Bengaluru Tunnel Road: ಸುರಂಗ ಕೊರೆಯಲು 5 ಜಾಗ ಗುರುತು, ಪ್ರಮುಖ ಪ್ರಕ್ರಿಯೆಗಳು ಆರಂಭ
ಬೆಂಗಳೂರು, ಜುಲೈ 19: ಬ್ರ್ಯಾಂಡ್ ಬೆಂಗಳೂರು ಉಪಕ್ರಮದಡಿ ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಮೊದಲನೇ ಸುರಂಗ ಮಾರ್ಗದ ಯೋಜನೆ ಕಾಮಗಾರಿಯ ಪ್ರಮುಖ ಪ್ರಕ್ರಿಯೆ ಆರಂಭವಾಗಲಿವೆ. ಹೆಬ್ಬಾಳ ಎಸ್ಟಿಂ ಮಾಲ್ ನಿಂದ ಸಿಲ್ಕಬೋರ್ಡ್ ವರೆಗಿನ (Bengaluru Tunnel Road Project) ಬಹುಕೋಟಿ ವೆಚ್ಚದ ಈ ಸುರಂಗ ರಸ್ತೆ ಕೊರೆಯಲು 05 ಪ್ರಮುಖ ಜಾಗಗಳನ್ನು ಗುರುತಿಸಲಾಗಿದೆ. ಇದರಿಂದ ಐತಿಹಾಸಿಕ ಹಾಗೂ ಪ್ರಸಿದ್ಧ ಭೂ ಪ್ರದೇಶಗಳಿಗೆ ಧಕ್ಕೆ ಆಗುವ ಆತಂಕ ಎದುರಾಗಿದೆ.
ಈ ಮೊದಲು ಸುರಂಗ ಮಾರ್ಗವು 16.74 ಕಿ.ಮೀ. ಉದ್ದವಿದೆ. ಬೆಂಗಳೂರಿನ ಕೆಲವು ಪ್ರಮುಖ ಪ್ರದೇಶಗಳ ಭು ಭಾಗಗಳ ಕಳೆಗೆ ಈ ಸುರಂಗ ಮಾರ್ಗ ಹಾದು ಹೋಗಲಿದೆ. ಅದಕ್ಕಾಗಿ ಐದು ಜಾಗಗಳನ್ನು ಗುರುತಿಸಲಾಗಿದೆ. ಟನಲ್ ಬೋರಿಂಗ್ ಮಷಿನ್ ಆ ಜಾಗಗಳಲ್ಲಿ ಇಳಿಸಲು, ಕೊರೆಯುವಿಕೆ ಆರಂಭಕ್ಕೆ ಪ್ರತಿ ಜಾಗದಲ್ಲೂ ಸುಮಾರು 6.5 ಎಕರೆ ಭೂಮಿ ಅಗತ್ಯವಿದೆ. 100 ಅಡಿ ಆಳದ 'ಶಾಫ್ಟ್‌ಗಳನ್ನು' ಅಗೆಯಲಾಗುತ್ತದೆ. ಇನ್ನೂ ಆಸ್ತಿಗಳ ಸ್ವಾಧೀನ ಹಾಗೂ ಪುನರ್ವಸತಿ ಕ್ರಮಗಳಿಗಾಗಿ ಸುಮಾರು 800 ಕೋಟಿ ರೂಪಾಯಿ ಮೀಸಲಿಡಲಾಗಿದೆ ಎಂದು 'ಡಿಎಚ್' ವರದಿ ಮಾಡಿದೆ.

ಸುರಂಗ ರಸ್ತೆ:ಈ ಪ್ರದೇಶಗಳ ಮೇಲೆ ಪರಿಣಾಮ?
ಸರ್ಕಾರ ಹಾಗೂ ಗುತ್ತಿಗೆದಾರ ಕಂಪನಿಗಳು ಗುರುತಿಸಿರುವ ಜಾಗಗಳಲ್ಲಿ ಐತಿಹಾಸಿಕ ಲಾಲ್ ಬಾಗ್ (ಸಸ್ಯೋದ್ಯಾನ), ರ್ಖಯಾತ ಆಸ್ಪತ್ರೆ ರೇಸ್ ಕೋರ್ಸ್ ಸೇರಿ ಇತರ ಪ್ರಮುಖ ಸ್ಥಳಗಳು ಸೇರಿವೆ. ಇದೀಗ ಆ ಆಸ್ತಿ ಮಾಲೀಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಶುರುವಾಗಿದೆ.
