ಬೆಂಗಳೂರಿನಲ್ಲಿ ಏಕಾಏಕಿ ಶೇ 18% ಟ್ರಾಫಿಕ್ ಜಾಮ್ ಹೆಚ್ಚಳ, ಕಾರಣವೇನು ?
ಬೆಂಗಳೂರಿನಲ್ಲಿ ಓಲಾ, ಉಬರ್ ಹಾಗೂ ರ‍್ಯಾಪಿಡೋಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಗಳು ನಡೆದಿವೆ. ಈ ನಡುವೆ ಕೇಂದ್ರ ಸರ್ಕಾರವು ಪೀಕ್ ಅವರ್‌ನಲ್ಲಿ ಟ್ಯಾಕ್ಸಿ ಸೇವೆಯ ದರವನ್ನು ದುಪ್ಪಟ್ಟು ಹೆಚ್ಚಳ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟಿದೆ. ಬೆಂಗಳೂರಿನಲ್ಲಿ ಕಳೆದ ಒಂದು ತಿಂಗಳ ಅವಧಿಯಿಂದಲೂ ಸಾಮಾನ್ಯಕ್ಕಿಂತ ಹೆಚ್ಚು ಟ್ರಾಫಿಕ್ ಜಾಮ್ ಆಗುತ್ತಿದ್ದು. ಇದಕ್ಕೆ ಬೈಕ್ ಟ್ಯಾಕ್ಸಿ ನಿಷೇಧವೇ ಕಾರಣ. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ನಿಷೇಧ ಮಾಡಿದ ಮೇಲೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಳವಾಗಿದೆ ಎಂದು ರ‍್ಯಾಪಿಡೋ ಸಹ ಹೇಳಿದೆ. ಆದರೆ, ಈ ವಾದವನ್ನು ಹಲವರು ವಿರೋಧಿಸಿದ್ದಾರೆ. ಬೈಕ್ ಟ್ಯಾಕ್ಸಿ ಸೇವೆ ಮತ್ತೆ ಜಾರಿ ಮಾಡಬೇಕು ಎನ್ನುವ ಕಾರಣಕ್ಕೆ ಸುಳ್ಳು ಹೇಳಿತ್ತಿದ್ದಾರೆ ಎಂದೂ ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಯನ್ನು ನಿಷೇಧ ಮಾಡಿದ ದಿನದಿಂದಲೂ ಬರೋಬ್ಬರಿ ಶೇ18% ಟ್ರಾಫಿಕ್ ಜಾಮ್ ಹೆಚ್ಚಳವಾಗಿದೆ. ಹೀಗಾಗಿ ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆ ಮುಂದುವರಿಸುವುದಕ್ಕೆ ಅವಕಾಶ ನೀಡಬೇಕು ಎಂದು ರ‍್ಯಾಪಿಡೋ ಸಂಸ್ಥೆ ಮನವಿ ಮಾಡಿದೆ. ಬೆಂಗಳೂರಿನಲ್ಲಿ ಈಗಾಗಲೇ ದಿನದಿಂದ ದಿನಕ್ಕೆ ಟ್ರಾಫಿಕ್ ಜಾಮ್ ಸಮಸ್ಯೆ ಹೆಚ್ಚಾಗುತ್ತಿದ್ದು. ಜನ ಪರದಾಡುವ ಪರಿಸ್ಥಿತಿ ಇದೆ. ಪೀಕ್ ಅವರ್‌ನಲ್ಲಿ ಮಾತ್ರವಲ್ಲ ಉಳಿದ ಸಮಯದಲ್ಲೂ ಟ್ರಾಫಿಕ್ ಜಾಮ್‌ಹೆಚ್ಚಳವಾಗುತ್ತಿದೆ. ಎಲ್ಲಾ ಸಾರಿಗೆಗಳ ಪ್ರಯಾಣ ದರವೂ ಹೆಚ್ಚಳವಾಗಿದೆ.

ಈ ಹಿಂದೆ ತಮಿಳುನಾಡು ಸರ್ಕಾರವು ಬೈಕ್ ಟ್ಯಾಕ್ಸಿ ನಿಷೇಧಿಸಿತ್ತು. ಆದರೆ ಈಗ ಅಲ್ಲಿ ಅನುಮತಿ ನೀಡಿದೆ. ಇನ್ನು ಕೇರಳದಲ್ಲೂ ಬೈಕ್ ಟ್ಯಾಕ್ಸಿ ಸೇವೆ ಇದೆ. ಬೆಂಗಳೂರಿನಲ್ಲಿ ಕೇವಲ ಎರಡು ಮೆಟ್ರೋ ಲೈನ್ ಇದೆ. ಹೀಗಾಗಿ, ಸಂಪರ್ಕಕ್ಕೆ ಬೈಕ್ ಟ್ಯಾಕ್ಸಿ ಮಾದರಿಯ ಸೇವೆ ಅವಶ್ಯಕ ಎಂದು ಕೋರ್ಟ್‌ನಲ್ಲಿ ಪ್ರತಿಪಾದಿಸಲಾಗಿದೆ.
