ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Vande Metro Rail; ಬೆಂಗಳೂರಿಗೆ ಬರಲಿದೆ ದೇಶದ ಮೊದಲ ರೈಲು

ವಂದೇ ಮೆಟ್ರೋ ರೈಲು ಪಡೆಯುವ ದೇಶದ ಮೊದಲ ನಗರ ಎಂಬ ಹೆಗ್ಗಳಿಕೆಗೆ ಬೆಂಗಳೂರು ಪಾತ್ರವಾಗಲಿದೆ. 100 ಕಿ. ಮೀ. ದೂರ ಇರುವ ಎರಡು ನಗರಗಳನ್ನು ಈ ರೈಲು ಸಂಪರ್ಕಿಸಲಿದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 05; ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಅತ್ಯಂತ ಜನಪ್ರಿಯವಾಗಿದೆ. ದೇಶದ 8ಕ್ಕೂ ಹೆಚ್ಚು ಮಾರ್ಗದಲ್ಲಿ ಈಗಾಗಲೇ ಈ ರೈಲುಗಳು ಸಂಚಾರ ನಡೆಸುತ್ತಿವೆ. ಪ್ರಯಾಣಿಕರಿಂದಲೂ ರೈಲು ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕರ್ನಾಟಕದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮೈಸೂರು-ಬೆಂಗಳೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಸಂಚಾರ ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ 2022ರ ನವೆಂಬರ್‌ನಲ್ಲಿ ಈ ರೈಲಿಗೆ ಹಸಿರು ನಿಶಾನೆ ತೋರಿಸಿದ್ದಾರೆ.

Vande Bharat Express; ದಕ್ಷಿಣ ಭಾರತಕ್ಕೆ 3 ಹೊಸ ರೈಲುಗಳುVande Bharat Express; ದಕ್ಷಿಣ ಭಾರತಕ್ಕೆ 3 ಹೊಸ ರೈಲುಗಳು

ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ಮಾರ್ಚ್ ಅಥವ ಏಪ್ರಿಲ್ ವೇಳೆಗೆ ವಂದೇ ಭಾರತ್ ರೈಲು ಸಂಚಾರ ಆರಂಭವಾಗಲಿದೆ. ಈ ನಡುವೆ ಕೇಂದ್ರ ಸರ್ಕಾರ 'ವಂದೇ ಮೆಟ್ರೋ' ಎಂಬ ಪರಿಕಲ್ಪನೆಯನ್ನು ಜಾರಿಗೆ ತರಲು ಮುಂದಾಗಿದೆ.

Vande Bharat Express : ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!Vande Bharat Express : ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!

ಎರಡು ನಗರಗಳ ನಡುವೆ ಸಂಚಾರ ನಡೆಸುವ ಉತ್ತಮ ದರ್ಜೆಯ ಪ್ರಾದೇಶಿಕ ರೈಲು 'ವಂದೇ ಮೆಟ್ರೋ' ಪರಿಕಲ್ಪನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಇಂತಹ ಯೋಜನೆ ಜಾರಿಗೊಳಿಸುವಂತೆ ರೈಲ್ವೆ ಸಚಿವಾಲಯಕ್ಕೆ ಸೂಚನೆ ನೀಡಿದ್ದಾರೆ. ದೇಶದಲ್ಲಿಯೇ ಇಂತಹ ಮೊದಲ ರೈಲು ಬೆಂಗಳೂರು ನಗರದಿಂದ ಸಂಚಾರ ಆರಂಭಿಸಲಿದೆ.

Vande Bharat Express : ಬೆಂಗಳೂರು ನಗರದಿಂದ ಮೂರು ಮಾರ್ಗದಲ್ಲಿ ರೈಲು ಸಂಚಾರ Vande Bharat Express : ಬೆಂಗಳೂರು ನಗರದಿಂದ ಮೂರು ಮಾರ್ಗದಲ್ಲಿ ರೈಲು ಸಂಚಾರ

ರೈಲ್ವೆ ಸಚಿವರಿಂದ ಮಾಹಿತಿ

ರೈಲ್ವೆ ಸಚಿವರಿಂದ ಮಾಹಿತಿ

'ವಂದೇ ಮೆಟ್ರೋ' ಪರಿಕಲ್ಪನೆ ಬಗ್ಗೆ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೈದರಾಬಾದ್‌ನಲ್ಲಿ ಮಾತನಾಡಿದ್ದಾರೆ, "ವಂದೇ ಭಾರತ್ ಯಶಸ್ವಿಯಾಗಿದೆ. ಎರಡು ನಗರಗಳ ನಡುವೆ ಸಂಚರಿಸುವ ಪ್ರಾದೇಶಿಕ ರೈಲು ವಂದೇ ಮೆಟ್ರೋ ಅಭಿವೃದ್ಧಿ ಪಡಿಸುವಂತೆ ಪ್ರಧಾನಿ ನರೇಂದ್ರ ಮೋದಿ ರೈಲ್ವೆ ಸಚಿವಾಲಯಕ್ಕೆ ಸೂಚಿಸಿದ್ದಾರೆ" ಎಂದರು.

