BWSSB: ನೈರ್ಮಲೀಕರಣ ಕಾಮೀಕರಿಗಾಗಿ ಜಲಮಂಡಳಿ ಅನ್ನಪೂರ್ಣ ಯೋಜನೆ, ಸ್ಮಾರ್ಟ್‌ಕಾರ್ಡ್ ವಿತರಣೆ
ಬೆಂಗಳೂರು, ಸೆಪ್ಟಂಬರ್ 02: ಬೆಂಗಳೂರು ಮಹಾನನಗರದ ಸ್ವಚ್ಛತೆ ಕಾಪಾಡುವಲ್ಲಿ ನೈರ್ಮಲ್ಯೀಕರ ಕಾರ್ಮಿಕರ ಸೇವೆ ಮಹತ್ತರವಾಗಿದೆ. ಅವರ ತ್ಯಾಗವನ್ನು ಗೌರವಿಸುವ ಉದ್ದೇಶದಿಂದ ರಾಜ್ಯ ಸರ್ಕಾರದ ವತಿಯಿಂದ ''ಜಲಮಂಡಳಿ ಅನ್ನಪೂರ್ಣ ಯೋಜನೆ" ಆರಂಭಿಸಲಾಗಿದೆ ಎಂದು ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ತಿಳಿಸಿದರು. ಬಳಿಕ ಅವರು ಯೋಜನೆಯ ಸ್ಮಾರ್ಟ್ ಕಾರ್ಡ್ ಅನ್ನು ಕಾರ್ಮಿಕರಿಗೆ ವಿತರಿಸಿದರು.
ಜಲಮಂಡಳಿಯ ರಜತ ಭವನದಲ್ಲಿ ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಿ ಮಾತನಾಡಿದ ಡಿಕೆ ಶಿವಕುಮಾರ್ ಅವರು, ಈ ಯೋಜನೆಯಡಿ 700 ಕ್ಕೂ ಹೆಚ್ಚು ನೈರ್ಮಲ್ಯೀಕರಣ ಕಾರ್ಮಿಕರಿಗೆ ಪ್ರತೀ ತಿಂಗಳು ₹1500 ನೇರವಾಗಿ ಖಾತೆಗೆ ವರ್ಗಾಯಿಸಲಾಗುತ್ತದೆ. ಈ ಹಣದಲ್ಲಿ ಅವರಿಗೆ ಆರೋಗ್ಯಕರ ಉಪಾಹಾರ, ಆರ್ಥಿಕ ಭದ್ರತೆ ಮತ್ತು ಸಾಮಾಜಿಕ ಗೌರವ ಲಭಿಸುತ್ತದೆ ಎಂದು ಯೋಜನೆ ಪ್ರಯೋಜನೆ ಬಗ್ಗೆ ವಿವರಿಸಿದರು.

BWSSB: ಕಾವೇರಿ 6ನೇ ಹಂತದ ಯೋಜನೆ
ನಗರದ ನೀರು ಹಾಗೂ ಒಳಚರಂಡಿ ಸೇವೆಗಳಲ್ಲಿ ಬದಲಾವಣೆಗಳಾಗುತ್ತಿದೆ. ಟ್ಯಾಂಕರ್ ಮಾಫಿಯಾಗೆ ಕಡಿವಾಣ ಹಾಕಿದ ಪರಿಣಾಮ ನಾಗರಿಕರಿಗೆ ಸುಲಭವಾಗಿ ನೀರು ದೊರೆಯುತ್ತಿದೆ ಎಂದು ಡಿಸಿಎಂ ಹೇಳಿದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾವೇರಿ 5ನೇ ಹಂತ ಯಶಸ್ವಿಯಾಗಿ ಜಾರಿ ಮಾಡಲಾಗಿದೆ. ಈಗ ಬೆಳೆಯುತ್ತಿರುವ ನಗರಕ್ಕೆ ನೀರು ಪೂರೈಸಲು ಕಾವೇರಿ 6ನೇ ಹಂತದ ಯೋಜನೆ ಪ್ರಾರಂಭವಾಗಿದೆ ಎಂದು ಭವಿಷ್ಯದ ನೀರು ಪೂರೈಕೆ ಬಗ್ಗೆ ಮಾಹಿತಿ ನೀಡಿದರು.
ಇನ್ನೂ ಬೆಂಗಳೂರಲ್ಲಿ ಇತ್ತೀಚೆಗೆ ಪರಿಷ್ಕರಣೆ ಮಾಡಿದ ಕುಡಿಯುವ ನೀರಿನ ದರ ಪರಿಷ್ಕರಣೆಯಿಂದ ವಾರ್ಷಿಕವಾಗಿ 500 ಕೋಟಿ ರೂಪಾಯಿ ಹೆಚ್ಚುವರಿ ಆದಾಯ ಬರಲಿದೆ. ಬೆಳೆಯುತ್ತಿರುವ ಬೆಂಗಳೂರು ನಗರಕ್ಕೆ 6ನೇ ಹಂತದ ಕಾವೇರಿ ಯೋಜನೆ ಆರಂಭಿಸುವ ಗುರಿ ಸರ್ಕಾರ ಹೊಂದಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದರು.
ಯೋಜನೆಯ ತಾಂತ್ರಿಕ ಅಂಶಗಳನ್ನು ವಿವರಿಸಿದ ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ. ರಾಮ್ ಪ್ರಸಾತ್ ಮನೋಹರ್ ಅವರು, ನೈರ್ಮಲ್ಯೀಕರಣ ಕಾರ್ಮಿಕರು ಹಗಲು-ರಾತ್ರಿ ಶ್ರಮಿಸುತ್ತಾರೆ. ಈ ಕಾರ್ಮಿಕರಿಗೆ ಉತ್ತಮ ಉಪಹಾರ ಖಚಿತಪಡಿಸುವುದೇ ಈ ಯೋಜನೆಯ ಉದ್ದೇಶ. ನೇರ ಹಣ ಪಾವತಿ ವ್ಯವಸ್ಥೆ ಕಾರ್ಮಿಕರ ಗೌರವ ಹೆಚ್ಚಿಸುವುದರೊಂದಿಗೆ ಇತರೆ ನಗರಗಳಿಗೆ ಮಾದರಿಯಾಗಲಿದೆ ಎಂದು ತಿಳಿಸಿದರು.












Click it and Unblock the Notifications