Get Updates
Get notified of breaking news, exclusive insights, and must-see stories!

Bengaluru Vande Bharat Express: ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆ ಗುಡ್‌ನ್ಯೂಸ್!

Bengaluru Vande Bharat Express: ಬೆಂಗಳೂರಿನಿಂದ ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಸಂಬಂಧಿಸಿದಂತೆ ಭರ್ಜರಿ ಗುಡ್‌ನ್ಯೂಸ್‌ವೊಂದು ಸಿಕ್ಕಿದೆ. ಕೇಂದ್ರ ಸರ್ಕಾರವು ವಂದೇ ಭಾರತ್ ರೈಲುಗಳನ್ನು ಪರಿಚಯಿಸಿದ್ದು. ಹಲವು ಪ್ರದೇಶಗಳಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು ಹಾಗೂ ಬೆಂಗಳೂರಿನಿಂದ ಕರ್ನಾಟಕದ ಇನ್ನುಳಿದ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲುಗಳಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದೇಶದಾದ್ಯಂತ ಕೇಂದ್ರ ಸರ್ಕಾರವು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಸೇವೆ ಪ್ರಾರಂಭಿಸಿದ್ದು. ಇತ್ತೀಚಿನ ವರ್ಷಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಬೆಂಗಳೂರು - ಕರ್ನಾಟಕ ಸೇರಿದಂತೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

Bengaluru Vande Bharat Express Big Good News for Passengers

ಇದೇ ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಕೆಎಸ್ಆರ್ ಬೆಂಗಳೂರು-ಎರ್ನಾಕುಲಂ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಗೆ ಕಾರ್ಯಾಚರಣೆಯ ಮೊದಲ ತಿಂಗಳಲ್ಲಿ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರು - ಎರ್ನಾಕುಲಂ ಎರಡೂ ಪ್ರದೇಶಗಳಲ್ಲೂ ಬುಕ್ಕಿಂಗ್ ಪ್ರಕ್ರಿಯೆ ಶೇ 100% ದಾಟಿದ್ದು, ಇಲ್ಲಿಯವರೆಗೆ 55,000 ಕ್ಕೂ ಹೆಚ್ಚು ಪ್ರಯಾಣಿಕರು ಈ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದ್ದಾರೆ ಎಂದು ಹೇಳಲಾಗಿದೆ.

ಈ ರೈಲು ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಾದ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳ ನಗರಗಳನ್ನು ಸಂಪರ್ಕಿಸುವ ಮೊದಲ ಅಂತರರಾಜ್ಯ ಅರೆ ಹೈಸ್ಪೀಡ್ ಪ್ರೀಮಿಯಂ ರೈಲಾಗಿದೆ. ನವೆಂಬರ್‌ನಲ್ಲಿ, ಬೆಂಗಳೂರು-ಎರ್ನಾಕುಲಂ ಸೇವೆಯು 11,447 ಪ್ರಯಾಣಿಕರು ಪ್ರಯಾಣ ಮಾಡಿದ್ದು, ಸರಾಸರಿ 127% ಬುಕಿಂಗ್ ಆಗಿದೆ.

ಡಿಸೆಂಬರ್‌ನಲ್ಲಿ, ಇದು 16,129 ಪ್ರಯಾಣಿಕರು ಈ ರೈಲಿನಲ್ಲಿ ಸಂಚಾರ ಮಾಡಿದ್ದಾರೆ. ಸರಾಸರಿ 117% ಬುಕಿಂಗ್ ಆಗಿದೆ ಎಂದು ನೈಋತ್ಯ ರೈಲ್ವೆ (SWR), ಬೆಂಗಳೂರು ವಿಭಾಗದ ಅಂಕಿಅಂಶಗಳು ತಿಳಿಸಿವೆ. ಎರ್ನಾಕುಲಂ-ಬೆಂಗಳೂರು ಸೇವೆಯು ನವೆಂಬರ್‌ನಲ್ಲಿ 12,786 ಪ್ರಯಾಣಿಕರು ಪ್ರಯಾಣ ಮಾಡಿದ್ದು. ಸರಾಸರಿ 141% ಬುಕಿಂಗ್ ಆಗಿದೆ. ಡಿಸೆಂಬರ್‌ನಲ್ಲಿ, ಸಂಖ್ಯೆ 14,742 ಕ್ಕೆ ಏರಿದೆ, 106% ಸರಾಸರಿ ಬುಕಿಂಗ್ ಆಗಿದೆ ಎಂದು ವರದಿ ಹೇಳಿದೆ.

ಕ್ರಿಸ್‌ಮಸ್ ಮತ್ತು ಹೊಸ ವರ್ಷದ ರಜಾದಿನಗಳು ಹಾಗೂ ಶಬರಿಮಲೆ ತೀರ್ಥಯಾತ್ರೆಯಿಂದಾಗಿ ಡಿಸೆಂಬರ್‌ನಲ್ಲಿ ರೈಲಿನಲ್ಲಿ ಟಿಕೆಟ್‌ಗಳ ಬೇಡಿಕೆಯಲ್ಲಿ ಹೆಚ್ಚಳವನ್ನು ನೈಋತ್ಯ ರೈಲ್ವೆ ನಿರೀಕ್ಷಿಸಿದೆ. ದೈನಂದಿನ ಪ್ರಯಾಣಿಕರು, ವ್ಯಾಪಾರ ಪ್ರಯಾಣಿಕರು, ವಿದ್ಯಾರ್ಥಿಗಳು ಮತ್ತು ಪ್ರವಾಸಿಗರಿಗೆ ಈ ರೈಲು ಜನಪ್ರಿಯ ಆಯ್ಕೆಯಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+