ವಿಧಾನಸೌಧ ಸ್ಫೋಟದ AI ವಿಡಿಯೋ ವೈರಲ್; ಕೂಲಿ ಯುವಕ ಅರೆಸ್ಟ್, 'ನಿಂಗಿದು ಬೇಕಿತ್ತಾ ಮಗನೆ...'
ಬೆಂಗಳೂರು: ರಾಜಧಾನಿ ಬೆಂಗಳೂರಿನ ಶಕ್ತಿ ಕೇಂದ್ರವಾಗಿರುವ, ಪ್ರಜಾಪ್ರಭುತ್ವದ ಸಂಕೇತವಾಗಿರುವ ವಿಧಾನಸೌಧಕ್ಕೆ ಬಾಂಬ್ ಇಟ್ಟು ಉಡಾಯಿಸಿದಂತೆ ಎಐ ವಿಡಿಯೋ ಮಾಡಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಎರಡು ದಿನಗಳಿಂದ ವೈರಲ್ ಆಗಿ ಹೆಚ್ಚು ಚರ್ಚೆ ಆಗುತ್ತಿದ್ದ ವಿಚಾರಕ್ಕೆ ಅಂತಿಮವಾಗಿ ತೆರೆ ಬಿದ್ದಿದೆ. ಈ ವಿಚಾರ ಕೇಳಿದ ಸಾರ್ವಜನಿಕರು 'ನಿಂಗಿದೂ ಬೇಕಿತ್ತಾ ಮಗನೆ..' ಎಂದಿದ್ದಾರೆ.
ಬಂಧಿತ 25 ವರ್ಷದ ಬಿಹಾರ ಮೂಲದ ಅರಾರಿಯಾ ಜಿಲ್ಲೆಯ ನಿವಾಸಿ ಹಜರತ್ ಅಲಿ ಶೋಯಾಬ್. ಈತ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬಳಸಿ ವಿಧಾನ ಸೌಧದಲ್ಲಿ ಬಾಂಬ್ ಸ್ಫೋಟ ಸಂಭವಿಸಿದಂತೆ ಬಿಂಬಿಸಿದ್ದ ವಿಡಿಯೋವನ್ನು ಹಂಚಿಕೊಂಡಿದ್ದ. ವಿಡಿಯೋ ನೋಡ ನೋಡುತ್ತಿದ್ದಂತೆ ಭಾರೀ ವೈರಲ್ ಆಗಿತ್ತು.

ಕೂಲಿ ಕಾರ್ಮಿಕನಿಂದ ಈ ಕೆಲಸ
ಬಿಹಾರದ ಅರಾರಿಯಾ ಜಿಲ್ಲೆಯಿಂದ ಈತ ಕೂಲಿ ಕೆಲಸಕ್ಕಾಗಿ ಕೆಲವು ತಿಂಗಳ ಹಿಂದಷ್ಟೇ ಬೆಂಗಳೂರಿಗೆ ಬಂದಿದ್ದ. ನಗರದಲ್ಲಿ ಬೆಂಗಳೂರಿನಲ್ಲಿ ದಿನಗೂಲಿ ಕಾರ್ಮಿಕನಾಗಿ (ಪೈಪ್-ಫಿಟ್ಟರ್) ಕೆಲಸ ಮಾಡುತ್ತಿದ್ದ ಆತನನ್ನು ಬಂಧಿಸಿದ ವಿಧಾನಸೌಧ ಠಾಣೆ ಪೊಲೀಸರು ಮಾಹಿತಿ ನೀಡಿದ್ದಾರೆ. ಕೂಲಿ ಕೆಲಸ ಮಾಡೋದು ಬಿಟ್ಟು ಬೇರೆಯದ್ದು ಮಾಡಿದರೆ ಹೀಗೆ ಆಗೋದು ಎಂದು ನೆಟ್ಟಿಗರು ತಿಳಿಸಿದ್ದಾರೆ.
ವೈರಲ್ ವಿಡಿಯೋದಲ್ಲಿ ಏನಿದೆ?
