ಬೆಂಗಳೂರು ಟ್ರಾಫಿಕ್: ವಾಹನ ಸವಾರರ ಪರಿಸ್ಥಿತಿ ಹೇಗಿದೆ?-ಟ್ರೆಂಡಿಂಗ್ ಟ್ವಿಟ್ಟರ್ ಪೋಸ್ಟ್‌ಗಳು ಇಲ್ಲಿವೆ
Bengaluru Traffic: ಬೆಂಗಳೂರು ಅಂದ್ರೆ ಮೊದಲು ನೆನಪಿಗೆ ಬರುವುದೇ ಟ್ರಾಫಿಕ್ ಜಾಮ್. ಅದರಲ್ಲೂ ಮಳೆ ಬಂತೆದರೆ ಒಂದು ಕಿ.ಲೋ. ಇರುವ ಮನೆಗೆ ತಲುಪುವುದೇ 3-4 ಆಗಿಬಿಡುತ್ತದೆ. ಈಗಾಗಲೇ ಭಾರೀ ಮಳೆಯಿಂದ ನಗರದ ಬಹುತೇಕ ಭಾಗಗಳಲ್ಲಿ ರಸ್ತೆಗಳೆಲ್ಲ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದ ಘಟನೆಗಳು ನಡೆದಿವೆ. ಈ ಬಗ್ಗೆ ಕೆಲವು ಉದ್ಯೋಗಿಗಳು ತಾವು ಮನೆಗೆ ತಲುಪುವ ಸಮಯಗಳ ಬಗ್ಗೆ ವಿವರಿಸಿದ್ದಾರೆ.
ರಾಜ್ಯಾದ್ಯಂತ ಮತ್ತೆ ಮಳೆರಾಯನ ಆರ್ಭಟ ಶುರುವಾಗಿದೆ. ಹಾಗೆಯೇ ರಾಜ್ಯ ರಾಜಧಾನಿ ಬೆಂಗಳೂರಿನ ಹಲವೆಡೆ ಭಾರೀ ಮಳೆಯಿಂದ ದೊಡ್ಡ ದೊಡ್ಡ ಅವಾಂತರಗಳೇ ಸೃಷ್ಟಿಯಾಗಿವೆ. ಮನೆ, ಕಟ್ಟಡಗಳು, ಅಪಾರ್ಟ್‌ಮೆಂಟ್‌ಗಳು, ವಾಹನಗಳು ಜಲಾವೃತವಾಗಿದ್ದು, ನಗರದ ಜನರ ರಕ್ಷಣೆಗಾಗಿ ರಕ್ಷಣಾ ಪಡೆಗಳು ಮುಂದಾಗಿವೆ. ಮತ್ತೊಂದೆಡೆ ಮುಂಜಾಗ್ರತಾ ಕ್ರಮವಾಗಿ ಐಟಿ-ಬಿಟಿ ಕಂಪನಿಗಳ ಉದ್ಯೋಗಿಗಳಿಗೆ ವರ್ಕ್ ಪ್ರಮ್ ಹೋಂ ನೀಡಲಾಗಿದೆ.

ಅಲ್ಲದೆ, ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇನ್ನು ಇಂದು (ಅಕ್ಟೋಬರ್ 23) ಮತ್ತೆ ನಗರದಲ್ಲಿ ಮಳೆರಾಯನ ಆರ್ಭಟ ಮುಂದುವರೆದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಬೀದಿ ಬದಿ ವ್ಯಾಪಾರಿಗಳ ಬದುಕು ಕಳೆದ ಒಂದು ವಾರದಿಂದಲೂ ಮೂರಾಬಟ್ಟೆಯಾಗಿದೆ.
