ಏಕಾಏಕಿ ಕೆಲಸ ಬಿಟ್ಟು ತಪ್ಪು ಮಾಡಿದೆ, ಜೆನ್ ಜೀ ಯುವಕ ಕಣ್ಣೀರು: ವೈರಲ್ ವಿಡಿಯೋ
ಕೆಲವೊಮ್ಮೆ ಬದುಕಿನಲ್ಲಿ ನಾವು ತೆಗೆದುಕೊಳ್ಳುವ ಸಣ್ಣ ಸಣ್ಣ ನಿರ್ಧಾರಗಳೂ ಸಹ ನಮ್ಮ ಬದುಕಿನ ಮೇಲೆ ಗಂಭೀರವಾದ ಪರಿಣಾಮಗಳನ್ನು ಬೀರುತ್ತವೆ. ಅದರಲ್ಲೂ ದುಡುಕಿ ಏನಾದರೂ ನಿರ್ಧಾರ ತೆಗೆದುಕೊಂಡರೆ ಅದು ಗಂಭೀರವಾದ ಪರಿಣಾಮಗಳನ್ನೇ ಉಂಟು ಮಾಡುತ್ತವೆ. ಇದೇ ಕಾರಣಕ್ಕೆ ಹಿರಿಯರು ಕೆಲಸ ಬಿಡುವುದಕ್ಕೂ ಮುಂಚೆ ನೂರು ಬಾರಿ ಯೋಚನೆ ಮಾಡು, ಹೊಸ ಕೆಲಸ ಸಿಕ್ಕರೂ ಆಫರ್ ಲೆಟರ್ ಕೈ ಸೇರುವ ವರೆಗೂ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಸಲಹೆ ನೀಡುತ್ತಿರುತ್ತಾರೆ. ಆದರೆ, ಜೆನ್ - ಜೀ (Gen Z) ಯುವಕ ಕೆಸಲ ಬಿಟ್ಟು ಈಗ ಕೆಲಸ ಸಿಗದೆ ಕಣ್ಣೀರಾಗಿರುವ ವಿಡಿಯೋ ವೈರಲ್ ಆಗುತ್ತಿದೆ.
ಜೆನ್ ಜೀ (1997 ಮತ್ತು 2012ರ ನಡುವೆ ಜನಿಸಿದ ಯುವ ಪೀಳಿಗೆ) ಈಗಷ್ಟೇ ಉದ್ಯೋಗಕ್ಕೆ ಅಂಬೆಗಾಲಿಡುತ್ತಿರುವ ಜನರೇಷನ್ ಅಂತಲೇ ಹೇಳಬಹುದು. ಈಗಾಗಲೇ ವಿವಿಧ ಕ್ಷೇತ್ರಗಳಲ್ಲಿ ಜೆನ್ ಜೀ ಉದ್ಯೋಗಿಗಳ ಬಗ್ಗೆ ಒಳ್ಳೆಯ ಅಥವಾ ಹೇಳಿಕೊಳ್ಳುವಷ್ಟು ಉತ್ತಮ ಅಭಿಪ್ರಾಯ ಇಲ್ಲ. ಕಾರ್ಪೋರೇಷನ್ ಕಲ್ಚರ್ನಲ್ಲಿ ವಿಪರೀತ ಕೆಲಸ ಮಾಡಿಸಿಕೊಳ್ಳುವುದರ ವಿರುದ್ಧ ಈ ಜನರೇಷನ್ ತಿರುಗಿ ಬಿದ್ದಿರುವುದು ಸಹ ಪ್ರಮುಖ ಕಾರಣ ಎಂದರೆ ತಪ್ಪಿಲ್ಲ. ಇದೀಗ ಇನ್ಸ್ಟಾಗ್ರಾಮನ್ನಲ್ಲಿ ಜೆನ್ ಜೀ ಯುವಕನೊಬ್ಬ ಉದ್ಯೋಗ ಹುಡುಕುವುದು ಯಾಕೆ ಇಷ್ಟೊಂದು ಕಷ್ಟವಾಗಿದೆ. ನಾನು ಕೆಲಸ ಬಿಡುವ ಮುಂಚೆ ಯೋಚನೆ ಮಾಡಬೇಕಾಗಿತ್ತು ಎಂದು ಕಣ್ಣೀರಾಗಿರುವ ವಿಡಿಯೋ ಎಂಥವರನ್ನೂ ಕಣ್ಣೀರು ಹಾಕುವಂತೆ ಮಾಡುತ್ತಿದೆ.