ಸೆಂಟ್ರಲ್ ಸಿಲ್ಕ್ ಬೋರ್ಡ್ ಮತ್ತು ಹೆಬ್ಬಾಳ ಸಂಪರ್ಕಿಸುವ ಈ ಸುರಂಗ ರಸ್ತೆ ಅಂದಾಜು ವೆಚ್ಚ ಬರೋಬ್ಬರಿ 17,698 ಕೋಟಿ ರೂಪಾಯಿ. ಇದು ಸಂಪೂರ್ಣ ಭೂಗತ ರಸ್ತೆಯಾಗಿದೆ. ಸುರಂಗ ಕೊರೆಯುವ ಹೊಣೆ ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಹೊಂದಿದೆ. ಅದೇ ಕಂಪನಿಯು 05 ಸುರಂಗ ಬೋರಿಂಗ್ ಯಂತ್ರಗಳು (ಟಿಬಿಎಂ) ಕೆಲವೇ ದಿನಗಳಲ್ಲಿ ಕೆಲಸ ಆರಂಭಿಸುವ ನಿರೀಕ್ಷೆ ಇದೆ.
ಗುರುತಿಸಿದ ಐದು ಜಾಗಗಳು ಯಾವುವು?
ಬಿ-ಸ್ಮೈಲ್ ಕಂಪನಿ ಸದ್ಯಕ್ಕೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ಕೋರಮಂಗಲದ ಹೊಸೂರು ರಸ್ತೆಯ ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆ. ಸೇಂಟ್ ಆಂಥೋನಿ ಫ್ರೈರಿಯ ಹಿಂಭಾಗದ ಖಾಲಿ ಜಾಗ ಅಗೆಯಲು ಪ್ಲಾನ್ ಮಾಡಲಾಗಿದೆ. ರೋಗಿಗಳ ಆರೈಕೆ ಹಾಗೂ ಇತರ ಕಾರ್ಯಗಳಿಗೆ ಈ ಸ್ಥಳ ಬಳಕೆ ಆಗುತ್ತಿದೆ. ಸಸ್ಯೋದ್ಯಾನ, ರೇಸ್‌ಕೋರ್ಸ್, ಅರಮನೆ ಮೈದಾನ, ಹೆಬ್ಬಾಳ ಭಾಗದ ಕೆಲವು ಭಾಗಗಳು ಇತರ ಸರ್ಕಾರಿ ಅಧೀನದ ಜಾಗ ಸ್ವಾಧೀನ ಹೆಚ್ಚು ಸರಳ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಲಾಲ್‌ಬಾಗ್ ಸಿದ್ದಾಪುರ ಪ್ರವೇಶದ್ವಾರದ ಬಳಿ ಸುರಂಗ ಅಗೆಯಲು ಜಾಗ ಗುರುತಿಸಲಾಗಿದೆ. ಮೇಖ್ರಿ ವೃತ್ತದ ಬಳಿ ಅರಮನೆ ಮೈದಾನದಲ್ಲಿ, ಸುರಂಗ ರಸ್ತೆಗೆ ಜಾಗ ಗುರುತಿಸಲಾಗಿದೆ. ಇನ್ನೂ ಈ ಸುರಂಗ ಯೋಜನೆಗೆ ಸಾಕಷ್ಟು ಆಕ್ರೋಶಗಳು ವ್ಯಕ್ತವಾದರೂ ಸಹಿತ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿದಿಲ್ಲ. ತಜ್ಞರು ಸಹ ಈ ಯೋಜನೆಯಿಂದ ಅಂತರ್ಜಲಕ್ಕೆ ತೊಂದರೆ ಆಗಲಿದೆ. ಯೋಜನೆ ಸಾಕಾರ ಕಷ್ಟ ಸಾಧ್ಯತೆ ಎಂದು ಹೇಳಲಾಗುತ್ತಿದೆ.












Click it and Unblock the Notifications