ವಿಧಾನಸೌಧದ ಉಡಾಯಿಸುವ ಎಐ ರಚಿತ ವಿಡಿಯೋವನ್ನು ಬಂಧಿತ ಯುವಕ ಮಂಗಳವಾರ ಬೆಳಿಗ್ಗೆ ತನ್ನ 'jnxkingh_g' ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರ. ವಿಡಿಯೋದಲ್ಲಿ ತಾನು ವಿಧಾನಸೌಧ ಬಾಂಬ್ ಇಟ್ಟು ಉಡಾಯಿಸುವೆ ಎಂದು ಶಕ್ತಿಸೌಧದ ದಿಕ್ಕಿನತ್ತ ಕೈ ಮಾಡಿ ತೋರಿಸುತ್ತಿದ್ದಂತೆ ಐತಿಹಾಸಿಕ ಕಟ್ಟಡದೊಳಗಿನಿಂದ ಭಾರಿ ಸ್ಫೋಟ ಸಂಭವಿಸಿದಂತೆ ತೋರಿಸಲಾಗಿದೆ. ಕಟ್ಟಡ ಧ್ವಂಸಗೊಂಡು, ಬೆಂಕಿ, ಹೊಗೆ ಆಗದೆತ್ತರಕ್ಕೆ ಚಿಮ್ಮಿದಂತೆ ವಿಡಿಯೋ ಎಡಿಟ್ ಮಾಡಲಾಗಿತ್ತು.
ಈ ವಿಡಿಯೋಗೆ ನೋಡಿದ ನೆಟ್ಟಿಗರು ಈ ರೀತಿಯ ಘಟನೆಗಳಿಗೆ ಅವಕಾಶ ಕೊಡಬಾರದು. ಐತಿಹಾಸಿಕ ವಿಧಾನಸೌಧ ಸ್ಪೋಟದ ವಿಡಿಯೋ ಮಾಡಿದ ವ್ಯಕ್ತಿ ಮೇಲೆ ಎಫ್‌ಐಆರ್ ಹಾಕಿ ಬಂಧಿಸುಂತೆ ಆಗ್ರಹ ಕೇಳಿ ಬಂದಿತ್ತು. ಕೂಡಲೇ ಕಾರ್ಯ ಪ್ರವೃತ್ತರಾದ ವಿಧಾನಸೌಧ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.
Bengaluru Police arrested a 25-year-old Bihar native for allegedly creating & posting an AI-generated video depicting a bomb blast at Vidhana Soudha on Instagram.The video, posted on Tuesday, showed an explosion at the state legislature building. Police registered an FIR & traced the account using digital clues. The accused, a daily-wage pipe fitter, is in police custody. Investigators are probing his motive & possible involvement of others.
— ChristinMathewPhilip (@ChristinMP_) October 21, 2026
'ನಿಂಗಿದು ಬೇಕತ್ತಾ ಮಗನೆ..' ವಲಸಿಗರಿಗೆ ಎಚ್ಚರಿಕೆ ಸಂದೇಶ
ಸಾಮಾಜಿಕ ಜಾಲತಾಣ ಖಾತೆಗೆ ಸಂಬಂಧಿಸಿದ ಇಂಟರ್ನೆಟ್ ಪ್ರೋಟೋಕಾಲ್ (IP) ಲಾಗ್‌ಗಳು ಮತ್ತು ಡಿಜಿಟಲ್ ಹೆಜ್ಜೆಗುರುತು ಪತ್ತೆ ಮಾಡಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೂಲಿ ಕೆಲಸ ಬಂದವನು ಕೂಲಿ ಮಾಡಿಕೊಂಡಿರಬೇಕು. ಅದು ಬಿಟ್ಟು ಈ ರೀತಿ ಎಐ ವಿಡಿಯೋ ಎಡಿಟ್ ಮಾಡಿ, ಅದನ್ನು ಹರಿಬಿಟ್ಟು ಪೇಚಿಗೆ ಸಿಲುಕಿಕೊಳ್ಳುವ, ಕಾನೂನು ಸಂಕಷ್ಟ ಎದುರಿಸುವ ಅಗತ್ಯವಿರಲಿಲ್ಲ. 'ನಿಂಗಿದು ಬೇಕತ್ತಾ ಮಗನೆ..' ಸಾರ್ವಜನಿಕರು ಹೇಳಿದ್ದಾರೆ. ಜೊತೆಗೆ ಬೇರೆ ಬೇರೆ ಭಾಗಗಳಿಂದ ಬೆಂಗಳೂರಿಗೆ ಬಂದು ಇಲ್ಲಿ ಬಾಲ ಬಿಚ್ಚುವವರಿಗೆ ಎಚ್ಚರಿಕೆ ಸಂದೇಶದಂತಾಗಿದೆ.
A man from #Bihar was arrested for allegedly posting an Artificial Intelligence (#AI) generated video falsely depicting an explosion at the #VidhanaSoudha in #Bengaluru. The arrested person is Hazarat Ali, 25, from Koshkipur in Araria. He moved to Bengaluru a few months ago and engaged in pipe work, police said. The video was posted on the Instagram handle jnx__king__h_g claiming that “Vidhana Soudha has exploded”. The FIR was registered on Tuesday after the Vidhana Soudha police's social media monitoring officer came across the video. @DeccanHerald
— Prajwal D'Souza (@prajwaldza) October 21, 2026


Click it and Unblock the Notifications