ಅನ್ಶುಲ್ ಉತ್ತಯ್ಯ ಎನ್ನುವ ಯುವಕ ಈಚೆಗೆ ಕೆಲಸ ಬೇಸರವಾಗುತ್ತಿದೆ ಹೀಗಾಗಿ ಈಗ ಇರುವ ಕೆಲಸ ಬಿಡುತ್ತಿದ್ದೇನೆ ಎಂದು ವಿಡಿಯೋವೊಂದನ್ನು ಮಾಡಿದ್ದರು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿತ್ತು. ಇದೀಗ ಅವರು ಮತ್ತೊಂದು ವಿಡಿಯೋ ಮಾಡಿದ್ದು ಅದರಲ್ಲಿ ಕಣ್ಣೀರು ಹಾಕಿದ್ದಾರೆ. ಈ ವಿಡಿಯೋ ಸಹ ವೈರಲ್ ಆಗಿದೆ. ಕಠಿಣ ಉದ್ಯೋಗ ಮಾರುಕಟ್ಟೆ ಇದೆ. ಅಲ್ಲದೇ ಏಕಾಏಕಿ ಕೆಲಸ ಬಿಟ್ಟಿರುವ ತಮ್ಮ ನಿರ್ಧಾರಕ್ಕೆ ಈಗ ವಿಷಾದ ವ್ಯಕ್ತಪಡಿಸಿದ್ದಾರೆ.
ಇನ್ಸ್ಟಾಗ್ರಾಮ್ನ (Instagram/@aanshul.uthaiah)ನ ವಿಡಿಯೋದಲ್ಲಿ 22 ವರ್ಷದ ಅನ್ಶುಲ್ ಉತ್ತಯ್ಯ ಅವರು, ಯಾವುದೇ ಮುಂದಾಲೋಚನೆ ಇಲ್ಲದೆ ಕೆಲಸ ತೊರೆದಿರುವುದು ಈಗ ಸಂಕಷ್ಟಕ್ಕೆ ಸಿಲುಕಿರುವುದಾಗಿ ಹೇಳಿದ್ದಾರೆ. ಕೆಲಸ ಹುಡುಕುವುದು ಸವಾಲಗಿ ಪರಿಣಮಿಸಿದೆ. ನಾನು ಯಾವುದೇ ಮುಂದಾಲೋಚನೆ ಇಲ್ಲದೆ ನನ್ನ ಕೆಲಸವನ್ನು ತೊರೆದಿದ್ದೇನೆ. ಆದರೆ ಉದ್ಯೋಗ ಹುಡುಕುವುದು ನಾನು ಅಂದುಕೊಂಡಷ್ಟು ಸುಲಭವಲ್ಲ. ಉದ್ಯೋಗ ಮಾರುಕಟ್ಟೆ ಏಕೆ ಇಷ್ಟೊಂದು ಕೆಟ್ಟದಾಗಿದೆ. ನಾನು ಸ್ವಲ್ಪ ಸಮಯದಿಂದ ಉದ್ಯೋಗ ಹುಡುಕುತ್ತಿದ್ದೇನೆ ಆದರೆ ಕೆಲಸ ಸಿಗುತ್ತಿಲ್ಲ ಎಂದು ಹೇಳಿದ್ದಾರೆ.
ಈಗ ಪರಿಸ್ಥಿತಿ ಕೈ ಮೀರಿದೆ. ನಾನು ನನ್ನ ನಿರ್ಧಾರವನ್ನು ಬದಲಾಯಿಸಲು ಸಾಧ್ಯವಿಲ್ಲ. ಯಾವುದೇ ಉದ್ಯೋಗಾವಕಾಶಗಳ ಬಗ್ಗೆ ತಿಳಿದರೆ ದಯವಿಟ್ಟು ತಿಳಿಸಿ ಎಂದು ವಿಡಿಯೋದಲ್ಲಿ ಉತ್ತಯ್ಯ ಹೇಳಿದ್ದು. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
-
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್












Click it and Unblock the Notifications