ರೈಲ್ವೆ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ ದೇಶದಲ್ಲಿ ಮೊದಲ 'ವಂದೇ ಮೆಟ್ರೋ' ರೈಲು ಬೆಂಗಳೂರಿನಿಂದ ಸಂಚಾರ ನಡೆಸಲಿದೆ. ಯಾವ ನಗರಕ್ಕೆ ರೈಲು ಸಂಪರ್ಕ ಕಲ್ಪಿಸಲಿದೆ? ಎಂಬುದು ಇನ್ನೂ ಅಂತಿಮಗೊಂಡಿಲ್ಲ.

100 ಕಿ. ಮೀ. ಒಳಗಿನ ನಗರಗಳು

100 ಕಿ. ಮೀ. ಒಳಗಿನ ನಗರಗಳು

ಸಚಿವ ಅಶ್ವಿನಿ ವೈಷ್ಣವ್ ಅವರ ಹೇಳಿಕೆಯಂತೆ, "ವಂದೇ ಮೆಟ್ರೋ ರೈಲುಗಳು 100 ಕಿ. ಮೀ. ಒಳಗಿನ ಎರಡು ನಗರಗಳ ನಡುವೆ ಉತ್ತಮ ದರ್ಜೆಯ ಪ್ರಾದೇಶಿಕ ರೈಲು ಸೇವೆಯನ್ನು ನೀಡಲಿದೆ. ಮುಂದಿನ 12 ರಿಂದ 16 ತಿಂಗಳ ಒಳಗೆ ವಂದೇ ಮೆಟ್ರೋ ಪ್ರಾಯೋಗಿಕ ಮಾದರಿ ಅಭಿವೃದ್ಧಿಗೊಳಿಸುವ ಯೋಜನೆ ಇದೆ" ಎಂದು ಹೇಳಿದ್ದಾರೆ.

ಬೆಂಗಳೂರು ನಗರದಿಂದ ತುಮಕೂರು, ಹಿಂದೂಪುರ ಇಂತಹ ನಗರಗಳಿಗೆ ವಂದೇ ಮೆಟ್ರೋ ಸಂಪರ್ಕ ಕಲ್ಪಿಸಲಿದೆ. ಈಗಿರುವ ಸಾಮಾನ್ಯ ರೈಲಿಗಿಂತ ವೇಗವಾಗಿ ಈ ರೈಲುಗಳು ಸಂಚಾರ ನಡೆಸುತ್ತವೆ.

ಮೂಲ ಸೌಕರ್ಯಗಳ ಅಭಿವೃದ್ಧಿ

ಮೂಲ ಸೌಕರ್ಯಗಳ ಅಭಿವೃದ್ಧಿ

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ಸಹ ವಂದೇ ಮೆಟ್ರೋ ಯೋಜನೆ ಬಗ್ಗೆ ಮಾತನಾಡಿದ್ದಾರೆ. "ಭಾರತದಲ್ಲಿಯೇ ಬೆಂಗಳೂರು ಪ್ರಮುಖವಾದ ನಗರ ಪ್ರದೇಶವಾಗಿದೆ. ವಂದೇ ಮೆಟ್ರೋ ರೈಲು ಪಡೆಯುವ ಮೊದಲ ನಗರ ಬೆಂಗಳೂರು ಆಗಲಿದೆ" ಎಂದರು.

"ಬೆಂಗಳೂರು ಸುತ್ತಮುತ್ತ ಈಗ ನಡೆಯುತ್ತಿರುವ ಮೂಲ ಸೌಕರ್ಯ ಅಭಿವೃದ್ಧಿ, ಜೋಡಿ ಹಳಿ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳು ವಂದೇ ಭಾರತ್ ಮಾದರಿ ವೇಗದ ರೈಲುಗಳನ್ನು ಗಮನದಲ್ಲಿಟ್ಟುಕೊಂಡೇ ನಡೆಸಲಾಗುತ್ತಿದೆ. ವಂದೇ ಮೆಟ್ರೋ ಯೋಜನೆ ಆರಂಭವಾದರೆ ವಂದೇ ಭಾರತ್ ರೈಲುಗಳ ಸಂಚಾರಕ್ಕೂ ಸಹ ಅನುಕೂಲವಾಗಲಿದೆ" ಎಂದು ಹೇಳಿದ್ದಾರೆ.

