ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಟ್ರಾಫಿಕ್ ರಿಪೋರ್ಟ್; ಬೆಚ್ಚಿ ಬೀಳಿಸುವ ಸಂಗತಿಗಳು..!

|
Google Oneindia Kannada News

ಬೆಂಗಳೂರು, ಜನವರಿ 16 : ರಾಷ್ಟ್ರದಲ್ಲೇ ಬೆಂಗಳೂರು ಪೊಲೀಸ್ ಕಾರ್ಯದಕ್ಷತೆಗೆ ಹೆಸರುವಾಸಿಯಾಗಿದ್ದಾರೆ. 1 ಕೋಟಿಗೂ ಹೆಚ್ಚು ಜನಸಸಂಖ್ಯೆ ಹೊಂದಿರುವ ಬೆಂಗಳೂರು ಮಹಾನಗರದ ಜನತೆಯ ರಕ್ಷಣೆಗೆ ಹಗಲಿರುಳು ಎನ್ನದೇ ಶ್ರಮಿಸುತ್ತಿದ್ದಾರೆ.

ಬೆಂಗಳೂರು ಎಂದಾಗ ಎಲ್ಲರ ಕಣ್ಣ ಮುಂದೆ ಬರುವುದು ಇಲ್ಲಿನ ಸಂಚಾರ ಸಮಸ್ಯೆ. ಕಳೆದ ಐದಾರು ವರ್ಷಗಳ ಹಿಂದೆ ವಿಪರೀತ ಟ್ರಾಫಿಕ್ ಸಮಸ್ಯೆ ಜನರನ್ನು ಕಾಡುತ್ತಿತ್ತು. ನಮ್ಮ ಮೆಟ್ರೋ ಹಾಗೂ ಬಿ-ಟ್ರ್ಯಾಕ್ ಯೋಜನೆ ಬಂದ ಮೇಲೆ ಟ್ರಾಫಿಕ್ ಸಮಸ್ಯೆ ತಕ್ಕಮಟ್ಟಿಗೆ ತಹಬದಿಗೆ ಬಂದಿದೆ. ಬೆಂಗಳೂರಿನ ಪ್ರಮಖ ಸಮಸ್ಯೆಯಾಗಿರುವ ಟ್ರಾಫಿಕ್ ಸಮಸ್ಯೆಯನ್ನು ಬಗೆಹರಿಸುವುದರ ಜೊತೆಗೆ ಇಲ್ಲಿನ ಸಂಚಾರ ಪೊಲೀಸರು ಟ್ರಾಫಿಕ್ ಸಂಬಂಧಿ ಅಂಕಿ-ಅಂಶಗಳನ್ನು ಸಮರ್ಥವಾಗಿ ಸಂಗ್ರಹಿಸಿ, ಅವುಗಳನ್ನು ಸಾರ್ವಜನಿಕರಿಗೆ ನೀಡಿ, ಅದರ ಮೂಲಕ ಸಂಚಾರ ಸುರಕ್ಷತೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.

ಜಯದೇವಾ ಮೇಲ್ಸೇತುವೆ ನೆಲಸಮ ಕಾರ್ಯಾರಂಭ: ವಾಹನ ಸವಾರರಿಗೆ ತೀವ್ರ ಅಡಚಣೆಜಯದೇವಾ ಮೇಲ್ಸೇತುವೆ ನೆಲಸಮ ಕಾರ್ಯಾರಂಭ: ವಾಹನ ಸವಾರರಿಗೆ ತೀವ್ರ ಅಡಚಣೆ

ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ 2019 ರ ರಸ್ತೆ ಅಪಘಾತಗಳ ಬಗೆಗಿನ ಅಂಕಿ ಅಂಶಗಳ ಪ್ರಕಾರ ಕೆಲವೊಂದು ಆಘಾತಕಾರಿ ಸಂಗತಿಗಳು ಇಲ್ಲಿವೆ...

ನಡೆದ ರಸ್ತೆ ಅಪಘಾತಗಳೆಷ್ಟು?

ನಡೆದ ರಸ್ತೆ ಅಪಘಾತಗಳೆಷ್ಟು?

ಬೆಂಗಳೂರು ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ 2019 ರ ಅಂಕಿ ಅಂಶಗಳ ಪ್ರಕಾರ, ಬೆಂಗಳೂರಿನಲ್ಲಿ 2018 ಕ್ಕಿಂತಲೂ ಹೆಚ್ಚು ರಸ್ತೆ ಅಪಘಾತಗಳು 2019 ರಲ್ಲಿ ನಡೆದಿವೆ. 2019 ರಲ್ಲಿ 4688 ಅಪಘಾತಗಳು ನಡೆದರೆ, 2018 ರಲ್ಲಿ 4611 ಅಪಘಾತಗಳು ಸಂಭವಿಸಿದ್ದವು. 2017 ರಲ್ಲಿ ಸಿಲಿಕಾನ್‌ ಸಿಟಿಯಲ್ಲಿ 5065 ಅಪಘಾತಗಳು ನಡೆದಿದ್ದವು.

ಮೃತಪಟ್ಟವರೆಷ್ಟು?

