ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಬಸವೇಶ್ವರನಗರ ಜಂಕ್ಷನ್ ಮೇಲ್ಸೇತುವೆ ಸಂಚಾರಕ್ಕೆ ಮುಕ್ತ:CM

ಬಹಳಷ್ಟು ಸಲ ಗಡುವು ಪಡೆದಿದ್ದ, ಸಂಚಾರಕ್ಕೆ ಮುಖ್ಯವಾಗಿದ್ದ ಈ ಬಸವೇಶ್ವರ ನಗರ ಜಂಕ್ಷನ್ ಮೇಲ್ಸೇತುವೆ (Flyover) ಬಳಕೆಗೆ ಮುಕ್ತವಾಗಿದೆ. ಯಾವ ಕಾರಣಕ್ಕೆ ತಡವಾಯಿತು, ಗುಣಮಟ್ಟದ ಪರಿಶೀಲನೆ ಬಗ್ಗೆ ಬಿಬಿಎಂಪಿ ಹೇಳಿದ್ದೇನು? ಇಲ್ಲಿದೆ ವಿವರ.

|
Google Oneindia Kannada News

ಬೆಂಗಳೂರು, ಜನರಿ 30, ಮೈಸೂರು ರಸ್ತೆ ಹಾಗೂ ತುಮಕೂರು ರಸ್ತೆಗೆ ಸಂಪರ್ಕ ಸಾಧಿಸುವ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿನ ಮೇಲ್ಸೇತುವೆ ವಾಹನಸವಾರರ ಸಂಚಾರಕ್ಕೆ ಭಾನುವಾರ ಮುಕ್ತವಾಯಿತು.

ಬಹಳಷ್ಟು ಸಲ ಗಡುವು ಪಡೆದಿದ್ದ, ಸಂಚಾರಕ್ಕೆ ಮುಖ್ಯವಾಗಿದ್ದ ಈ ಬಸವೇಶ್ವರ ನಗರ ಜಂಕ್ಷನ್ ಮೇಲ್ಸೇತುವೆ (Flyover) ಅನ್ನು ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಉದ್ಘಾಟಿಸಿದರು. ಸಾಕಷ್ಟು ಗಡುವು ಪಡೆದಿದ್ದ ಹಾಗೂ ವಾಹನ ಸವಾರರು ಅತ್ಯಗತ್ಯವಾದ ಮೇಲ್ಸೇತುವೆ ಮುಕ್ತಗೊಳಿಸಲಾಗಿದೆ ಎಂದು ಅವರು ಘೋಷಿಸಿದರು.

Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ? Union Budget; ಬೆಂಗಳೂರು-ಮಂಗಳೂರು ರೈಲು ಕಾರವಾರ ತನಕ ವಿಸ್ತರಣೆ?

ಒಟ್ಟು 760 ಮೀಟರ್ ಉದ್ದದ ಈ ಬಸವೇಶ್ವರ ನಗರ ಜಂಕ್ಷನ್ ಮೇಲ್ಸೇತುವೆ ಕೆಲವು ತಾಂತ್ರಿಕ ಕಾರಣ ಹಾಗೂ ಗೊಂದಲಗಳ ಹಿನ್ನೆಲೆಯಲ್ಲಿ ಕಾಮಗಾರಿ ನಿಧಾನವಾಗಿತ್ತು. ಇದರಿಂದಾಗಿ ಹಲವು ಬಾರಿ ಗುಡವು ಮೀರಿತ್ತು. ಇದೀಗ ಸುಮಾರು 76.5 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಬಸವೇಶ್ವರ ನಗರ ಜಂಕ್ಷನ್ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಒಟ್ಟು 166ಕೋಟಿ ರೂ. ವೆಚ್ಚದ ಸಿಗ್ನಲ್ ಫ್ರಿ ಕಾರಿಡಾರ್ ಯೋಜನೆ ವ್ಯಾಪ್ತಿಗೆ ಪ್ರಸ್ತುತ ಈ ಮೇಲ್ಸೇತುವೆ ಹಾಗೂ ಶಿವನಗರ ಮತ್ತು ಮಂಜುನಾಥ್‌ನಗರದ ಮೇಲ್ಸೇತುವೆ ಯೋಜನೆಗಳು ಬರುತ್ತವೆ.

Bengaluru West Of Chord Road-Basaveshwara Nagar Junction Flyover Opened For Motorist On Sunday.

ಈ ಮೇಲ್ಸೇತುವೆಯು ಬಸವೇಶ್ವರ ನಗರ, ರಾಜಾಜಿನಗರ ಮತ್ತು ಬೆಂಗಳೂರು ಉತ್ತರಭಾಗದ ಜನರಿಗೆ ಹೆಚ್ಚು ಬಳಕೆಯಾಗಲಿದೆ. ಜೊತೆಗೆ ವಾಣಿಜ್ಯಾತ್ಮಕ ದೃಷ್ಟಿಯಿಂದ ಹಾಗೂ ಮೈಸೂರು- ತುಮಕೂರು ರಸ್ತೆಗೆ ಸಿಗ್ನಲ್ ಫ್ರಿ ಸಂಚಾರಕ್ಕೆ ಅನುಕೂಲವಾಗಲು ನಿರ್ಮಿಸಲಾಗಿದೆ.

