ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ಅಪಡೇಟ್ ಇಲ್ಲಿದೆ
ಬೆಂಗಳೂರು, ಜನವರಿ 5: ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಬೆಂಗಳೂರು-ವಿಜಯವಾಡ ಎಕ್ಸ್‌ಪ್ರೆಸ್‌ವೇ ಯೋಜನೆಯ ಮೊದಲ 4 ಪ್ಯಾಕೇಜ್‌ಗಳ ನಿರ್ಮಾಣಕ್ಕಾಗಿ ತಾಂತ್ರಿಕ ಬಿಡ್‌ಗಳನ್ನು ತೆರೆದಿದ್ದು, 518 ಕಿಮೀ ರಸ್ತೆ ನಿರ್ಮಾಣಕ್ಕೆ 13 ಸಂಸ್ಥೆಗಳು ಒಟ್ಟು 34 ಬಿಡ್‌ಗಳನ್ನು ಸಲ್ಲಿಸಿವೆ.
ಬ್ರೌನ್‌ಫೀಲ್ಡ್-ಅಪ್‌ಗ್ರೇಡ್ (36%) ಮತ್ತು ಗ್ರೀನ್‌ಫೀಲ್ಡ್ (64%) ಮಾರ್ಗಗಳ ಜೊತೆಗೆ ಭಾರತಮಾಲಾ ಪರಿಯೋಜನಾ ಹಂತ 2 ರ ಅಡಿಯಲ್ಲಿ ಈ 6 ಪಥಗಳ ಪ್ರವೇಶ ನಿಯಂತ್ರಿತ ಎಕ್ಸ್‌ಪ್ರೆಸ್‌ವೇ ನಿರ್ಮಿಸಲಾಗುವುದು. ಇದರ ಜೋಡಣೆಯು ಕಡಪದಿಂದ ಹಾದುಹೋಗುತ್ತದೆ. ಅದಕ್ಕೆ ಬಿಕೆವಿ ಎಕ್ಸ್‌ಪ್ರೆಸ್‌ವೇ ಎಂದು ಹೆಸರು ಇಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಟೆಂಡರ್ ಪ್ಯಾಕೇಜುಗಳು 1 ರಿಂದ 4 ಆಂಧ್ರಪ್ರದೇಶದಲ್ಲಿದೆ. ಕೋಡೂರ್ (ಚೈನೇಜ್ 0.00) ಅನ್ನು ನಲ್ಲಚೆರುವು ಪಲ್ಲಿಗೆ (96.30) ಸಂಪರ್ಕಿಸುತ್ತದೆ. 730 ದಿನ (2 ವರ್ಷ) ಗಡುವಿನ ಜೊತೆಗೆ ಸೆಪ್ಟೆಂಬರ್ 2022 ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅವುಗಳ ನಿರ್ಮಾಣಕ್ಕಾಗಿ ಟೆಂಡರ್‌ಗಳನ್ನು ಈಗ ಆಹ್ವಾನಿಸಿದೆ.