ಟ್ರಾಫಿಕ್ ಜಾಮ್ ವಿಚಾರಕ್ಕೆ ಬಂದರೆ, ಪ್ರತಿ ನಿತ್ಯವೂ ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಂಡು ಕಚೇರಿ ಕೆಲಸಗಳಿಗೆ ತೆರಳುವ ಉದ್ಯೋಗಿಗಳು ಮನೆಯನ್ನು 2 ಗಂಟೆ ಮುಂಚಿತವಾಗಿ ಬಿಡುತ್ತಾರೆ. ಹಾಗೆಯೇ ಸಂಜೆ ಆಫಿಸ್‌ನಿಂದ ಎರಡು ಗಂಟೆ ಮುಂಚಿತವಾಗಿ ಬಿಟ್ಟರೂ ಸಹ ಮನೆಗೆ ತಲುಪುವುದೇ ಒಂದು ದೊಡ್ಡ ಸಾಧನೆಯಾ ಆಗಿರುತ್ತದೆ.
ಸಾಮಾನ್ಯ ದಿನಗಳಲ್ಲೇ ಮನೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡು ವಾಹನ ಸವಾರರು ಪರದಾಡುತ್ತಾರೆ. ಇನ್ನು ಮಳೆ ಬಂತೆಂದರೆ ಸಾಕು ಬೆಂಗಳೂರು ನಗರದ ಬಹುತೇಕ ಭಾಗಗಳಲ್ಲಿ ರಸ್ತೆಗಳು ಕೆರೆಯಂತಾಗಿ ಮಾರ್ಪಟ್ಟುಬಿಡುತ್ತವೆ. ಇಂತಹ ಸಂದರ್ಭದಲ್ಲಿ ವಾಹನ ಸವಾರರು ಟ್ರಾಫಿಕ್ ಜಂಜಾಟದಿಂದ ತಪ್ಪಿಸಿಕೊಂಡು ಮನೆಗೆ ತಲುಪುವುದೇ ಒಂದು ದೊಡ್ಡ ಸವಾಲಾಗಿರುತ್ತದೆ. ಅಂತಹ ಪರಿಸ್ಥಿತಿ ಇದೀಗ ನಗರದಲ್ಲಿ ನಿರ್ಮಾಣವಾಗಿದೆ.
ಹಾಗೆಯೇ ಇದೀಗ ಭಾರೀ ಮಳೆ ಹಿನ್ನೆಲೆ ಕೆಲವೆಡೆ ರಸ್ತೆಗಳು ಮುಂಚಿವೆ. ಇದರಿಂದ ಬೇರೆ ರಸ್ತೆಗಳ ಮೂಲಕ ಉದ್ಯೋಗಿಗಳು ಟ್ರಾಫಿಕ್‌ನಿಂದ ತಪ್ಪಿಸಿಕೊಂಡು ಮನೆಗೆ ಎಷ್ಟು ಗಂಟೆಗೆ ತಲುಪಬಹುದು ಎಂದು ಟ್ವಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಈ ಪೋಸ್ಟರ್‌ಗಳು ಭಾರೀ ಟ್ರೆಂಟ್ ಆಗುತ್ತಿವೆ.
"ನಾನು ನಿನ್ನನ್ನು ಸೋಲಿಸಿದೆ ಬ್ರೋ.. ನಾನು 2.3 ಕಿಲೋ ಮೀಟರ್ ಇರುವ ಮನೆಗೆ 1.5 ಗಂಟೆಗೆ ತಲುಪುತ್ತಿದ್ದೇನೆ. ಹೀಗೆ ನನ್ನ ಸ್ವಂತ ದಾಖಲೆಯನ್ನು ಮುರಿಯುತ್ತಲೇ ಇರುತ್ತೇನೆ. ಇನ್ನು ಈಗಿನ ಪ್ರರಿಸ್ಥಿತಿ ನೋಡಿದ್ರೆ, ಗಂಟೆಗೆ 1 ಕಿಲೋ ಮೀಟರ್ ಲೆಕ್ಕದಲ್ಲಿ ಗಾಡಿ ಓಡಿಸಬೇಕಾಗುತ್ತದೆ," ಎಂದು Gaurav Gupta ಎಂಬುವವರು ಟ್ವೀಟ್ ಮಾಡಿದ್ದಾರೆ.