ತಾಂತ್ರಿಕ ಕಾರಣ ಹಾಗೂ ಹಲವು ಗೊಂದಲಗಳು ಈ ಮೇಲ್ಸೇತುವೆ ನಿರ್ಮಾಣ ವೇಳೆ ಕಂಡು ಬಂದವು. ಏನೆಂದರೆ

ಮೊದಲು ರಾಜ್ಯ ಸರ್ಕಾರ ಏಕಮುಖ ಸಂಚಾರಕ್ಕಾಗಿ ಈ ಬಸವೇಶ್ವರ ಜಂಕ್ಷನ್ ಮೇಲ್ಸೇತುವೆ ನಿರ್ಮಿಸಲು ಮುಂದಾಗಿತ್ತು. ನಂತರ 2021ರಲ್ಲಿ ದ್ವಿಮುಖ ಸಂಚಾರ ರೀತಿಯಲ್ಲಿ ನಿರ್ಮಿಸಲು ಅನುಮೋದನೆ ನೀಡಿತು. ಈ ವೇಳೆ ಮೊದಲಿದ್ದ ಕಂಪನಿಯ ಗುತ್ತಿಗೆದಾರರನ್ನು ಬಿಡಿಸಿ ಕಡಿಮೆ ಹಣಕ್ಕೆ ಆರ್‌ಪಿಪಿ ಕಂಪನಿಗೆ ನೀಡಲಾಯಿತು. ಇದರಿಂದಲೂ ಮೇಲ್ಸೇತುವೆ ತಡವಾಯಿತು.

ಗುಣಮಟ್ಟದ ಪರಿಶೀಲನೆ ಆಗಿದೆ: ಬಿಬಿಎಂಪಿ

2019ರಿಂದಲೂ ಯೋಜನೆ ತಡವಾಗಲು ಕಾರಣವಾಗಿದ್ದ ತಾಂತ್ರಿಕ ಸಮಸ್ಯೆಗಳೆಲ್ಲವುಗಳಿಗೆ ಪರಿಹಾರ ದೊರೆತಿದೆ. ಬಹುನಿರೀಕ್ಷಿತ ಈ ಮೇಲ್ಸೇತುವೆ ಕೆಲಸ ಬಹುತೇಕ ಎಲ್ಲ ಪೂರ್ಣಗೊಂಡಿದೆ. ಮೇಲ್ಸೇತುವೆಯು ಗುಣಮಟ್ಟ ಪರಿಶೀಲನೆಯಲ್ಲಿ ಪಾಸಾಗಿದೆ. ಸದ್ಯ ವಾಹನಸವಾರರಿಗೆ ಮುಕ್ತಗೊಳ್ಳಲು ಸಿದ್ಧವಾಗಿದೆ ಎಂದು ಇತ್ತೀಚೆಗೆ ಪರಿಶೀಲನೆ ನಡೆಸಿದ್ದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಯೋಜನಾ ವಿಭಾಗದ ಮುಖ್ಯ ಎಂಜಿನಿಯರ್ ವಿನಾಯಕ್ ಸುಗೋರ್ ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ವಸತಿ ಸಚಿವ ವಿ.ಸೋಮಣ್ಣ ಅವರು ಮೇಲ್ಸೇತುವೆ ಪರಿಶೀಲಿಸಿದ್ದರು.

ಮುಖ್ಯಮಂತ್ರಿ ಸಮಾರಂಭದಲ್ಲಿ ಬಸವೇಶ್ವರ ನಗರ ಮೇಲ್ಸೇತುವೆ ಜಂಕ್ಷನ್ ಜೊತೆಗೆ ಪೊಲೀಸ್ ಠಾಣೆಯ ನೂತನ ಕಟ್ಟಡ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡ ಹಾಗೂ ಭಾರತರತ್ನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣವನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ವಸತಿ ಸಚಿವ ವಿ.ಸೋಮಣ್ಣ, ಐಟಿ ಬಿಟಿ ಸಚಿವ ಡಾ.ಸಿ.ಎನ್.ಅಶ್ವಥ್ ನಾರಾಯಣ, ಅಬಕಾರಿ ಸಚಿವ ಕೆ.ಗೋಪಾಲಯ್ಯ, ಸಂಸದ ತೇಜಸ್ವಿ ಸೂರ್ಯ ಮತ್ತಿತರರು ಪಾಲ್ಗೊಂಡಿದ್ದರು.

English summary
Bengaluru West of chord road- Basaveshwara nagar junction flyover opened for motorist on sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X