ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಬ್ಬಾಳ ಫ್ಲೈಓವರ್‌ ಮೇಲೆ ಸರಕು ವಾಹನಗಳ ನಿರ್ಬಂಧದಿಂದ ಟ್ರಾಫಿಕ್ ನಿಯಂತ್ರಣ

|
Google Oneindia Kannada News

ಬೆಂಗಳೂರು, ನವೆಂಬರ್‌ 24: ಭಾರೀ ಟ್ರಾಫಿಕ್ ಜಾಮ್ ಉಂಟಾಗುವ ಸಿಲಿಕಾನ್ ಸಿಟಿಯ ಪ್ರಮುಖ ಪ್ರದೇಶಗಳಲ್ಲಿ ಏರ್‌ಪೋರ್ಟ್‌ ರಸ್ತೆಯು ಒಂದು. ಇಲ್ಲಿ ಒಮ್ಮೆ ಟ್ರಾಫಿಕ್ ಜಾಮ್ ಉಂಟಾದರೇ ಕನಿಷ್ಠ 20 ರಿಂದ 25 ನಿಮಿಷಗಳಾದರೂ ಬೇಕಾಗುತ್ತದೆ.

ಹೀಗಾಗಿ ಬೆಂಗಳೂರು ಸಂಚಾರ ಪೊಲೀಸರು ಹೊಸ ಯೋಜನೆ ಮಾಡಿದ್ದು, ಪ್ರತಿ ದಿನ ಬೆಳಗ್ಗೆ 8.30 ರಿಂದ 10.30ರವರೆಗೆ ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಕು ಸಾಗಣೆ ವಾಹನಗಳ ಸಂಚಾರವನ್ನು ನಿಷೇಧಿಸಿದ್ದರು. ಈ ಕ್ರಮವನ್ನು ಪ್ರಾಯೋಗಿಕವಾಗಿ ಒಂದು ತಿಂಗಳ ಮಟ್ಟಿಗೆ ಆದೇಶಿಸಲಾಗಿದೆ.

Bangalore Traffic : ಬೆಂಗಳೂರಿನ 10 ಪ್ರದೇಶಗಳಲ್ಲಿ ಟ್ರಾಫಿಕ್ ಕಡಿವಾಣಕ್ಕೆ ಸೂಚನೆBangalore Traffic : ಬೆಂಗಳೂರಿನ 10 ಪ್ರದೇಶಗಳಲ್ಲಿ ಟ್ರಾಫಿಕ್ ಕಡಿವಾಣಕ್ಕೆ ಸೂಚನೆ

ಈ ಕ್ರಮದಿಂದ ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಗಮನಾರ್ಹವಾಗಿ ನಿಯಂತ್ರಣವಾಗಿದೆ ಎಂದು ಬೆಂಗಳೂರು ಟ್ರಾಫಿಕ್ ವಿಶೇಷ ಪೊಲೀಸ್ ಆಯುಕ್ತ ಡಾ.ಎಂ.ಎ.ಸಲೀಂ ಮಾಹಿತಿ ಹಂಚಿಕೊಂಡಿದ್ದಾರೆ.

"ವಾಹನ ಚಾಲಕರು ಈ ಹಿಂದೆ ಎಸ್ಟೀಮ್ ಮಾಲ್‌ನಿಂದ ಹೆಬ್ಬಾಳ ಫ್ಲೈಓವರ್‌ಗೆ ತಲುಪಲು 20 ನಿಮಿಷಗಳನ್ನು ತೆಗೆದುಕೊಂಡರೆ, ಕೆಲವೊಮ್ಮೆ ಸುಮಾರು 25 ನಿಮಿಷಗಳನ್ನು ತೆಗೆದುಕೊಳ್ಳುತ್ತಿದ್ದರು. ಈಗ ಗೂಡ್ಸ್ ವಾಹನಗಳ ಮೇಲೆ ನಿರ್ಬಂಧ ವಿಧಿಸಿದ ನಂತರ ಪ್ರಯಾಣದ ಸಮಯವು ಆರರಿಂದ ಎಂಟು ನಿಮಿಷಗಳಿಗೆ ಇಳಿದಿದೆ" ಎಂದು ಟ್ವೀಟ್ ಮಾಡಿದ್ದಾರೆ.

Bengaluru Traffic Police restricted goods vehicles on Airport Road

ಸಂಚಾರ ದಟ್ಟಣೆ ಗಮನಾರ್ಹವಾಗಿ ಕಡಿಮೆಯಾಗಿದೆ ಎಂದಿರುವ ಅವರು ಪ್ರತಿನಿತ್ಯ ಹೆಬ್ಬಾಳ ಮೇಲ್ಸೇತುವೆಗೆ ಭೇಟಿ ನೀಡಿ ಜನಸಂದಣಿ ಇರುವ ಸಮಯದಲ್ಲಿ ವಾಹನಗಳ ಓಡಾಟವನ್ನು ಪರಿಶೀಲಿಸುತ್ತಿದ್ದಾರೆ. ಇನ್ನು, ಅಗತ್ಯವಿದ್ದರೇ ಒಂದು ತಿಂಗಳು ವಿಧಿಸಿರುವ ನಿರ್ಬಂಧವನ್ನು ಮತ್ತಷ್ಟು ವಿಸ್ತರಣೆ ಮಾಡುವ ಬಗ್ಗೆಯೂ ಯೋಚಿಸುವುದಾಗಿ ತಿಳಿಸಿದ್ದಾರೆ.

ಕಳೆದ ವಾರ ಸಂಚಾರಿ ಪೊಲೀಸರು ಸಾದಹಳ್ಳಿ ಗೇಟ್‌ನಿಂದ ಹೆಬ್ಬಾಳದ ನಡುವೆ ಬೆಳಗ್ಗೆ ಬೆಳಗ್ಗೆ 8.30 ರಿಂದ 10.30ರ ವರೆಗೆ ಎಲ್ಲಾ ರೀತಿಯ ಸರಕು ಸಾಗಾಟ ವಾಹನಗಳನ್ನು ನಿಷೇಧಿಸಿರುವ ಕುರಿತು ಆದೇಶ ಹೊರಡಿಸಿದ್ದರು.

ಇತ್ತಿಚೆಗೆ ಬೆಂಗಳೂರಿನ 10 ಪ್ರಮುಖ ಪ್ರದೇಶಗಳಲ್ಲಿ ಟ್ರಾಫಿಕ್ ಜಾಮ್‌ಗೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

English summary
Bengaluru Traffic Police restricted all types of goods vehicles on Airport Road in peak hours between 8.30 am and 10.30 am every day. know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X