ಮೃತಪಟ್ಟವರೆಷ್ಟು?

2019 ರಲ್ಲಿ ನಡೆದ 4688 ರಸ್ತೆ ಅಪಘಾತ ಪ್ರಕರಣಗಳಲ್ಲಿ ಒಟ್ಟು 744 ಜನ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ. ಇದು 2018 ರಲ್ಲಿ ಮೃತಪಟ್ಟವರಿಗಿಂತಲೂ ಹೆಚ್ಚಿದೆ. ಅಂದರೆ, 2018 ರಲ್ಲಿ 663 ಜನ ಮೃತಪಟ್ಟಿದ್ದರು. 2017 ರಲ್ಲಿ 609 ಜನ ಮೃತಪಟ್ಟಿದ್ದರು. ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇದರಲ್ಲಿ ಬೈಕ್‌ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೇ ಹೆಚ್ಚಿಗೆ ಇದೆ. ಕಳೆದ ವರ್ಷ ಬೆಂಗಳೂರಿನಲ್ಲಿ 356 ಜನ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರೆ, 246 ಜನ ಪಾದಚಾರಿಗಳು ಮೃತಪಟ್ಟಿದ್ದರು.

ಒಂದ್ಕಾಲ್ದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದೋರ ಗತಿ ನೋಡಿ: ರಾಜಣ್ಣ ಗೇಲಿಒಂದ್ಕಾಲ್ದಲ್ಲಿ ಝೀರೋ ಟ್ರಾಫಿಕ್‌ನಲ್ಲಿ ಓಡಾಡಿದೋರ ಗತಿ ನೋಡಿ: ರಾಜಣ್ಣ ಗೇಲಿ

ಭಾನುವಾರವೇ ಹೆಚ್ಚು ಅಪಘಾತಗಳು!

ಭಾನುವಾರವೇ ಹೆಚ್ಚು ಅಪಘಾತಗಳು!

ಟ್ರಾಫಿಕ್ ಪೊಲೀಸರ 2019 ರ ವರದಿ, ಅಪಘಾತಗಳ ಬಗ್ಗೆ ಒಂದು ವಿಚಿತ್ರ ಸತ್ಯವನ್ನು ಬಹಿರಂಗ ಪಡಿಸಿದೆ. 2019 ರಲ್ಲಿ ನಡೆದ ಅಪಘಾತಗಳಲ್ಲಿ ಭಾನುವಾರವೇ ಹೆಚ್ಚು ಜನ ಮೃತಪಟ್ಟಿದ್ದಾರೆ. ಮೃತಪಟ್ಟ ಒಟ್ಟು 744 ಜನರಲ್ಲಿ ಭಾನುವಾರ 140 ಜನ ಮೃತಪಟ್ಟಿದ್ದಾರೆ. ಮಂಗಳವಾರ 126, ಬುಧವಾರ 105, ಶುಕ್ರವಾರ 97, ಗುರುವಾರ 95, ಶನಿವಾರ 94 ಹಾಗೂ ಸೋಮವಾರ 87 ಜನ ಮೃತಪಟ್ಟಿದ್ದಾರೆ. ಭಾನುವಾರ ಜನ ಹಾಗೂ ವಾಹನ ದಟ್ಟಣೆ ಬೆಂಗಳೂರಿನಲ್ಲಿ ಕಡಿಮೆ ಇರುವುದರಿಂದ ಕೆಲವರು ಅತಿ ವೇಗದಿಂದ ವಾಹನ ಚಲಾಯಿಸಲು ಹೋಗಿ ಸಾವು ತಂದುಕೊಂಡಿದ್ದಾರೆ ಎಂದು ವರದಿ ಹೇಳಿದೆ.

6 ಟು 9 ಡೇಂಜರಸ್ ಟೈಮ್

6 ಟು 9 ಡೇಂಜರಸ್ ಟೈಮ್

ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಮಾರಣಾಂತಿಕ ಅಪಘಾತಗಳು ಸಂಜೆ 6 ರಿಂದ 9 ರಲ್ಲಿಯೇ ಅಧಿಕವಾಗಿದ್ದವು. ಈ ವೇಳೆ 133 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದವು. ನಂತರದ ಸ್ಥಾನದಲ್ಲಿ ಮಧ್ಯರಾತ್ರಿ 12 ರಿಂದ ಬೆಳಿಗ್ಗೆ 6. ಈ ವೇಳೆ 128 ಸಾವು ಸಂಭವಿಸಿವೆ. ಸಂಜೆ ವೇಳೆ ವಾಹನ ಸವಾರರ ಮಾನಸಿಕ ಒತ್ತಡ ಹೆಚ್ಚಿರುವುದರಿಂದ ಅಜಾಗರೂಕರಾಗಿ ವಾಹನ ಚಲಾಯಿಸಿ ಮರಣ ತಂದುಕೊಳ್ಳುತ್ತಾರೆ ಎಂದು ವರದಿ ಹೇಳಿದೆ.

English summary
Bengaluru Traffic Police Released A Report On 2019 Road Accedents. It Shows, More Death in Accedents Year by Year In Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X