ರೈಲ್ವೆ ಸಚಿವಾಲಯದ ಯೋಜನೆ ಏನು?

ರೈಲ್ವೆ ಸಚಿವಾಲಯದ ಯೋಜನೆ ಏನು?

ವಂದೇ ಭಾರತ್ ರೈಲುಗಳನ್ನು ಚೆನ್ನೈನ ಪೆರಂಬೂರ್ ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ದೂರದ ನಗರಗಳಿಗೆ ಸಂಚಾರ ನಡೆಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ 14 ಪ್ಲಸ್ ಬೋಗಿ ಅಳವಡಿಕೆ ಮಾಡುವುದು, ಕಡಿಮೆ ದೂರದ ನಗರಗಳಿಗೆ 8 ಪ್ಲಸ್ ಬೋಗಿ ಅಳವಡಿಕೆ ಮಾಡಿ ಅವುಗಳಿಗೆ ವಂದೇ ಮೆಟ್ರೋ ಹೆಸರಿನಲ್ಲಿ ಓಡಿಸುವುದು ರೈಲ್ವೆ ಇಲಾಖೆಯ ಯೋಜನೆ.

ಈಗಾಗಲೇ 2023-24ರ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಗರಿಷ್ಠ ಅನುದಾನ ನೀಡಿರುವ ಸರ್ಕಾರ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳನ್ನು ಸಹ ಪರಿಚಯಿಸಲು ಮುಂದಾಗಿದೆ. ದೇಶದ ಶತಾಬ್ದಿ, ರಾಜಧಾನಿ ಎಕ್ಸ್‌ಪ್ರೆಸ್‌ ರೈಲಿಗೆ ಪರ್ಯಾಯವಾಗಿ ವಂದೇ ಭಾರತ್ ಸಂಚಾರವನ್ನು ನಡೆಸಲಿದೆ.

ಬೆಂಗಳೂರು ನಗರಕ್ಕೆ ವಂದೇ ಭಾರತ್ ರೈಲು

ಬೆಂಗಳೂರು ನಗರಕ್ಕೆ ವಂದೇ ಭಾರತ್ ರೈಲು

ಮೈಸೂರು-ಚೆನ್ನೈ ನಡುವಿನ ವಂದೇ ಭಾರತ್ ರೈಲು ಬೆಂಗಳೂರು ಮೂಲಕ ಸಂಚಾರ ನಡೆಸುತ್ತಿದೆ. ಐಟಿಸಿಟಿಗೆ ಯಾವುದೇ ರೈಲು ಇದುವರೆಗೂ ಸಿಕ್ಕಿಲ್ಲ. ಬೆಂಗಳೂರು ನಗರದಿಂದ ಹುಬ್ಬಳ್ಳಿ-ಧಾರವಾಡ ತನಕ ವಂದೇ ಭಾರತ್ ರೈಲು ಓಡಿಸಲು ಅಗತ್ಯ ಕಾಮಗಾರಿಗಳು ನಡೆಯುತ್ತಿವೆ.

ಉಳಿದಂತೆ ಬೆಂಗಳೂರಿನಿಂದ ತೆಲಂಗಾಣದ ಕಾಚಿಗುಡಾ, ಸಿಕಂದರಾಬಾದ್-ತಿರುಪತಿ, ಸಿಕಂದರಾಬಾದ್-ಪುಣೆ ಮಾರ್ಗದಲ್ಲಿ ಹೊಸ ವಂದೇ ಭಾರತ್ ರೈಲುಗಳನ್ನು ಓಡಿಸುವ ಬಗ್ಗೆ ರೈಲ್ವೆ ಇಲಾಖೆ ಚಿಂತನೆ ನಡೆಸುತ್ತಿದೆ. ಬೆಂಗಳೂರು-ಹೈದರಾಬಾದ್ ಮಾರ್ಗದಲ್ಲಿಯೂ ರೈಲು ಓಡಿಸಬೇಕು ಎಂದು ಬೇಡಿಕೆ ಇಡಲಾಗಿದೆ.

English summary
Bengaluru will be one of the first city in the country which will get Vande Metro train. According to railway authorities Vande Metro rail will run towns located within a 100-km.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X