ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊರೊನಾ ಆತಂಕ: ಬೆಂಗಳೂರಿನ ಟ್ರಾಫಿಕ್ ಪೊಲೀಸರು ಧರಿಸಿದ್ರು ಮಾಸ್ಕ್‌

|
Google Oneindia Kannada News

ಬೆಂಗಳೂರು, ಮಾರ್ಚ್ 7: ಕೊರೊನಾ ಆತಂಕದಿಂದ ಬೆಂಗಳೂರು ಹೊರತಾಗಿಲ್ಲ. ಇದೀಗ ಎಂಥದ್ದೇ ಧೂಳು, ವಾಯುಮಾಲಿನ್ಯವಿದ್ದರೂ ಮಾಸ್ಕ್ ಧರಿಸದ ಟ್ರಾಫಿಕ್ ಪೊಲೀಸರು ಕೊರೊನಾ ಆತಂಕದಿಂದ ಮಾಸ್ಕ್ ಧರಿಸುವಂತಾಗಿದೆ.

ಟೆಕ್ಕಿಗೆ ಕೊರೊನಾ ವೈರಸ್ ಪತ್ತೆಯಾದಾಗಿನಿಂದ ಪೊಲೀಸರು ಯಾವುದೇ ಡ್ರಂಕ್ ಆ್ಯಂಡ್ ಡ್ರೈವ್ ಚೆಕ್ ಕೂಡ ಮಾಡಿರಲಿಲ್ಲ. ಡ್ರಂಕ್ ಆ್ಯಂಡ್ ಡ್ರೈವ್ ಚೆಕ್ ಮಾಡುವಾಗ ವಾಹನ ಸವಾರರ ಬಳಿ ತೀರ ಹತ್ತಿರಕ್ಕೆ ಹೋಗಿ ಚೆಕ್ ಮಾಡಬೇಕಾಗುತ್ತೆ. ಒಂದು ವೇಳೆ ಆ ವ್ಯಕ್ತಿಗೆ ಕೊರೊನಾ ಇದ್ದರೆ ಅದು ನಮಗೂ ಬರುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದರು.

mask

ಪ್ರತಿ ನಿತ್ಯ ನೂರಾರು ವಾಹನಗಳ ತಪಾಸಣೆ ಮಾಡಬೇಕಾಗುತ್ತದೆ. ಆ ವಾಹನದಲ್ಲಿರುವ ಒಬ್ಬರಿಗೆ ಕೊರೊನಾ ಇದ್ದರೂ ಸಾಕು ಅದು ಎಲ್ಲರನ್ನೂ ಆವರಿಸಿಕೊಳ್ಳುತ್ತದೆ. ಹೀಗಾಗಿ ಎಲ್ಲಾ ಟ್ಋಆಫಿಕ್ ಪೊಲೀಸರು ಮಾಸ್ಕ್ ಧರಿಸಲು ಆರಂಭಿಸಿದ್ದಾರೆ.

ಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ದಂತ ವೈದ್ಯನ ಹರಸಾಹಸಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ದಂತ ವೈದ್ಯನ ಹರಸಾಹಸ

ಈ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿಯಿಂದ ಮಾಸ್ಕ್ ಹಾಕಿಕೊಂಡು ಎಲ್ಲಾ ಟ್ರಾಫಿಕ್ ಪೊಲೀಸರು ಡಿಡಿ ಚೆಕ್ ಮಾಡಿದ್ದರು. ಮಾಸ್ಕ್ ಇದ್ದರು ಕೂಡ ಕೆಲವರು ವಾಹನ ಸವಾರರ ತೀರಾ ಹತ್ತಿರಕ್ಕೆ ಹೋಗೋಕೆ ಹಿಂದೇಟು ಹಾಕ್ತಿರೋದು ಕಂಡುಬಂತು.

ಅಲ್ಲದೆ ಹಿರಿಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ, ನಗರದಲ್ಲಿ ಕೆಲಸ ಮಾಡುವ ಎಲ್ಲಾ ಟ್ರಾಫಿಕ್ ಪೊಲೀಸರಿಗೂ ಇಲಾಖಾ ವತಿಯಿಂದ ಮಾಸ್ಕ್ ನೀಡುವಂತೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಹಿರಿಯ ಅಧಿಕಾರಿಗಳು, ಬೆಂಗಳೂರಿನಲ್ಲಿ ಡ್ರಂಕ್ ಆ್ಯಂಡ್ ಡ್ರೈವ್ ಚೆಕ್ ಮಾಡುವ ಎಲ್ಲಾ ಸಿಬ್ಬಂದಿಗೂ ಮಾಸ್ಕ್ ನೀಡಿದೆ.

English summary
Bengaluru Traffic Police Get Masks To Beat Coronavirus From Friday They are using Mask During Vehicle inspection.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X