ಈಗ ಬಿಡ್‌ನಲ್ಲಿ ಇರುವ ಪ್ರಮುಖ ಕಂಪೆನಿಗಳೆಂದರೆ ದಿಲೀಪ್ ಬಿಲ್ಡ್‌ಕಾನ್ ಲಿಮಿಟೆಡ್ ಪ್ಯಾಕೇಜ್ 1 (ಪಿ1), ಪ್ಯಾಕೇಜ್ 2, ಪ್ಯಾಕೇಜ್ 3 & ಪ್ಯಾಕೇಜ್ 4ರಲ್ಲಿ ಟೆಂಡರ್‌ನಲ್ಲಿ ಸ್ಪರ್ಧೆ ಮಾಡುತ್ತಿದೆ. ಇದಲ್ಲದೆ ದಿನೇಶ್ಚಂದ್ರ ಆರ್ ಅಗರವಾಲ್ ಇನ್ಫ್ರಾಕಾನ್ ಪ್ರೈ. ಲಿಮಿಟೆಡ್, ಜಿಆರ್ ಇನ್ಫ್ರಾಪ್ರಾಜೆಕ್ಟ್ಸ್ ಲಿಮಿಟೆಡ್, ಎಚ್‌ಜಿ ಇನ್ಫ್ರಾ ಇಂಜಿನಿಯರಿಂಗ್ ಲಿಮಿಟೆಡ್, ಕೆಸಿಸಿ ಬಿಲ್ಡ್‌ಕಾನ್ ಪ್ರೈವೇಟ್ ಲಿಮಿಟೆಡ್, ಕೆಎನ್‌ಆರ್ ಕನ್‌ಸ್ಟ್ರಕ್ಷನ್ಸ್ ಲಿಮಿಟೆಡ್, ಲೆಕಾನ್ ಇನ್ಫ್ರಾಸ್ಟ್ರಕ್ಚರ್ ಪ್ರೈ. ಲಿಮಿಟೆಡ್, ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್, ಎನ್‌ಎಸ್‌ಪಿಆರ್ ಕನ್‌ಸ್ಟ್ರಕ್ಷನ್ಸ್ ಇಂಡಿಯಾ ಪ್ರೈ. ಲಿಮಿಟೆಡ್, ರಾಜೇಂದ್ರ ಸಿಂಗ್ ಭಂಬೂ ಇನ್ಫ್ರಾ ಪ್ರೈ. ಲಿಮಿಟೆಡ್, ರಾಜ್ ಪಥ್ ಇನ್ಫ್ರಾಕಾನ್ ಪ್ರೈ. ಲಿಮಿಟೆಡ್, ಆರ್‌ಕೆ ಇನ್ಫ್ರಾಕಾರ್ಪ್ ಪ್ರೈ. ಲಿಮಿಟೆಡ್, ಆರ್‌ಆರ್ ಕನ್ಸ್ಟ್ರಕ್ಷನ್ಸ್ ಮತ್ತು ಇನ್ಫ್ರಾಸ್ಟ್ರಕ್ಚರ್ ಇಂಡಿಯಾ ಪ್ರೈ. ಲಿಮಿಟೆಡ್ ಕಣದಲ್ಲಿವೆ.
ಪ್ಯಾಕೇಜ್ ಒಂದರಲ್ಲಿ ಆಂಧ್ರಪ್ರದೇಶದ ಭಾರತಮಾಲಾ ಪರಿಯೋಜನಾ ಹಂತ 1ರ ಅಡಿಯಲ್ಲಿ ಎಚ್‌ಎಎಂನಲ್ಲಿ ಬೆಂಗಳೂರು ವಿಜಯವಾಡ ಇಸಿಯ ಕೋಡೂರಿನಿಂದ ವನವೋಲುವರೆಗೆ ಆರು ಪಥಗಳ ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿಯ ಅಭಿವೃದ್ಧಿ ನಡೆಯುತ್ತದೆ. ಪ್ಯಾಕೇಜ್ ಎರಡರಲ್ಲಿ ಆಂಧ್ರಪ್ರದೇಶದ ಭಾರತಮಾಲಾ ಪರಿಯೋಜನಾ ಹಂತ 1ರ ಅಡಿಯಲ್ಲಿ ಎಚ್‌ಎಎಂನಲ್ಲಿ ವನವೋಲುನಿಂದ ಬೆಂಗಳೂರು ವಿಜಯವಾಡ ಇಸಿಯ ವಂಕರಕುಂಟಾವರೆಗೆ ಆರು ಪಥಗಳ ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿಯ ಅಭಿವೃದ್ಧಿ ನಡೆಯುತ್ತದೆ.
ಪ್ಯಾಕೇಜ್ 3ರಲ್ಲಿ ಆಂಧ್ರಪ್ರದೇಶದ ಭಾರತಮಾಲಾ ಪರಿಯೋಜನಾ ಹಂತ 1ರ ಅಡಿಯಲ್ಲಿ ಎಚ್‌ಎಎಂನಲ್ಲಿ 6 ಪಥಗಳ ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿಯ ಅಭಿವೃದ್ಧಿ ಬೆಂಗಳೂರು ವಿಜಯವಾಡ ಇಸಿಯ ಓಡುಲಪಲ್ಲಿ ಆಂಧ್ರಪ್ರದೇಶದವರೆಗೆ ನಡೆಯುತ್ತದೆ. ಪ್ಯಾಕೇಜ್ 4ರಲ್ಲಿ ಆಂಧ್ರಪ್ರದೇಶದಲ್ಲಿ ಭಾರತಮಾಲಾ ಪರಿಯೋಜನಾ ಹಂತ 1ರ ಅಡಿಯಲ್ಲಿ ಎಚ್‌ಎಎಂ ಮೋಡ್‌ನಲ್ಲಿ ಬೆಂಗಳೂರು ವಿಜಯವಾಡ ಇಸಿಯ ಓಡುಲಪಲ್ಲಿಯಿಂದ ನಲ್ಲಚೆರುವು ಪಲ್ಲಿವರೆಗೆ 6 ಲೇನ್ ಪ್ರವೇಶ ನಿಯಂತ್ರಿತ ಗ್ರೀನ್‌ಫೀಲ್ಡ್ ಹೆದ್ದಾರಿಯ ಅಭಿವೃದ್ಧಿ ನಡೆಯುತ್ತದೆ.

ಬಿಡ್‌ಗಳನ್ನು ತಾಂತ್ರಿಕ ಮೌಲ್ಯಮಾಪನಕ್ಕಾಗಿ ಕಳುಹಿಸಲಾಗಿದ್ದು, ಅದು ಪೂರ್ಣಗೊಳ್ಳಲು ಒಂದೆರಡು ತಿಂಗಳು ತೆಗೆದುಕೊಳ್ಳಬಹುದು. ಅದು ಪೂರ್ಣಗೊಂಡಾಗ ಪ್ರತಿ ಪ್ಯಾಕೇಜ್‌ಗೆ ಕಡಿಮೆ ಬಿಡ್ ಮಾಡಿದವರು ಮತ್ತು ಹೆಚ್ಚಾಗಿ ಗುತ್ತಿಗೆದಾರರು ಯಾರು ಎಂಬುದನ್ನು ಬಹಿರಂಗಪಡಿಸಲು ತಾಂತ್ರಿಕವಾಗಿ ಅರ್ಹವಾದ ಬಿಡ್‌ದಾರರ ಹಣಕಾಸು ಬಿಡ್‌ಗಳನ್ನು ತೆರೆಯಲಾಗುತ್ತದೆ.
ಯೋಜನೆಯ 343 ಕಿಮೀ ಗ್ರೀನ್‌ಫೀಲ್ಡ್ ವಿಭಾಗವನ್ನು ಕೊಡಿಕೊಂಡ, ಎಪಿಯಿಂದ ಅಡ್ಡಂಕಿ, ಎಪಿಗೆ ಸಂಪರ್ಕಿಸುವ ಭಾಗವನ್ನು 14 ಸಿವಿಲ್ ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿದೆ. ಇನ್ನೂ 6 ಪ್ಯಾಕೇಜ್‌ಗಳಿಗೆ ಬಿಡ್ಡಿಂಗ್ ನಡೆಯುತ್ತಿದ್ದು, 4ಕ್ಕೆ ಟೆಂಡರ್ ನೋಟೀಸ್ ಬಾಕಿ ಇದೆ.












Click it and Unblock the Notifications