ಮಾನವೀಯತೆ ಮೆರೆದ ಸೈನಿಕನ ಮೇಲೆ ಪೊಲೀಸಪ್ಪನ ದರ್ಪ
ಬೆಂಗಳೂರು, ಮಾ. 3 : ಮಳೆ ಪರಿಣಾಮ ಮಂಗಳವಾರ ಬೆಂಗಳೂರಿಗೆ ಟ್ರಾಫಿಕ್ ಜ್ವರ. ಇಂಥ ವೇಳೆ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದ ಆಂಬುಲೆನ್ಸ್ ಗೆ ಮಾಜಿ ಸೈನಿಕರೊಬ್ಬರು ಮಾನವೀಯತೆ ದೃಷ್ಟಿಯಿಂದ ಪೊಲೀಸರು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಸರಿಸಿ ದಾರಿ ಮಾಡಿಕೊಟ್ಟಿದ್ದಾರೆ. ಆದರೆ ಇದಕ್ಕೆ ಬದಲಾಗಿ ಅವರಿಗೆ ಸಿಕ್ಕಿದ್ದು ಪೊಲೀಸರ ಬೈಗುಳ!
ಹೌದು.. ಬ್ಯಾರಿಕೇಡ್ ಸರಿಸಿದ ಮಾಜಿ ಸೈನಿಕನ ಮೇಲೆ ಟ್ರಾಫಿಕ್ ಪೊಲೀಸ್ ದರ್ಪ ತೋರಿಸಿದ್ದಾರೆ. ಇದಕ್ಕೆ ಪೊಲೀಸ್ ಅಧಿಕಾರಿಗೆ ತಕ್ಕ ಬಹುಮಾನವೂ ದೊರೆತಿದೆ. ದರ್ಪ ತೋರಿಸಿದ್ದ ಗಂಗಣ್ಣ ಅವರನ್ನು ಅಮಾನತು ಮಾಡಲಾಗಿದೆ. [ಮಳೆ, ಸಂಚಾರದಟ್ಟಣೆಗೆ ತತ್ತರಿಸಿದ ಬೆಂಗಳೂರು]

ಆಂಬುಲೆನ್ಸ್ ಗೆ ತೆರಳಲು ಅನುವು ಮಾಡಿಕೊಟ್ಟಿದ್ದ ಮಾಜಿ ಸೈನಿಕ ನಾಗಪ್ಪ ಮೇಲೆ ಹಲ್ಲೆ ನಡೆಸಿದ್ದ ಟ್ರಾಫಿಕ್ ಎಸ್ಐ ಗಂಗಣ್ಣ ಅವರನ್ನು ಡಿಸಿಪಿ ಎಂಎನ್ ಬಿಆರ್ ಪ್ರಸಾದ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.[ಬೆಂಗಳೂರು : ಮಂಗಳವಾರ ಮುಂಜಾನೆಯ ಮಳೆಯ ಚಿತ್ರಗಳು]
ಬೆಂಗಳೂರಿನ ಕಾವೇರಿ ಜಂಕ್ಷನ್ ಬಳಿಯ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ವೇಳೆ ಆಂಬುಲೆನ್ಸ್ ಸುಮಾರು 30ನಿಮಿಷಗಳ ಕಾಲ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಂಡಿತ್ತು. ಆಯಂಬುಲೆನ್ಸ್ ನಲ್ಲಿ ರೋಗಿಯೊಬ್ಬರಿಗೆ ತುರ್ತಾಗಿ ರಕ್ತವನ್ನು ಸಾಗಿಸಲಾಗುತ್ತಿತ್ತು. ಈ ಸಂದರ್ಭ ಸೈಕಲ್ ನಲ್ಲಿ ಬರುತ್ತಿದ್ದ ಮಾಜಿ ಸೈನಿಕ ನಾಗಪ್ಪ ಬಳಿ ಆಂಬುಲೆನ್ಸ್ ಚಾಲಕ ರಸ್ತೆಗೆ ಅಡ್ಡಲಾಗಿ ಕಟ್ಟಿದ್ದ ಹಗ್ಗ ಮತ್ತು ಬ್ಯಾರಿಕೇಡ್ ಸರಿಸಲು ಮನವಿ ಮಾಡಿಕೊಂಡಿದ್ದಾರೆ.[ಹೆಬ್ಬಾಳ ಅಪಘಾತದಲ್ಲಿ ಮಡಿದ ಅರ್ಪಿತಾಗೆ ಅಶ್ರು ತರ್ಪಣ]

ಅದರಂತೆ ನಾಗಪ್ಪ ಟ್ರಾಫಿಕ್ ನಲ್ಲಿದ್ದ ಪೇದೆ ರಾಮಮೂರ್ತಿ ಅನುಮತಿ ಪಡೆದು ಹಗ್ಗ ಬಿಚ್ಚಿದ್ದಾರೆ. ಇದನ್ನು ಕಂಡ ಸದಾಶಿವನಗರ ಠಾಣೆಯ ಸಂಚಾರಿ ಎಸ್ಐ ಗಂಗಣ್ಣ ಅವರು ನಾಗಪ್ಪ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಪೊಲೀಸ್ ದೌರ್ಜನ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.












Click it and Unblock the Notifications