ಓಲಾ ಮತ್ತು ಊಬರ್ ಇನ್ಮುಂದೆ ದುಬಾರಿ: ಕರ್ನಾಟಕವೂ ಸೇರಿದಂತೆ ದೇಶದಾದ್ಯಂತ ಓಲಾ ಹಾಗೂ ಊಬರ್ ಕ್ಯಾಬ್ ಪ್ರಯಾಣದ ಬೆಲೆ ದುಬಾರಿ ಆಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಕ್ಯಾಬ್ ಅಗ್ರಿಗೇಟರ್‌ಗಳು ಪೀಕ್ ಸಮಯದಲ್ಲಿ 2X (ಎರಡು ಪಟ್ಟು ಹೆಚ್ಚಳ) ಮೂಲ ದರಕ್ಕಿಂತ ಹೆಚ್ಚಾಗಿ ವಿಧಿಸುವುದಕ್ಕೆ ಅನುಮತಿ ನೀಡಿದೆ. ಸರ್ಕಾರವು ಉಬರ್, ಓಲಾ ಮತ್ತು ರಾಪಿಡೋದಂತಹ ಕ್ಯಾಬ್ ಅಗ್ರಿಗೇಟರ್‌ಗಳಿಗೆ ಪೀಕ್ ಸಮಯದಲ್ಲಿ ಮೂಲ ದರದ ಎರಡು ಪಟ್ಟು ವರೆಗೆ ವಿಧಿಸಲು ಅವಕಾಶ ಕೊಟ್ಟಿರುವುದರಿಂದ ಪ್ರಯಾಣಿಕರು ದುಬಾರಿ ಬೆಲೆ ತೆರೆಬೇಕಾಗಿದೆ.
ಇದಕ್ಕೂ ಮುಂಚೆ ಅಗ್ರಿಗೇಟರ್‌ಗಳು ಪೀಕ್ ಸಮಯದಲ್ಲಿ ಮೂಲ ದರದ ಮೇಲೆ 1.5 ಪಟ್ಟು ಸರ್ಜ್ ಬೆಲೆ ಅಥವಾ ಡೈನಾಮಿಕ್ ದರವಾಗಿ ವಿಧಿಸಬಹುದಿತ್ತು. ಇದೀಗ ಅದನ್ನು ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರದ ಪರಿಷ್ಕೃತ ಮೋಟಾರು ವಾಹನ ಅಗ್ರಿಗೇಟರ್ ಮಾರ್ಗಸೂಚಿಯಲ್ಲಿ ಈ ಬದಲಾವಣೆಗಳನ್ನು ಮಾಡಲಾಗಿದೆ. ಪೀಕ್ ಸಮಯದಲ್ಲಿ ಕ್ಯಾಬ್ ಅಗ್ರಿಗೇಟರ್‌ಗಳು 2X ಮೂಲ ದರವನ್ನು ವಿಧಿಸಲು ಸರ್ಕಾರ ಅನುಮತಿ ಕೊಟ್ಟಿದೆ. ಸಾರಿಗೆ ಮತ್ತು ಹೆದ್ದಾರಿಗಳು (MoRTH) ಪೀಕ್ ಅಲ್ಲದ ಸಮಯದಲ್ಲಿ, ಅಗ್ರಿಗೇಟರ್‌ಗಳು ಮೂಲ ದರದ ಕನಿಷ್ಠ 50 ಪ್ರತಿಶತವನ್ನು ವಿಧಿಸಬಹುದು ಎಂದು ಹೇಳಲಾಗಿದೆ. ಪ್ರಯಾಣದ ದೂರ 3 ಕಿಲೋಮೀಟರ್‌ಗಳಿಗಿಂತ ಕಡಿಮೆಯಿದ್ದರೆ ಹೊರತುಪಡಿಸಿ, ಯಾವುದೇ ಪ್ರಯಾಣಿಕರಿಗೆ ಡೆಡ್ ಮೈಲೇಜ್‌ಗೆ ಶುಲ್ಕ ವಿಧಿಸಲು ಅವಕಾಶ ಇಲ್ಲ ಎನ್ನಲಾಗಿದೆ.












Click it and Unblock the Notifications