೆ ಹೇಳಿದ ಮಾತು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಹೆಚ್ಚು ಸಂಬಳದ ಉದ್ಯೋಗವನ್ನು ಬಿಟ್ಟು ಕಡಿಮೆ ಸಂಬಳದ ವರ್ಕ್ ಫ್ರಮ್ ಹೋಮ್ (WFH) ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿರುವ ಯುವತಿಯ ಕಥೆ ಹಲವರ ಗಮನ ಸೆಳೆದಿದೆ.

ವರದಿಗಳ ಪ್ರಕಾರ, ಪಾಟ್ನಾ ಮೂಲದ 24 ವರ್ಷದ ಶಿಖಾ ಪ್ರಿಯದರ್ಶಿನಿ ಅವರು ಬೆಂಗಳೂರಿನಲ್ಲಿ ವರ್ಷಕ್ಕೆ ₹10.5 ಲಕ್ಷ ಸಂಬಳ ನೀಡುತ್ತಿದ್ದ ಉದ್ಯೋಗಕ್ಕೆ ರಾಜೀನಾಮೆ ನೀಡಿ, ವರ್ಷಕ್ಕೆ ₹8.5 ಲಕ್ಷ ಸಂಬಳದ ಮನೆಯಿಂದಲೇ ಕೆಲಸ ಮಾಡುವ ಉದ್ಯೋಗವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

Bengaluru

ಏಕೆ ಉದ್ಯೋಗ ಬಿಟ್ಟರು?

ಸಾಮಾಜಿಕ ಜಾಲತಾಣ X ನಲ್ಲಿ ಹಂಚಿಕೊಂಡಿರುವ ಪೋಸ್ಟ್ ಪ್ರಕಾರ, ಕಂಪನಿಯು ವಾರದಲ್ಲಿ ಐದು ದಿನ ಕಚೇರಿಗೆ ಹಾಜರಾಗುವ ನಿಯಮವನ್ನು ಜಾರಿಗೊಳಿಸಿದ ಬಳಿಕ ಶಿಖಾ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಪ್ರತಿದಿನ ಸುಮಾರು 30 ಕಿಲೋಮೀಟರ್ ದೂರವನ್ನು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಪ್ರಯಾಣಿಸುವುದು ಅವರ ಸಮಯ, ಹಣ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಹೇಳಿಕೊಂಡಿದ್ದಾರೆ.

ಗೂಗಲ್‌ 'ಡ್ರೀಮ್ ಜಾಬ್' ತೊರೆದ ಭಾರತೀಯ ಟೆಕ್ಕಿ: ಸ್ವಂತ ಎಐ ಸ್ಟಾರ್ಟ್‌ಅಪ್‌ ಶುರು ಮಾಡಲು ಆಶ್ನಾ ದೋಷಿ ನಿರ್ಧಾರ
ಗೂಗಲ್‌ 'ಡ್ರೀಮ್ ಜಾಬ್' ತೊರೆದ ಭಾರತೀಯ ಟೆಕ್ಕಿ: ಸ್ವಂತ ಎಐ ಸ್ಟಾರ್ಟ್‌ಅಪ್‌ ಶುರು ಮಾಡಲು ಆಶ್ನಾ ದೋಷಿ ನಿರ್ಧಾರ

ಪ್ರತಿ ತಿಂಗಳು ಕ್ಯಾಬ್ ಪ್ರಯಾಣಕ್ಕೆ ಮಾತ್ರ 12,000 ರಿಂದ 15,000 ಖರ್ಚು ಆಗುತ್ತಿತ್ತು. ಇದರ ಜೊತೆಗೆ ಕಚೇರಿ ಸಂಬಂಧಿತ ಆಹಾರ ಹಾಗೂ ಇತರ ಖರ್ಚುಗಳೂ ಹೆಚ್ಚಾಗಿದ್ದವು ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಕಡಿಮೆ ಸಂಬಳ, ಹೆಚ್ಚು ಲಾಭ?