I beat you bro.. when I reached home it was 1.5 hours and 2.3 kms. Every other day I keep on breaking my own record. Next targeting 1 km and 1 kmpl. pic.twitter.com/VOz3HgNliW
— Gaurav Gupta (@gg951x) October 23, 2024
"4 ಕಿಲೋ ಮೀಟರ್ ಗಾಡಿ ಓಡಿಸಲು 2.5 ಗಂಟೆ ತೆಗೆದುಕೊಂಡಿದ್ದೇನೆ. ಈ ವೇಗವನ್ನು ಯಾರು ಫಾಲೋ ಮಾಡಬೇಡಿ ಎಂದು ನಾನು ಪ್ರಾರ್ಥಿಸುತ್ತೇನೆ," ಎಂದು Arun Sivasubramanian ಎಂಬುವವ ಟ್ವೀಟ್ ಮಾಡಿದ್ದಾರೆ.
It's a win-win situation for the govt. Saved money by not planning. Now earning money on extra fuel burn.
— Peter Weyland Fan (Abolish Income Tax) (@WeylandInc) October 22, 2024
"ಈ ಟ್ರಾಫಿಕ್ ಜಂಜಾಟ ಸರ್ಕಾರಕ್ಕೆ ಒಂದು ರೀತಿಯಲ್ಲಿ ಒಳ್ಳೆಯದೇ ಆಗಿದೆ. ಇದರಿಂದ ಹಣ ಉಳಿಸಿದ್ದಾರೆ. ಹೇಗೆ ಅಂದರೆ ವಾಹಗಳು ಟ್ರಾಫಿಕ್‌ನಲ್ಲಿ ಆಗಾಗ ಗೇರ್ ಚೇಂಜ್ ಮಾಡುವಾಗ ಇಂಧನ ಜಾಸ್ತಿ ಎಳೆಯುತ್ತದೆ. ಇದರಿಂದ ಸರ್ಜಾರಕ್ಕೆ ಹೆಚ್ಚು ಹಣ ಗಳಿಸಲಿದೆ," ಎಂದು Peter Weyland Fan ಎಂಬುವವರು ಟ್ವೀಟ್ ಮಾಡಿದ್ದಾರೆ.
ಇನ್ನು ಬುಧವಾರ ಸಂಜೆ 4 ಗಂಟೆ ವೇಳೆಗೆ ಜಯನಗರ, ವಿಜಯನಗರ, ಡೈರಿ ವೃತ್ತ, ಹೆಬ್ಬಾಳ, ಕೋರಮಂಗಳ, ಬೆಳ್ಳಂದೂರು, ಬೇಗೂರು, ಸರ್ಜಾಪುರ, ಮಡಿವಾಳ, ಎಲೆಕ್ಟ್ರಾನಿಕ್ ಸಿಟಿ, ಚಾಮರಾಜಪೇಟೆ, ಲಾಲ್ ಬಾಗ್ ಮತ್ತು ಮೆಜೆಸ್ಟಿಕ್ ಸುತ್ತಮುತ್ತ, ಯಲಹಂಕ, ಯಲಹಂಕ ಚೌಡೇಶ್ವರಿ ವಾರ್ಡ್, ಎಚ್‌ಎಸ್‌ಆರ್ ಬಡಾವಣೆ, ಕೆಂಗೇರಿ, ಬಾಗಲಗುಂಟೆ, ವಿದ್ಯಾರಣ್ಯಪುರ, ಯಶವಂತಪುರ, ಬಸವನಗುಡಿ, ಗಾಂಧೀ ಬಜಾರ್, ಚಾಮರಾಜಪೇಟೆ ಸೇರಿದಂತೆ ನಗರದ ಎಲ್ಲ ಬಡಾವಣೆಗಳಲ್ಲಿ ಭಾರೀ ಮಳೆ ಸುರಿದಿದೆ.












Click it and Unblock the Notifications