Bengaluru Weather Report: ಸೋಮವಾರದಿಂದ 4 ದಿನ ಭಾರೀ ಮಳೆಗೆ ನಗರ ಸಾಕ್ಷಿಯಾಗಲಿದೆ: ಮುನ್ಸೂಚನೆ

ಬೆಂಗಳೂರು, ಏಪ್ರಿಲ್ 23: ಬಿಸಿಲ ಝಳಕ್ಕೆ ತತ್ತರಿಸಿದ್ದ ಉದ್ಯಾನ ನಗರಿ ಬೆಂಗಳೂರಿಗೆ ವರುಣನ ಸಿಂಚನವಾಗಿದೆ. ನಾಳೆಯಿಂದ ಮೂರು ದಿನ ಬೆಂಗಳೂರಿಗೆ ಭಾರೀ ಮಳೆ ಬರುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ತಮಿಳುನಾಡು ಕರಾವಳಿ ಭಾಗದಲ್ಲಿ ವಾತಾವರಣದಲ್ಲಿ ಬದಲಾವಣೆಗಳು ಉಂಟಾಗಿವೆ. ಅಲ್ಲಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ ಎದ್ದಿದೆ. ಅದರ ಪರಿಣಾಮವಾಗಿ ತಮಿಳುನಾಡು, ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಮಳೆ ನಿರೀಕ್ಷೆ ಇದೆ. ಅದರಲ್ಲೂ ನಗರದಲ್ಲಿ ನಾಳೆ ಏಪ್ರಿಲ್ 24 ರಿಂದ ಏಪ್ರಿಲ್ 27 ರವರೆಗೆ ನಾಲ್ಕು ದಿನ ಗುಡುಗು ಮಿಂಚು ಸಹಿತ ವ್ಯಾಪಕ ಮಳೆ ಅಬ್ಬರಿಸಲಿದೆ.

Bengaluru Weather Report: April 24 to 27th Heavy Rain For Bengaluru City: IMD Forecast

ನಗರದಲ್ಲಿ ಮೂರು-ನಾಲ್ಕು ದಿನಗಳಿಂದ ಮಳೆಯ ವಾತಾವರಣ ಕಂಡು ಬಂದಿದ್ದು, ತಾಪಮಾನ ತುಸು ಕಡಿಮೆಯಾಗಿದೆ. ಶುಕ್ರವಾರ ಸಂಜೆ ನಂತರ ಹಲವೆಡೆ ಜೋರು ಮಳೆ ದಾಖಲಾಗಿದ್ದು, ಮತ್ತೆ ವರುಣನ ದರ್ಶನವಾಗಲಿಲ್ಲ. ರಾತ್ರಿ ಇಡಿ ಮೋಡ ಕವಿದ ವಾತಾವರಣ ಕಂಡು ಬರುತ್ತಿದ್ದು, ಭಾನುವಾರದವರೆಗೆ ಮಳೆ ಬಿದ್ದಿಲ್ಲ. ಸೋಮವಾರದಿಂದ ಧಾರಾಕಾರ ಮಳೆ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ಮಳೆ ವರದಿ ಮಾಹಿತಿ ನೀಡಿದೆ.

ತಡರಾತ್ರಿವರೆಗೂ ಮಳೆ ಬರಲಿದೆ

ಸೋಮವಾರದಿಂದ 4 ದಿನ ನಿರಂತರವಾಗಿ ಬಿಸಿಲ ಧಗೆ ಕಡಿಮೆಯಾಗಿ ಸಂಜೆ ಇಲ್ಲವೇ ರಾತ್ರಿ ಮಳೆ ಶುರುವಾಗಲಿದೆ. ಅದು ತಡರಾತ್ರಿವರೆಗೂ ಮುಂದುವರೆಯಲೂ ಬಹುದೆಂದು ಅಂದಾಜಿಲಾಗಿದೆ. ಈ ವೇಳೆ ಗಾಳಿಯ ವೇಗ ಹೆಚ್ಚಿರಲಿದೆ. ನಗರದ ಇಡಿ ವತಾವರಣವೇ ತಂಪುಮಯವಾಗಲಿದೆ. ಕೆಲವು ಬಡಾವಣೆಗಳು ವಿದ್ಯುತ್ ಕಡಿತದ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ.

Bengaluru Weather Report: April 24 to 27th Heavy Rain For Bengaluru City: IMD Forecast

ಈ ಅವಧಿಯಲ್ಲಿ ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಭಾನುವಾರ ಮಧ್ಯಾಹ್ನದವರೆಗೆ ಹಿಂದಿನ 24 ಗಂಟೆಗಳಲ್ಲಿ ಬೆಂಗಳೂರಿನಲ್ಲಿ ಎಲ್ಲಿಯೂ ಮಳೆ ಬಿದ್ದ ಬಗ್ಗೆ ವರದಿಯಾಗಿಲ್ಲ.

ಭಾನುವಾರ ಬೆಳಗ್ಗೆ ಬೆಂಗಳೂರು ನಗರದಲ್ಲಿ 34.8 ಡಿಗ್ರಿ ಸೆಲ್ಸಿಯಸ್, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 31 ಡಿಗ್ರಿ ಸೆಲ್ಸಿಯಸ್ ಮತ್ತು ಬೆಂಗಳೂರು ಎಚ್‌ಎಎಲ್‌ನಲ್ಲಿ 34.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಪಾಮಾನ ದಾಖಲಾಗಿದೆ.

ಕರ್ನಾಟಕದ ಹವಾಮಾನ ವರದಿ

ಮುಂದಿನ ಮೂರರಿಂದ ನಾಲ್ಕು ದಿನ ರಾಜ್ಯದ ವಿವಿಧ ಭಾಗದಲ್ಲಿ ತುಂತುರು ಮಳೆ ಆಗಬಹುದು. ನಾಲ್ಕನೇ ದಿನ ಅಂದರೆ ಏಪ್ರಿಲ್ 27ರಿಂದ ಎರಡು ದಿನ ಮಾತ್ರ ಒಳಡನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಕೊಡಗು, ಹಾಸನ, ದಾವಣಗೆರೆ, ತುಮಕೂರು, ಮೈಸೂರು, ಮಂಡ್ಯ ಮುಂತಾದೆಡೆ ಜೋರು ಮಳೆ ಆಗಮಿಸಲಿದೆ. ಉಳಿದೆಡೆ ಸಾಧಾರಣದಿಂದ ಉತ್ತಮ ಮಳೆಯಾಗಲಿದೆ ಎಂಬ ಮುನ್ಸೂಚನೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+