ಸಂಬಳದಲ್ಲಿ 2 ಲಕ್ಷ ಕಡಿಮೆ ಆದರೂ, ಒಟ್ಟಾರೆ ಲಾಭವನ್ನು ಲೆಕ್ಕ ಹಾಕಿದಾಗ ಹೊಸ ಉದ್ಯೋಗವೇ ಉತ್ತಮ ಎಂದು ಶಿಖಾ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಅವರು ಈಗ Implementation Advisor ಆಗಿ ಮನೆಯಿಂದಲೇ ಕೆಲಸ ಮಾಡುತ್ತಿದ್ದು, ತಮ್ಮ ಸಮಯವನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ಭಾರತೀಯ ಕಚೇರಿಗಳಲ್ಲಿನ 5 ಟಾಕ್ಸಿಕ್ ಅಭ್ಯಾಸಗಳನ್ನು ಬಿಚ್ಚಿಟ್ಟ ಬೆಂಗಳೂರಿನ ಸಂಸ್ಥಾಪಕಿ
ಭಾರತೀಯ ಕಚೇರಿಗಳಲ್ಲಿನ 5 ಟಾಕ್ಸಿಕ್ ಅಭ್ಯಾಸಗಳನ್ನು ಬಿಚ್ಚಿಟ್ಟ ಬೆಂಗಳೂರಿನ ಸಂಸ್ಥಾಪಕಿ

ಹೊಸ ಉದ್ಯೋಗದಿಂದ ಹಣ ಉಳಿತಾಯವಾಗುವುದರ ಜೊತೆಗೆ, ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ಸಿಕ್ಕಿದ್ದು, ಕೆಲಸ-ಜೀವನ ಸಮತೋಲನ (Work-Life Balance) ಉತ್ತಮಗೊಂಡಿದೆ ಎಂದು ಹೇಳಲಾಗಿದೆ. ಇದರ ಜೊತೆಗೆ ಹೊಸ ಕೌಶಲ್ಯಗಳನ್ನು ಕಲಿಯಲು, ಕಂಟೆಂಟ್ ಕ್ರಿಯೇಷನ್ ಮಾಡಲು ಹಾಗೂ ಕುಟುಂಬದವರ ಜೊತೆ ಹೆಚ್ಚು ಸಮಯ ಕಳೆಯಲು ಅವಕಾಶ ಸಿಕ್ಕಿದೆ.

ಶಿಖಾ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬಂದ ಬೆಂಬಲ:

ಈ ಪೋಸ್ಟ್‌ಗೆ ಸಾವಿರಾರು ಪ್ರತಿಕ್ರಿಯೆಗಳು ಬಂದಿದ್ದು, ಬಹುತೇಕರು ಶಿಖಾ ಅವರ ನಿರ್ಧಾರವನ್ನು ಬೆಂಬಲಿಸಿದ್ದಾರೆ.

"ಹೆಚ್ಚು ಸಂಬಳಕ್ಕಿಂತ ಮಾನಸಿಕ ನೆಮ್ಮದಿ ಮುಖ್ಯ", ಎಂದು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ.

"ಕಡಿಮೆ ಸಂಬಳ ಇದ್ದರೂ ಉತ್ತಮ ಜೀವನಮಟ್ಟ ಸಿಗುವುದಾದರೆ ಅದೇ ಉತ್ತಮ ಆಯ್ಕೆ", ಎಂದು ಇನ್ನು ಕೆಲವು ನೆಟ್ಟಿಗರು ಹೇಳಿದ್ದಾರೆ.

"ಬೆಂಗಳೂರು ಟ್ರಾಫಿಕ್ ಮತ್ತು ದಿನ ನಿತ್ಯದ ಪ್ರಯಾಣ ವೆಚ್ಚ ನಿಜಕ್ಕೂ ಕಂಗೆಡಿಸುತ್ತದೆ" ಎಂಬಂತಹ ಕಾಮೆಂಟ್‌ಗಳು ಹೆಚ್ಚು ಕಂಡುಬಂದಿವೆ.

ಈ ಘಟನೆ ಇಂದಿನ ಉದ್ಯೋಗಿಗಳಲ್ಲಿ ಹೆಚ್ಚುತ್ತಿರುವ ಒಂದು ಹೊಸ ಮನೋಭಾವವನ್ನು ತೋರಿಸುತ್ತದೆ. ಹೆಚ್ಚಿನ ಸಂಬಳಕ್ಕಿಂತ ಉತ್ತಮ ಜೀವನಶೈಲಿ, ಸಮಯದ ಸ್ವಾತಂತ್ರ್ಯ ಮತ್ತು ಮಾನಸಿಕ ನೆಮ್ಮದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಪ್ರವೃತ್ತಿ ಹೆಚ್ಚುತ್ತಿದೆ ಎಂಬುದನ್ನು ಈ ಕಥೆ ಮತ್ತೊಮ್ಮೆ ಸಾಬೀತುಪಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+